Chikkamagaluru ಸಿಎಂ ಆದ ಬಳಿಕ ಮೊದಲ ಬಾರಿ ಕಾಫಿನಾಡಿಗೆ ಬೊಮ್ಮಾಯಿ ಭೇಟಿ 

By Suvarna News  |  First Published Apr 19, 2022, 4:25 PM IST
  • ಆದಿಶಕ್ತಿ ಶೃಂಗೇರಿ  ಶಾರದಾಂಭೆ ದರ್ಶನ,  ಉಭಯ ಗುರು ಆರ್ಶೀವಾದ ಪಡೆದ ಸಿಎಂ
  • ಶಾರದಾಂಭೆ ದರ್ಶನ ಬಳಿಕ ಹರಿಹರಪುರ ಮಠಕ್ಕೆ ಭೇಟಿ
  • ಹರಿಹರಪುರ ಮಠದ ಮಹಾಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ 

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಏ.19): ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ (Basavaraj Bommai)  ಸಿಎಂ ಆದ ಬಳಿಕ ಮೊದಲ ಭಾರಿಗೆ  ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಆಗಮಿಸಿದ್ದರು.   ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಮೊದಲು ಶೃಂಗೇರಿಗೆ (Sringeri) ಆಗಮಿಸಿ ಶಾರದಾಂಬೆಯ ದರ್ಶನ (sringeri sharadamba temple) ಪಡೆದರು. ತದನಂತರ ಶೃಂಗೇರಿ ಉಭಯ ಗುರುಗಳ ಆರ್ಶೀವಾದವನ್ನು ಪಡೆದು ಹರಿಹರಪುರದಲ್ಲಿ ನಡೆಯುತ್ತಿರುವ ಮಹಾಕುಂಭಾಭೀಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾದರು. 

Tap to resize

Latest Videos

ಶೃಂಗೇರಿಯಲ್ಲಿ ಸಿಎಂ ಬಸರಾಜ್ ಬೊಮ್ಮಯಿ: ರಾಜಕೀಯ ಒತ್ತಡ, ರಾಜ್ಯದಲ್ಲಿ ನಡೆದ ಗಲಾಟೆ, ಪ್ರತಿಪಕ್ಷಗಳು ಟೀಕೆ, ಪ್ರತಿಭಟನೆ ನಡುವೆಯೂ ಸಿಎಂ ಬವಸರಾಜ್ ಬೊಮ್ಮಯಿ ಇಂದು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸವನ್ನು ಕೈಗೊಂಡಿದ್ದರು. ಬೆಂಗಳೂರಿನಿಂದ ನೇರವಾಗಿ ಶೃಂಗೇರಿ ಮೆಣಸೆ ಹೆಲಿಪ್ಯಾಡ್ ಗೆ ಆಗಮಿಸಿದರು. ಈ ಹಿಂದೆ 2 ಭಾರೀ ಶೃಂಗೇರಿ ಪ್ರವಾಸ ನಿಗದಿಯಾಗಿ ಕೊನೆಗಳಿಗೆಯಲ್ಲಿ ಆ ಕಾರ್ಯಕ್ರಮಗಳು ರದ್ದುಯಾಗಿತ್ತು.ಇಂದು ಬೆಳಿಗ್ಗೆ ಶೃಂಗೇರಿ ಆಗಮಿಸಿ ಶಾರದಾಂಭೆ ದರ್ಶನವನ್ನು ಪಡೆದರು ದೇವಸ್ಥಾನದಿಂದ ನೇರವಾಗಿ ಶೃಂಗೇರಿ ಗುರುಗಳ ನಿವಾಸಕ್ಕೆ ಸಿಎಂ ತೆರಳಿದರು. ಅಲ್ಲಿ ಶೃಂಗೇರಿ ಭಾರತೀತೀರ್ಥ ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದು ಜಗದ್ಗುರುಗಳ ಜೊತೆಗೆ ಕಾಲ  ಮಾತುಕತೆ ನಡೆಸಿದರು.

 

ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶ್ರೀಮಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್ ಇವರ ವತಿಯಿಂದ ಆಯೋಜಿಸಿರುವ ಮಹಾಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆನು. pic.twitter.com/8YIEluZ628

— Basavaraj S Bommai (@BSBommai)

 ನಾಡಿನ ಸುಭಿಕ್ಷೆಗಾಗಿ ಶಾರದಾಂಬೆಯಲ್ಲಿ ಪ್ರಾರ್ಥನೆ: ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಮುಖ್ಯಮಂತ್ರಿಯಾದ ಮೇಲೆ ಚಿಕ್ಕಮಗಳೂರಿಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ಈ ಹಿಂದೆ ಎರಡು ಬಾರಿ ಕಾರ್ಯಕ್ರಮ ಫಿಕ್ಸ್ ಆಗಿ, ಬರಲಾಗಿರಲಿಲ್ಲ ಈ ಬಾರಿ ಶಾರದಾಂಬೆಯ ದರ್ಶನ ಮಾಡಲು ಶೃಂಗೇರಿಗೆ ಬಂದಿದ್ದು ನಾಡಿನ ಸುಭಿಕ್ಷೆಗಾಗಿ  ಶಾರದಾಂಬೆಯ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

BJP Core Committee Meeting ಸಿದ್ಧರಾಮಯ್ಯ ವಿರುದ್ಧ BSY ಗುಡುಗು

ಹುಬ್ಬಳ್ಳಿ ಪ್ರಕರಣದಲ್ಲಿ ಯಾವ ಅಮಾಯಕನ ಬಂಧನ ಆಗಿಲ್ಲ: ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಯಾವ ಅಮಾಯಕರನ್ನೂ ಬಂಧಿಸಿಲ್ಲ. ಸಾಕ್ಷಿ ಆಧಾರದಮೇಲೆಯೇ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ಗಲಭೆ ಸಂಬಂಧ ಅಮಾಯಕರನ್ನು ಬಂಧಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಾಂಗ್ರೆಸ್ ಮುಖಂಡನೋರ್ವ ಪೊಲೀಸ್ ಅಧಿಕಾರಿ ವಾಹನದ ಮೇಲೇರಿ ಗಲಭೆಗೆ ಪ್ರಚೋದನೆ ನೀಡಿರುವ ಕುರಿತು ವೀಡಿಯೋವೊಂದು ವೈರಲ್ ಆಗಿರುವ ಕುರಿತು ಗಮನ ಸೆಳೆದಾಗ ಅದೆಲ್ಲವನ್ನೂ ಪೊಲೀಸರು ತನಿಖೆವೇಳೆ ಪರಿಗಣಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು. ಗಲಭೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ವ್ಯಾಖ್ಯಾನ ಮಾಡುತ್ತವೆ. ಆದರೆ ಜನ ಏನು ಹೇಳುತ್ತಾರೆ ಎನ್ನುವುದು ಬಹಳ ಮುಖ್ಯ. ವಿರೋಧ ಪಕ್ಷದವರಿಂದ ಬೇರೆ ಏನನ್ನಾದರೂ ನಿರೀಕ್ಷೆ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿದರು.ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ವ್ಯಾಖ್ಯಾನ ಮಾಡುವುದಾಗಲಿ, ಪ್ರತಿಕ್ರಿಯೆ ನೀಡುವುದಾಗಲಿ ಸರಿಯಲ್ಲ ಎಂದರು.

 

ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿ ಶಾರದಾಂಬೆಯ ದರ್ಶನ ಪಡೆದು ಶಂಕರಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜೀಗಳ ಆಶೀರ್ವಾದ ಪಡೆದುಕೊಂಡೆನು. pic.twitter.com/bPDWDlboYB

— Basavaraj S Bommai (@BSBommai)

ನಾನು ಯಾವುದರಲ್ಲೂ ಸಾಫ್ಟ್ ಕಾರ್ನರ್ ತೋರಿಲ್ಲ‌,ಖಡಕ್ ಅಂದ್ರೆ ಏನು?: ಮುಖ್ಯಮಂತ್ರಿಗಳು ಎಲ್ಲಾ ವಿಷಯದಲ್ಲೂ ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಅಭಿಪ್ರಾಯಗಳಿರುವ ಕುರಿತು ಉತ್ತರಿಸಿದ ಅವರು, ಖಡಕ್ ನಿರ್ಧಾರ ಎಂದರೇನು? ಸಂತೋಷ್ ಆತ್ಮಹತ್ಯೆ ವಿಚಾರದಲ್ಲಿ ತಕ್ಷಣ ಎಫ್‌ಐಆರ್ ಹಾಕಿ ತನಿಖೆ ನಡೆಸಲಾಗುತ್ತಿದೆ. ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ನಡೆದ ಹಣ್ಣಿನಂಗಡಿ ಪ್ರಕರಣಕ್ಕೂ ಕ್ರಮ ತೆಗೆದುಕೊಂಡಿದ್ದೇವೆ ಯಾವುದೂ ವಿಳಂಭವಿಲ್ಲ. ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರರಿಗೆ ಆರ್ಥಿಕ ನೆರವು MINISTER S ANGARA

ಸಿಎಂ ಅನ್ನು ಅಣಕಿಸುವ ಬ್ಯಾನರ್‌ಗಳನ್ನು ಹಾಕಿ ಸ್ವಾಗತ ! 
ಶೃಂಗೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಸ್ಥಳೀಯರು ಇದು ಆಸ್ಪತ್ರೆ ಇಲ್ಲದ ಊರು ನಿಧಾನವಾಗಿ ಚಲಿಸಿ ಎಂದು ಅಣಕಿಸುವ ಬ್ಯಾನರ್‌ಗಳನ್ನು ಹಾಕಿ ಸ್ವಾಗತಿಸಿದರು.೧೫ ವರ್ಷಗಳಿಂದ ಆಸ್ಪತ್ರೆಗಾಗಿ ಹೋರಾಡುತ್ತಿದ್ದರೂ ಬರೇ ಭರವಸೆ ನೀಡಿ ಸರ್ಕಾರ ಮಾತು ತಪ್ಪುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಹೆಲಿಪ್ಯಾಡ್ ನಲ್ಲಿ ಮುಖ್ಯಮಂತ್ರಿಗಳಿಗೆ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿದ ಬಳಿಕ‌ ಶೃಂಗೇರಿಯಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಾಗೂ ಇಲಾಖೆಯಿಂದ ಮಂಜೂರಾತಿ ಮಾಡಿಸುವುದು ನಮ್ಮ ಕೆಲಸ, ಜಾಗ ಸಿಕ್ಕ ಕೂಡಲೇ ಕಾಮಗಾರಿಯನ್ನೂ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಭರವಸೆ ನೀಡಿದರು.

ಜಾಗದ ಸಮಸ್ಯೆ ಬಗೆರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಆದಷ್ಟು ಬೇಗ ಅದಕ್ಕೆ ಮಂಜೂರಾತಿಯನ್ನೂ ಕೊಡುತ್ತೇವೆ ಎಂದರು.ಈ ವೇಳೆ ಸ್ಥಳೀಯರು ಅಕ್ಕೊಂದು ಸಮಯ ನಿಗಧಿಪಡಿಸಿ ಯಾವಾಗ ಕಾಮಗಾರಿ ಆರಂಭಿಸುತ್ತಿರಿ ಎನ್ನುವುದನ್ನು ತಿಳಿಸಿ ಎಂದು ಒತ್ತಾಯಿಸಿದಾಗ ಮುಖ್ಯಮಂತ್ರಿಯಾಗಿ ಆಶ್ವಾಸನೆ ಕೊಡುತ್ತಿದ್ದೇವೆ. ಸಮಯ ಹೇಳಲು ಆಗವುದಿಲ್ಲ. ಜಾಗ ಸಿಗುವ ಮುನ್ನವೇ ಅನುದಾನ ಮಂಜೂರು ಮಾಡಲು ನಾವು ಸಿದ್ಧರಿದ್ದೇವೆ. ಆದೆ ಜಾಗ ಸಿಕ್ಕ ನಂತರ ಕೆಲಸ ಮಾಡಿಸುತ್ತೇವೆ ಎಂದರು. ಶೃಂಗೇರಿಯಿಂದ ಮುಖ್ಯಮಂತ್ರಿಗಳು ನೇರವಾಗಿ ಹೆಲಿಕ್ಯಾಪ್ಟರ್ ಮೂಲಕ ಹರಿಹರಪುರದಲ್ಲಿ ನಡೆಯುತ್ತಿರುವ ಮಹಾ ಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಜೊತೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಇದ್ದರು.

click me!