ಭ್ರಷ್ಟಾಚಾರದ ಇನ್ನೊಂದು ರೂಪ ಕಾಂಗ್ರೆಸ್‌: ನಳಿನ್

Published : Oct 25, 2019, 08:47 AM IST
ಭ್ರಷ್ಟಾಚಾರದ ಇನ್ನೊಂದು ರೂಪ ಕಾಂಗ್ರೆಸ್‌: ನಳಿನ್

ಸಾರಾಂಶ

ಭ್ರಷ್ಟಾಚಾರದ ಇನ್ನೊಂದು ರೂಪ ಕಾಂಗ್ರೆಸ್‌ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲ. ಬಿಜೆಪಿ ಸಂಸದರ ಮೇಲೆ ಒಂದು ಭ್ರಷ್ಟಾಚಾರ ಆರೋಪವು ಇಲ್ಲ ಎಂದಿದ್ದಾರೆ.

ಚಾಮರಾಜನಗರ(ಅ.25):  2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರು ಇದುವರೆಗೂ ಒಂದು ಭ್ರಷ್ಟಾಚಾರ ಮಾಡಿಲ್ಲ. ಅವರು ಮಾಡಿರುವ ಮೂರು ಸಂಕಲ್ಪಗಳಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಅಂದರೆ ಭ್ರಷ್ಟಾಚಾರ ಮುಕ್ತ ಭಾರತ ಎಂದು ತಿಳಿದುಕೊಳ್ಳಬೇಕು. ಭ್ರಷ್ಟಾಚಾರದ ಇನ್ನೊಂದು ರೂಪ ಕಾಂಗ್ರೆಸ್‌ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ನಗರದ ನಂದಿ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಬಿಜೆಪಿ ರಾಜಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ್ದಾರೆ.

ಚಾಮರಾಜನಗರದಲ್ಲಿ ವ್ಯಕ್ತಿ ಶವ ಪತ್ತೆ: ಚಿರತೆ ದಾಳಿ ಶಂಕೆ

ಕಾಂಗ್ರೆಸ್‌ ಪಕ್ಷದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಸಾಕಷ್ಟುಪ್ರಮಾಣದಲ್ಲಿ ನಡೆದಿದ್ದವು. ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲ. ಬಿಜೆಪಿ ಸಂಸದರ ಮೇಲೆ ಒಂದು ಭ್ರಷ್ಟಾಚಾರ ಆರೋಪವು ಇಲ್ಲ ಎಂದಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸಂಸದರು, ಶಾಸಕರು, ಜಿಪಂ, ತಾಪಂ ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ. ಕೇಂದ್ರದಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲೂ ಅದ್ಬುತವಾಗಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಜನೋಪಯೋಗಿ ಯೋಜನೆಗಳನ್ನು ನೀಡುತ್ತಿದ್ದು, ದೇಶ ಪರಿವರ್ತನೆಯಾಗುತ್ತಿದೆ ಎಂದಿದ್ದಾರೆ.

ಚಾಮರಾಜನಗರ: ಪಂಜಿನ ಹಬ್ಬದ ಮೇಲೆ ಬಿತ್ತು ಕರಿನೆರಳು!

ಸಮಾರಂಭದಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್‌, ಶಾಸಕ ಸಿ.ಎಸ್‌. ನಿರಂಜನ್‌ ಕುಮಾರ್‌, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ, ರಾಜ್ಯ ಸಂಚಾಲಕ ಪಣೀಶ್‌, ವಿಭಾಗೀಯ ಪ್ರವರ್ತಕ ಮೈ.ವಿ. ರವಿಶಂಕರ್‌, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಜಿ.ಎನ್‌. ನಂಜುಂಡಸ್ವಾಮಿ, ಸಿ. ಗುರುಸ್ವಾಮಿ ಇದ್ದರು.

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!