ಮೇಯುತ್ತಿದ್ದಾಗಲೇ ಹುಲಿ ದಾಳಿ: ಅಸುನೀಗಿದ ಹಸು

Published : Oct 31, 2019, 01:58 PM IST
ಮೇಯುತ್ತಿದ್ದಾಗಲೇ ಹುಲಿ ದಾಳಿ: ಅಸುನೀಗಿದ ಹಸು

ಸಾರಾಂಶ

ರಾಜ್ಯದ ಹಲವು ಗ್ರಾಮಗಳಲ್ಲಿ ಹುಲಿ, ಚಿರತೆ ಕಾಟ ಮಿತಿ ಮೀರಿದ್ದು, ಹಸು, ಕುರಿ, ಮೇಕೆಗಳು ಚಿರತೆ, ಹುಲಿ ದಾಳಗೆ ಒಳಗಾಗುತ್ತಿವೆ. ಇತ್ತೀಚೆಗಷ್ಟೇ ಗುಂಡ್ಲುಪೇಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದ್ದು, ಇನ್ನು ಹಲವು ಕಡೆ ಕಾಡು ಪ್ರಾಣಿ ಗಳ ಹಾವಳಿ ಮಿತಿ ಮೀರಿದೆ. ಹುಲಿ ದಾಳಿ ಮಾಡಿ ಹಸು ಸಾವನ್ನಪ್ಪಿದ ಘಟನೆ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ನಡೆದಿದೆ.

ಚಾಮರಾಜನಗರ(ಅ.31): ರಾಜ್ಯದ ಹಲವು ಗ್ರಾಮಗಳಲ್ಲಿ ಹುಲಿ, ಚಿರತೆ ಕಾಟ ಮಿತಿ ಮೀರಿದ್ದು, ಹಸು, ಕುರಿ, ಮೇಕೆಗಳು ಚಿರತೆ, ಹುಲಿ ದಾಳಗೆ ಒಳಗಾಗುತ್ತಿವೆ. ಇತ್ತೀಚೆಗಷ್ಟೇ ಗುಂಡ್ಲುಪೇಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದ್ದು, ಇನ್ನು ಹಲವು ಕಡೆ ಕಾಡು ಪ್ರಾಣಿ ಗಳ ಹಾವಳಿ ಮಿತಿ ಮೀರಿದೆ.

ಹುಲಿ ದಾಳಿ ಮಾಡಿ ಹಸು ಸಾವನ್ನಪ್ಪಿದ ಘಟನೆ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ನಡೆದಿದೆ. ತಾಲೂಕಿನ ಕಾಡಂಚಿನ ಗ್ರಾಮವಾದ ಕಾಳಿಕಾಂಬ ಕಾಲೋನಿಯ ಜಮೀನಿನಲ್ಲಿ ಮೇಯುತ್ತಿದ್ದ ಹಸುನ ಮೇಲೆ ಮಂಗಳವಾರ ಸಂಜೆ 5.30ರ ಸಮಯದಲ್ಲಿ ದಾಳಿ ನಡೆಸಿ ಹಸುವಿನ ಅರ್ಧ ಭಾಗವನ್ನು ಹುಲಿ ತಿಂದು ಹಾಕಿದೆ. ಕಾಳಿಕಾಂಬ ಕಾಲೋನಿಯ ಪಕ್ಕದಲ್ಲಿ ಇರುವ ಕರಿಕಲ್ಲು ಕೊರೆಯ ಸಮೀಪದಲ್ಲಿ ಅಡಗಿದ್ದ ಹುಲಿ ಮೇಯಲು ತೆರಳಿದ್ದ ಮಹದೇವ ಎಂಬವರ ಹಸುವನ್ನು ತಿಂದು ಹಾಕಿದೆ.

ಚಿಕ್ಕಬಳ್ಳಾಪುರ: ಆಂಬ್ಯುಲೆನ್ಸ್ 108ರಲ್ಲಿ ದಾರಿ ಮಧ್ಯೆಯೇ ಹೆರಿಗೆ

ಒಂದು ತಿಂಗಳಿನಿಂದ ಗ್ರಾಮದಲ್ಲಿ ಸುಮಾರು 8 ರಾಸು ಹಸುಗಳನ್ನು ಕೊಂದು ಹಾಕಿದ್ದು, ಅರಣ್ಯ ಇಲಾಖೆಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಆರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಬಂದು ನೋಡುತ್ತಾರೆ. ನಂತರ ಸ್ಪಂದಿಸುತ್ತಿಲ್ಲ. ಈ ಭಾಗದಲ್ಲಿ ನಾವು ಎರಡು ಹುಲಿಗಳನ್ನು ನೋಡಿದ್ದೇವೆ. ರೈತರು ಜಮೀನಿನಲ್ಲಿ ಕೆಲಸ ಮಾಡಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಹುಲಿಯನ್ನು ಹಿಡಿಯಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಚಿರತೆ ಬೋನಿಗೆ, ದೂರಾಯ್ತು ಆತಂಕ

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!