UPSC Results 2020: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

By Suvarna News  |  First Published Sep 24, 2021, 7:56 PM IST

* ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ
* ಒಟ್ಟು 761 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು 
 * ಜನವರಿ 8 ರಿಂದ ಜನವರಿ 17 ರವರೆಗೆ ನಡೆಸಲಾಗಿದ್ದ ಮುಖ್ಯ ಲಿಖಿತ ಪರೀಕ್ಷೆ


ನವದೆಹಲಿ, (ಸೆ.24): ಕೇಂದ್ರ ಲೋಕಸೇವಾ ಆಯೋಗವು (UPSC) 2020ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಇಂದು (ಸೆ.24) ಪ್ರಕಟಿಸಿದೆ.

ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದ್ದು, ಈ ಪೈಕಿ 545 ಮಂದಿ ಪುರುಷರಾಗಿದ್ದರೆ, 216 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.

Latest Videos

undefined

ಕೋಚಿಂಗ್ ಗೆ ಲಕ್ಷಗಟ್ಟಲೇ ಖರ್ಚು ಮಾಡದೇ UPSC ಪಾಸ್ ಆಗಲು ಇಲ್ಲಿದೆ ಉತ್ತಮ ಸಲಹೆಗಳು

ಶುಭಮ್‌ ಕುಮಾರ್‌ ಅವರು ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ. ಜಾಗ್ರತಿ ಅವಸ್ತಿ  2 ಮತ್ತು ಅಂಕಿತಾ ಜೈನ್‌ ಎಂಬುವವರು 3ನೇ ರ್‍ಯಾಂಕ್‌ ಪಡೆದಿದ್ದಾರೆ. ಸಂಪೂರ್ಣ ಫಲಿತಾಂಶವನ್ನು https://www.upsc.gov.in/ ವೆಬ್‌ಸೈಟ್‌ಗೆ ಹೋಗಿ ನೋಡಬಹುದು. 

ಅಭ್ಯರ್ಥಿಗಳು ತಮ್ಮ ಫಲಿತಾಂಶದ ಬಗ್ಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟೀಕರಣಕ್ಕಾಗಿ ಆಫೀಸ್ ಸಮಯ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ, ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆಗಳಿಂದ-011-23385271, 011-23098543, ಅಥವಾ 011-23381125 ಗೆ ಸಂಪರ್ಕಿಸಬಹುದು.

 ಜನವರಿ 8 ರಿಂದ ಜನವರಿ 17 ರವರೆಗೆ ಮುಖ್ಯ ಲಿಖಿತ ಪರೀಕ್ಷೆ ನಡೆದಿತ್ತು. ಇನ್ನು ಆಗಸ್ಟ್ 2 ರಿಂದ ಸೆಪ್ಟೆಂಬರ್ 22 ರವರೆಗೆ ಸಂದರ್ಶನ ನಡೆಸಲಾಗಿತ್ತು.

ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಿ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಮತ್ತು ಇತರ ಅಧಿಕಾರಿಗಳನ್ನು ಆಯ್ಕೆ ಮಾಡಲು ಯುಪಿಎಸ್‌ಸಿಯು ನಾಗರಿಕ ಸೇವಾ ಪರೀಕ್ಷೆಯನ್ನು ವಾರ್ಷಿಕವಾಗಿ 33 ಹಂತಗಳಲ್ಲಿ ನಡೆಸುತ್ತದೆ.

click me!