ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.19): ಮಲೆನಾಡಿನ ಕೊಪ್ಪದ ಹರಿಹರಪುರದಲ್ಲಿ (hariharapura ) ಕಳೆದ 10ರಿಂದ ಸಂಭ್ರಮವೂ ಸಂಭ್ರಮ. ಧಾರ್ಮಿಕ ಕಾರ್ಯಕ್ರದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ಕೂ ಶ್ರೀ ಮಠ ಸಾಕ್ಷಿ ಆಗುತ್ತಿದೆ. ಇಲ್ಲಿನ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ (Sri Swayam Prakasha Sachidananda SaraswathiSwamiji ) ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ವೈಭವ್ಯದಿಂದ ನಡೆಯುತ್ತಿದೆ. ಮಹಾಕುಂಭಾಭೀಷೇಕದ ಬಳಿಕ ಕೋಟಿ ಕುಂಕುಮಾರ್ಚನೆಯೂ ಶ್ರೀ ಮಠದಲ್ಲಿ ಶದ್ದಾ ಭಕ್ತಿಯಿಂದ ನಡೆಯಿತು.
undefined
ಶ್ರೀ ಮಠದಲ್ಲಿ ಪುರೋಹಿತರ ಸಮ್ಮುಖದಲ್ಲಿ 1000 ಮಹಿಳೆಯರಿಂದ ಕೋಟಿ ಕುಂಕುಮಾರ್ಚನೆ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿ ಸಂಭ್ರದ ವಾತಾವರಣ ನಿರ್ಮಾಣವಾಗಿದೆ. ಹರಿಹರಪುರ ಶ್ರೀ ಮಠದಲ್ಲಿ ಅದ್ದೂರಿಯಾಗಿ ಮಹಾಕುಂಭಾಭಿಷೇಕದ ಅಂಗವಾಗಿ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಏಪ್ರೀಲ್ 10ರಿಂದ 24ರ ವರೆಗೂ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುಲಿದೆ. ಲೋಕಕಲ್ಯಾಣ ಕಾರ್ಯಕ್ರಮದಲ್ಲಿ ಭಕ್ತರ ಶದ್ಧಾ ಭಕ್ತಿ, ಸಡಗರ,ಸಂಭ್ರಮ ಎಲ್ಲೆ ಮೀರಿದೆ. ಹೌದು ಕಳೆದ 12 ವರ್ಷಗಳ ಹಿಂದೆ ಶಾರದಾ ಪರಮೇಶ್ವರಿ , ಲಕ್ಷ್ಮಿ ನರಸಿಂಹ, ಆಂಜನೇಯ ದೇವಾಲಯ ಪುನರ್ ನಿರ್ಮಾಣದ ಕಾರ್ಯ ಸಂಪನ್ನವಾಗಿತ್ತು.
ಯಾತ್ರಿ ನಿವಾಸಕ್ಕೆ ಕೊಟ್ಟ ಅನುದಾನ ಬಳಕೆ ಮಾಡೋಕೆ ಬಿಡ್ತಿಲ್ಲ DINGALESHWARA SWAMIJI
ದೇವಸ್ಥಾನಗಳ ಪುನರ್ ಪ್ರತಿಷ್ಠಾನದ ಅಂಗವಾಗಿ ಹರಿಹರಪುರ ಶ್ರೀ ಮಠದಲ್ಲಿ ಮಹಾಕುಂಭಾಭಿಷೇಕವು ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠದಲ್ಲಿ ವೈಭವದಿಂದ ನಡೆದಿದೆ.ಇ ದೀಗ ಹರಿಹರಪುರ ಮಠದ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕುಂಭಾಭಿಷೇಕದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಇದೇ ತಿಂಗಳು 10ರಿಂದ ನಿತ್ಯವೂ ಹೋಮ ಹವನಗಳು ನಡೆಯುತ್ತಿದ್ದು ಇದೇ ತಿಂಗಳು 24ರಂದು ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮವೂ ಸಂಪನ್ನವಾಗಲಿದೆ. ಇಂದು ಕೋಟಿ ಕುಂಕುಮಾರ್ಚನೆ ನಡೆಯಿತು. ಶಾರದಾ ಲಕ್ಷ್ಮಿನರಸಿಂಹ ದೇವರ ಸಮ್ಮುಖದಲ್ಲಿ 1000ಕ್ಕೂ ಹೆಚ್ಚು ಮಹಿಳೆಯರು ಪುರೋಹಿತರು,ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಕುಂಕುಮಾರ್ಚನೆ ಮಾಡಿದ್ರು.
Chikkamagaluru ಕಾಂಗ್ರೆಸ್ ,ಬಿಜೆಪಿ ವಿರುದ್ದ ಗುಡುಗಿದ HDK
ಕೋಟಿ ಕುಂಕುಮಾರ್ಚನೆಯಲ್ಲಿ ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಭಾಗಿ: ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಬ್ರಹ್ಮ ಕುಂಭಾಭೀಷೇಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕೋಟಿ ಕುಂಕುಮಾರ್ಚನೆಯಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ( shobha karandlaje) ಭಾಗವಹಿಸಿದರು. ಭಕ್ತರ ಸಾಲಿನಲ್ಲಿ ಕುಳಿತು ಕೋಟಿ ಕುಂಕುಮಾರ್ಚನೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದರು.
ತದನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ಆದಿ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಸಂಚರಿಸುವ ಮೂಲಕ ದೇಶದಲ್ಲಿ ಏಕತೆ ಮೂಡಿಸುವಲ್ಲಿ ಅತಿದೊಡ್ಡ ಕೆಲಸ ಮಾಡಿದರು. ಅದೇ ಪರಂಪರೆಯಲ್ಲಿ ಹರಿಹರಪುರ ಶ್ರೀಮಠದ ಸ್ವಾಮೀಜಿಗಳು ದೇಶದ ಎಲ್ಲಾ ಜಾತಿ-ಭಾಷೆ-ಪ್ರದೇಶಗಳ ಜನರನ್ನು ಸೇರಿಸಿ ಕೋಟಿ ಕುಂಕುಮಾರ್ಚನೆ ಮಾಡಿಸುವ ಮೂಲಕ ಏಕತೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದೂ ಸಮಾಜದ ಎಲ್ಲಾ ಸಂಪ್ರದಾಯಗಳು ಉಳಿದಿರುವುದೇ ಮಹಿಳೆಯರಿಂದ. ಇಂದು ಕೋಟಿ ಕುಂಕುಮಾರ್ಚನೆಯಲ್ಲಿ ಮಾತೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಪರಂಪರೆ ಮುಂದುವರೆಸಲು ನಾವು ಸದಾ ಸಿದ್ಧ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.