ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಚಿರತೆ ಬೋನಿಗೆ, ದೂರಾಯ್ತು ಆತಂಕ

By Kannadaprabha NewsFirst Published Oct 27, 2019, 11:29 AM IST
Highlights

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಮೇಕೆ, ಕುರಿ ತಿಂದಿದ್ದ ಚಿರತೆ ಕೊನೆಗೂ ಬೋನಿಗೆ ಶನಿವಾರ ಮುಂಜಾನೆಯೇ ಬಿದ್ದಿದೆ. ಬಂಡೀಪುರ ಕಾಡಂಚಿನಲ್ಲಿ ಹುಲಿ, ಆನೆ ಕಾಟದಿಂದ ರೈತರು ಮತ್ತು ಅರಣ್ಯಾಧಿಕಾರಿಗಳು ಸುಧಾರಿಸಿಕೊಳ್ಳುವಷ್ಟರಲ್ಲಿ ಚಿರತೆ ಕಾಟ ಆರಂಭವಾಗಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಜನರ ಆತಂಕ ದೂರವಾಗಿದೆ.

ಚಾಮರಾಜನಗರ(ಅ.27): ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಮೇಕೆ, ಕುರಿ ತಿಂದಿದ್ದ ಚಿರತೆ ಕೊನೆಗೂ ಬೋನಿಗೆ ಶನಿವಾರ ಮುಂಜಾನೆಯೇ ಬಿದ್ದಿದೆ.

ಬಂಡೀಪುರ ಕಾಡಂಚಿನಲ್ಲಿ ಹುಲಿ, ಆನೆ ಕಾಟದಿಂದ ರೈತರು ಮತ್ತು ಅರಣ್ಯಾಧಿಕಾರಿಗಳು ಸುಧಾರಿಸಿಕೊಳ್ಳುವಷ್ಟರಲ್ಲಿ ಚಿರತೆ ಕಾಟ ಆರಂಭವಾಗಿತ್ತು. ಗ್ರಾಮದ ಚಿಕ್ಕಬೆಳ್ಳಶೆಟ್ಟಿಯ ತೋಟದ ಮನೆಯಲ್ಲಿ ಶುಕ್ರವಾರ ರಾತ್ರಿ ಒಂದು ಮೇಕೆ, ಒಂದು ಕುರಿಯನ್ನು ಚಿರತೆ ತಿಂದು ಹಾಕಿತ್ತು. ಅರಣ್ಯ ಇಲಾಖೆ ಶುಕ್ರವಾರ ಸಂಜೆ ಬೋನಿ ಇರಿಸಿತ್ತು. ಶನಿವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ ಎಂದು ಗುಂಡ್ಲುಪೇಟೆ ಬಫರ್‌ ಜೋನ್‌ ಅರಣ್ಯಾಧಿಕಾರಿ ಲೋಕೇಶ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

‘ಕ್ಯಾರ್‌’ ಚಂಡಮಾರುತಕ್ಕೆ 2ನೇ ದಿನವೂ ಕರಾವಳಿ ತತ್ತರ...

ಸುಮಾರು 3 ವರ್ಷದ ಗಂಡು ಚಿರತೆಯಾಗಿದೆ. ಎಸಿಎಫ್‌ ಕೆ.ಪರಮೇಶ್‌ ಸೂಚನೆ ಮೇರೆಗೆ ಬೋನಿಗೆ ಬಿದ್ದ ಚಿರತೆಯನ್ನು ಮೂಲೆಹೊಳೆಯ ಬಳಿಯ ಕೇರಳ ಗಡಿಯಲ್ಲಿ ಕಾಡಿಗೆ ಬಿಡಲಾಗಿದೆ. ಬನ್ನಿತಾಳಪುರ ಗ್ರಾಮದಲ್ಲಿ ಕುರಿ, ಮೇಕೆಯನ್ನು ಚಿರತೆ ಸಾಯಿಸಿದ ಮಾಹಿತಿ ಅರಿತು ಬೋನು ಇರಿಸಲಾಗಿತ್ತು. ಸದ್ಯ ಚಿರತೆ ಬೋನಿಗೆ ಬೀಳುವ ಮೂಲಕ ರೈತರಲ್ಲಿ ಆತಂಕ ದೂರವಾಗಿದೆ ಎಂದಿದ್ದಾರೆ.

ಚಾಮರಾಜನಗರದಲ್ಲಿ ವ್ಯಕ್ತಿ ಶವ ಪತ್ತೆ: ಚಿರತೆ ದಾಳಿ ಶಂಕೆ

ಬನ್ನಿತಾಳಪುರ ಗ್ರಾಮದ ತೋಟದ ಮನೆಯ ಬಳಿ ಇಡಲಾಗಿದ್ದ ಬೋನಿಗೆ ಬಿದ್ದ ಚಿರತೆಯನ್ನು ಮೂಲೆಹೊಳೆ ವಲಯದ ಮೂರ್‌ ಬಾಂದ್ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಎಎಸಿಎಫ್ ಕೆ. ಪರಮೇಶ್ ಹೇಳಿದ್ದಾರೆ.

click me!