ಪರಿಸರ ರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಮೈಸೂರಿನ ರಾಜ ವಂಶಸ್ಥ ಯದುವೀರ್ ಒಡೆಯರ್ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ. ಬಂಡೀಪುರ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆಯ ಕುಂದಕೆರೆ ಅರಣ್ಯ ವಲಯದ ಕೊಡಸೋಗೆ ಜೆಎಸ್‌ಎಸ್ ಪ್ರೌಢಶಾಲೆಯ ಮಕ್ಕಳಿಗೆ ಆಯೋಜಿಸಿದ್ದ ಚಿನ್ನರ ವನದರ್ಶನ ಕಾರ್ಯಕ್ರಮಕ್ಕೆ ಅಕಸ್ಮಿಕವಾಗಿ ಆಗಮಿಸಿ ಮಾತನಾಡಿದ್ದಾರೆ.
ಚಾಮರಾಜನಗರ(ನ.09): ಪರಿಸರ ಕಾಪಾಡಬೇಕಾದ ಕೆಲಸ ಎಲ್ಲರದ್ದು ಎಂದು ಮೈಸೂರಿನ ರಾಜ ವಂಶಸ್ಥ ಯದುವೀರ್ ಒಡೆಯರ್ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ. ಗುಂಡ್ಲುಪೇಟೆಯ ಬಂಡೀಪುರ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆಯ ಕುಂದಕೆರೆ ಅರಣ್ಯ ವಲಯದ ಕೊಡಸೋಗೆ ಜೆಎಸ್‌ಎಸ್ ಪ್ರೌಢಶಾಲೆಯ ಮಕ್ಕಳಿಗೆ ಆಯೋಜಿಸಿದ್ದ ಚಿನ್ನರ ವನದರ್ಶನ ಕಾರ್ಯಕ್ರಮಕ್ಕೆ ಅಕಸ್ಮಿಕವಾಗಿ ಆಗಮಿಸಿ ಮಾತನಾಡಿದ್ದಾರೆ.
ಸರ್ಕಾರಿ ಸಾಮೂಹಿಕ ಮದುವೆಗೆ ಹಟ್ಟಿ ಗೋಲ್ಡ್ ಉಡುಗೊರೆ
ಅರಣ್ಯ, ಪರಿಸರ ಉಳಿಸಬೇಕಾದ ಅನಿವಾರ್ಯತೆ ಇದೆ. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಇಲಾಖೆಯೇ ಮಾಡು ತ್ತದೆ ಎಂದು ಕೂರುವ ಬದಲು ಎಲ್ಲರು ರಕ್ಷಿಸಿಬೇಕು. ಅರಣ್ಯ ಇಲಾಖೆಯ ಕುಂದಕೆರೆ ವಲಯ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಯದುವೀರ್ ಒಡೆಯರ್ ಬಹುಮಾನ ನೀಡಿದ್ದಾರೆ.
ಚಾಮರಾಜನಗರ: 2 ವರ್ಷಗಳಿಂದ ವೇತನ ಕೊಟ್ಟಿಲ್ಲ, ಸಿಬ್ಬಂದಿ ಪ್ರತಿಭಟನೆ
ನಂತರ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಯೊಂದಿಗೆ ಕ್ಯಾಂಪಸ್ ಮುಂದೆ ಫೋಟೋಗೆ ಪೋಸು ನೀಡಿ ಹೊರ ನಡೆದರು. ಕುಂದಕೆರೆ ಆರ್‌ಎಫ್‌ಒ ಮಂಜುನಾಥ್ ಪ್ರಸಾದ್ ಇದ್ದರು. ಯದುವೀರ್ ಒಡೆಯರ್ ಜೊತೆ ಸಹೋದರಿ ಸಫಾರಿ ನಡೆಸಿದ್ದಾರೆ.