ಚಾಮರಾಜನಗರ: ವಿಷಪ್ರಾಶನದ ಹಿಂದಿತ್ತು ಕಾವಿಯ ಕಾಮದ ಕೈವಾಡ..!

Published : Dec 19, 2018, 09:55 PM ISTUpdated : Dec 19, 2018, 09:57 PM IST
ಚಾಮರಾಜನಗರ: ವಿಷಪ್ರಾಶನದ ಹಿಂದಿತ್ತು ಕಾವಿಯ ಕಾಮದ ಕೈವಾಡ..!

ಸಾರಾಂಶ

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಪ್ರಸಾದ ವಿಷಪ್ರಾಶನದ ಹಿಂದಿತ್ತು ಕಾವಿಯ ಕಾಮದ ಕೈವಾಡ..! ವಿಷ ಜಂತು ಮಹದೇವಸ್ವಾಮಿ ಮಹಾ ರಸಿಕನಾ..? ಹಣವೂ ಬೇಕು.. ಹೆಣ್ಣಿನ ಸೆರಗೂ ಬೇಕು.. ಸ್ವಾಮೀಜಿಯ ಅತಿಯಾಸೆ ಬಗ್ಗೆ ಆ ಜನರು ಹೇಳೋದೇನು?

ಚಾಮರಾಜನಗರ, ]ಡಿ.19]: ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ್ದ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣದ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆದ್ರೆ, 15 ಮಂದಿ ಸಾವನ್ನಪ್ಪಿದ್ದು, ಇನ್ನೂ 20ಕ್ಕೂ ಹೆಚ್ಚು ಮಂದಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನು ವಿಷವಿಕ್ಕಿದ ಆರೋಪಿಗಳನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇವಳೇ ವಿಷ ಕನ್ಯೆ: ಅಂಬಿಕಾ ವಿಷ ಹಾಕಿದ್ದು?, ಯಾರು ಹೇಳಿದ್ದು?

 ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ , ವ್ಯವಸ್ಥಾಪಕ ಮಾದೇಶ, ಮಾದೇಶನ ಪತ್ನಿ ಅಂಬಿಕಾ ಹಾಗು  ನಾಗರಕೋಯಿಲ್ ಪೂಜಾರಿ ತಂಬಡಿ ದೊಡ್ಡಯ್ಯ ಎನ್ನುವರನ್ನು ಅರೆಸ್ಟ್ ಮಾಡಿದ್ದಾರೆ. 

 ಮಹದೇವಸ್ವಾಮಿಗೆ ಹಣವೂ ಬೇಕು.. ಹೆಣ್ಣಿನ ಸೆರಗೂ ಬೇಕು..

ಹೌದು..ಈ ಕೃತ್ಯಕ್ಕೆ ಕಾರಣವನ್ನು ನೋಡಿದರೆ ಅದರು ಅನೈತಿಕ ಸಂಬಂಧ ಅಂದ್ರೆ ನಂಬಲೇ ಬೇಕು.   ಇಮ್ಮಡಿ ಮಹದೇವಸ್ವಾಮಿಗೆ ಅಂಬಿಕಾ ಬೆಂಬಲ ನೀಡಲು ಕಾರಣ ಅನೈತಿಕ ಸಂಬಂಧ ಅಂತಿದ್ದಾರೆ ಪೊಲೀಸರು. 

ಮಹದೇವಸ್ವಾಮಿ ಹಾಗೂ ಅಂಬಿಕಾ ಇವರಿಬ್ಬರೂ ಒಂದೇ ಗ್ರಾಮದವರು. ಇಬ್ಬರಿಗೂ ಅನೈತಿಕ ಸಂಬಂಧವಿತ್ತು. ಆಕೆಗೆ ಭೋಗ್ಯಕ್ಕೆ ಮನೆ ಮಾಡಿಸಿಕೊಟ್ಟಿದ್ದ ಈ ಸ್ವಾಮಿ, ಆಕೆಯ ಗಂಡ ಮಾದೇಶನನ್ನು ದೇವಾಲಯದ ಮ್ಯಾನೇಜರ್ ಆಗಿ ನೇಮಿಸಿದ್ದ. 

ಅಷ್ಟೇ ಅಲ್ಲದೇ ಟ್ರಸ್ಟ್​ನ ಅಧ್ಯಕ್ಷ ಸ್ಥಾನಕ್ಕೆ ಕಣ್ಣು ಹಾಕಿದ್ದ ಸ್ವಾಮೀಜಿ, ಅಂಬಿಕಾ ಮತ್ತವಳ ಗಂಡ ಹಾಗೂ ಮತ್ತೊಬ್ಬ ದೊಡ್ಡಯ್ಯ ಎಂಬಾತನ ಸಹಾಯ ಪಡೆದು ಪ್ರಸಾದಕ್ಕೆ ವಿಷಪ್ರಾಶನ ಮಾಡಿಸಿದ್ದಾನೆ ಎಂದು ಸಾರ್ವಜನಿಕರ ಮಾತು.

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!