ಚಾಮರಾಜನಗರ ಯುವಕನ ಸ್ಟೇಟಸ್ ಹುಚ್ಚಾಟ,ಇಂತವರ ಮೇಲೂ ಮಾಡ್ಬೇಕು ಸರ್ಜಿಕಲ್ ದಾಳಿ

Published : Feb 26, 2019, 09:42 PM ISTUpdated : Feb 26, 2019, 09:54 PM IST
ಚಾಮರಾಜನಗರ ಯುವಕನ ಸ್ಟೇಟಸ್ ಹುಚ್ಚಾಟ,ಇಂತವರ ಮೇಲೂ ಮಾಡ್ಬೇಕು ಸರ್ಜಿಕಲ್ ದಾಳಿ

ಸಾರಾಂಶ

ಪಾಕಿಸ್ತಾನ ಪರ ವಾಟ್ಸಾಪ್ ಸ್ಟೇಟಸ್...!ಮಹಮದ್ ನೌಷದ್ ಎಂಬ ಯುವಕನಿಂದ ದೇಶದ್ರೋಹಿ ದುಷ್ಕೃತ್ಯ! ಚಾಮರಾಜನಗರ ಜಿಲ್ಲೆ ಹನೂರು ತಾಲೊಕಿನ ಕೌದಳ್ಳಿ ಯುವಕ!

ಚಾಮರಾಜನಗರ, [ಫೆ.26]: ಪುಲ್ವಾಮಾ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ಭಾರತೀಯ ವಾಯುಸೇನೆ ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದೆ.

ಈ ಏರ್ ಸರ್ಜಿಕಲ್ ಸ್ಟ್ರೈಕ್ ಗೆ ಇಡೀ ದೇಶಾದ್ಯಂತ ಸಂಭ್ರಮಾಚರಣೆ ವ್ಯಕ್ತವಾಗುತ್ತಿದೆ. ಹೀಗಿರುವಾಗ ಚಾಮರಾಜನಗರ ಜಿಲ್ಲೆಯಲ್ಲಿ ಯುವಕನೊಬ್ಬ ಉದ್ಧಟತನ ಮೆರೆದಿದ್ದಾನೆ.

‘ಕಾಂಗ್ರೆಸ್ ಸಹ ಸರ್ಜಿಕಲ್ ದಾಳಿ ಮಾಡಿತ್ತು, ಆದ್ರೆ ಹೇಳಿಕೊಂಡಿರಲಿಲ್ಲ!‘

ಚಾಮರಾಜನಗರ ಜಿಲ್ಲೆ ಹನೂರು ತಾಲೊಕಿನ ಕೌದಳ್ಳಿ ಗ್ರಾಮದ ಮೊಹಮ್ಮದ್ ನೌಷದ್ ಎಂಬ ದೇಶದ್ರೋಹಿ, ಕಾದು ನೋಡಬೇಕು, ಭಾರತಕ್ಕೆ ಕೇಡುಗಾಲ ಪ್ರಾರಂಭವಾಗಿದ್ದು, ಪಾಕ್ ಪ್ರತೀಕಾರ ತೀರಿಸಲಿದೆ ಎಂಬ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.

ಇದರಿಂದ ಕೆರಳಿದ ಗ್ರಾಮಸ್ಥರು ಯುವಕನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!