ವಿಷ ಪ್ರಸಾದ ದುರಂತ: ವಿಷಜಂತುಗಳಿಗೆ 4 ದಿನ ಪೊಲೀಸ್ ಫುಲ್ ಡ್ರಿಲ್..!

Published : Dec 19, 2018, 10:35 PM IST
ವಿಷ ಪ್ರಸಾದ ದುರಂತ: ವಿಷಜಂತುಗಳಿಗೆ 4 ದಿನ ಪೊಲೀಸ್  ಫುಲ್ ಡ್ರಿಲ್..!

ಸಾರಾಂಶ

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಆರೋಪಿಗಳಿಗೆ 4 ದಿನ ಪೊಲೀಸ್ ಕಸ್ಟಡಿಗೆ.! ನಾಲ್ವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿ ಜಡ್ಜ್ ಆದೇಶ

ಚಾಮರಾಜನಗರ, [ಡಿ.19] : ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ತಗೆದುಕೊಳ್ಳುವಂತೆ ಕೋರ್ಟ್​ ಆದೇಶಿದೆ. 

ಪ್ರಕರಣ ಸಂಬಂಧ ಕೊಳ್ಳೇಗಾಲ ಪೊಲೀಸರು ಆರೋಪಿಗಳಾದ ಮಹದೇವ ಸ್ವಾಮಿಜಿ, ಅಂಬಿಕಾ, ಮಾದೇಶ್​, ದೊಡ್ಡಯ್ಯರನ್ನು ಇಂದು [ಬುಧವಾರ] ಜಿಲ್ಲೆಯ ಹೆಚ್ಚುವರಿ ಸಿವಿಲ್  ನ್ಯಾಯಾಧೀಶ ಶ್ರೀಕಾಂತ್​ ಅವರ ಮುಂದೆ ಹಾಜರು ಪಡಿಸಲಾಗಿತ್ತು. 

ಚಾಮರಾಜನಗರ: ವಿಷಪ್ರಾಶನದ ಹಿಂದಿತ್ತು ಕಾವಿಯ ಕಾಮದ ಕೈವಾಡ..!

ಎಂಎಲ್ ರಸ್ತೆಯಲ್ಲಿರುವ ನ್ಯಾಯಾಧೀಶ ಶ್ರೀಕಾಂತ್ ಅವರ ನಿವಾಸದಲ್ಲಿ ವಿಚಾರಣೆ ನಡೆದಿದ್ದು, ಹೆಚ್ಚಿನ ವಿಚಾರಣೆಗೆ ನಾಲ್ವರು ಆರೋಪಿಗಳನ್ನು 4 ದಿನ ಪೊಲೀಸರ ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. 

ಆರೋಪಿಗಳು
ಒಂದನೇ ಆರೋಪಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52)  
ಎರಡನೇ ಆರೋಪಿ ದೇವಸ್ಥಾನದ ಮ್ಯಾನೇಜರ್ ಪತ್ನಿ ಅಂಬಿಕಾ (35)  
ಮೂರನೇ ಆರೋಪಿ ದೇವಸ್ಥಾನದ ಮ್ಯಾನೇಜರ್ ಮಾದೇಶ್ (46)  
ನಾಲ್ಕನೇ ಆರೋಪಿ ನಾಗರಕಲ್ಲು ಅರ್ಚಕರಾದ ದೊಡ್ಡಯ್ಯ ತಂಬಡಿ (35)  

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!