ಆಯಿಲ್ ಇಂಡಿಯಾ ನೇಮಕಾತಿ: ಅಧಿಕಾರಿ ಹುದ್ದೆಗಳಿಗೆ ಸೂಪರ್ ಸಂಬಳ

By Suvarna News  |  First Published Sep 21, 2021, 1:04 PM IST

ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಕಂಪನಿಯು ಎ, ಬಿ ಮತ್ತು ಸಿ ಗ್ರೇಡ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಅಕ್ಟೋಬರ್ 10ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಅಸ್ಸಾಮ್‌ನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. 


ಸಾರ್ವಜನಿಕ ವಲಯದಡಿ ಬರುವ ನವರತ್ನ ಆಯಿಲ್ ಇಂಡಿಯಾ ಲಿಮಿಟೆಡ್, ಗ್ರೇಡ್ ಸಿ, ಗ್ರೇಡ್ ಬಿ ಮತ್ತು ಗ್ರೇಡ್ ಎ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಯಿಲ್ ಇಂಡಿಯಾ ಲಿಮಿಟೆಡ್, ಅಸ್ಸಾಂನಲ್ಲಿ ಗ್ರೇಡ್ ಸಿ, ಗ್ರೇಡ್ ಬಿ ಮತ್ತು ಗ್ರೇಡ್ ಎ ಪೋಸ್ಟಿಂಗ್ ಗಾಗಿ 35 ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಅರ್ಜಿಗಳನ್ನು ಸಲ್ಲಿಸಲು  ಅಕ್ಟೋಬರ್ 10 ಕೊನೆಯ ದಿನಾಂಕವಾಗಿದೆ. ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Tap to resize

Latest Videos

undefined

NIOS ನೇಮಕಾತಿ: 115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸೂಪರಿಂಟೆಂಡೆಂಟ್ ಎಂಜಿನಿಯರ್ (ಡ್ರಿಲ್ಲಿಂಗ್: 1 ಹುದ್ದೆ, ಸೂಪರಿಂಟೆಂಡೆಂಟ್ ಮೆಡಿಕಲ್ ಆಫೀಸರ್ ( ರೇಡಿಯಾಲಜಿ)-1 ಹುದ್ದೆ, ಸೂಪರಿಂಟೆಂಡೆಂಟ್ ಇಂಜಿನಿಯರ್ ( ಎನ್ವಿರಾನ್ಮೆಂಟ್)- 3 ಹುದ್ದೆಗಳು, ಸೂಪರಿಂಟೆಂಡೆಂಟ್ ಮೆಡಿಕಲ್ ಆಫೀಸರ್ ( ಆರ್ಥೋಪೆಡಿಕ್ ಸರ್ಜನ್ - 1 ಹುದ್ದೆ, ಸೀನಿಯರ್ ಮೆಡಿಕಲ್ ಆಫೀಸರ್-4 ಹುದ್ದೆಗಳು, ಸೀನಿಯರ್ ಸೆಕ್ಯೂರಿಟಿ ಆಫೀಸರ್- 1 ಹುದ್ದೆ, ಸೀನಿಯರ್ ಆಫೀಸರ್(ಎಲೆಕ್ಟ್ರಿಕಲ್)- 6 ಹುದ್ದೆಗಳು, ಸೀನಿಯರ್ ಆಫೀಸರ್(ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ಸ್)- 2  ಹುದ್ದೆಗಳು, ಸೀನಿಯರ್ ಆಫೀಸರ್(ಲ್ಯಾಂಡ್/ಲೀಗಲ್)-2 ಹುದ್ದೆಗಳು, ಸೀನಿಯರ್ ಆಫೀಸರ್( ಮೆಕ್ಯಾನಿಕಲ್) -10 ಹುದ್ದೆಗಳು , ಸೀನಿಯರ್ ಆಫೀಸರ್( ಜಿಯೋಫೊಸಿಕ್ಸ್)-1ಹುದ್ದೆ, ಸೀನಿಯರ್ ಆಫೀಸರ್ (ಇಂಸ್ಟ್ರುಮೆಂಟೇಷನ್)-2 ಹುದ್ದೆ ಸೇರಿ ಒಟ್ಟು 35 ಅಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್ ಆಧರಿತ ಪರೀಕ್ಷೆಯಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆಯಬೇಕು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಕ್ಕೆ ಶೇ.50ಮತ್ತು ಉಳಿದವುಗಳಿಗೆ ಶೇ.40ರಷ್ಟು ಅಂಕ ಗಳಿಸಬೇಕು. ಇನ್ನು ಇತರ ಪರೀಕ್ಷೆಗಳಿಗೆ ಯಾವುದೇ ಅರ್ಹತಾ ಅಂಕಗಳು ಇರುವುದಿಲ್ಲ.

ಜೂನಿಯರ್ ಎಂಜಿನಿಯರ್ ಹುದ್ದೆಗೆ ಅಭ್ಯರ್ಥಿಯು ಸರ್ಕಾರಿ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ 3 ವರ್ಷ ಸಂಬಂಧಿತ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಆರು ತಿಂಗಳ ಪ್ರಮಾಣಪತ್ರ /ಡಿಪ್ಲೊಮಾ ಹೊಂದಿರಬೇಕು. ಸಹಾಯಕ ತಂತ್ರಜ್ಞ ಹುದ್ದೆಗೆ ಅಭ್ಯರ್ಥಿಯು ಸರ್ಕಾರಿ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಮತ್ತು ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.

UPSC ನೇಮಕಾತಿ: ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನ

ಅಭ್ಯರ್ಥಿಗಳು ಅರ್ಜಿ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ವಿದೆ. ಎಸ್‌ಸಿ, ಎಸ್‌ಟಿ, ಇಡಬ್ಲ್ಯೂಎಸ್, ಪಿಡಬ್ಲೂಡಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
 

ಈ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಯು ಮಾಸಿಕ 2.20 ಲಕ್ಷ ರೂ.ವರೆಗೆ ಸಂಬಳ ಪಡೆಯಬಹುದು. ಜೂನಿಯರ್ ಎಂಜಿನಿಯರ್ (ಜೆಇ) ಹುದ್ದೆಯ ವೇತನ ಶ್ರೇಣಿ: ರೂ 37,500- 1,45,000 ರೂ. ಇದೆ.  ಇನ್ನು ಸಹಾಯಕ ತಂತ್ರಜ್ಞ ಹುದ್ದೆಗೆ ವೇತನ ಶ್ರೇಣಿ: ರೂ 26600- ರೂ 90000 ಇದೆ.

ಆನ್‌ಲೈನ್ ಮೂಲಕ ಅರ್ಜಿ ನಮೂನೆಗಳನ್ನು ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನಾಂಕವಾಗಿದೆ. ಅರ್ಹತೆ, ವಯಸ್ಸಿನ ಮಿತಿ, ಸಂಬಳ ಮತ್ತು ಇತರ ಮಾರ್ಗಸೂಚಿಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಭಾರತದಲ್ಲಿ IBM ನೇಮಕಾತಿ: ಫ್ರೆಶರ್ಸ್‌ಗೆ ಅವಕಾಶ

ಈ ನೇಮಕಾತಿ ಡ್ರೈವ್ ನಲ್ಲಿ ಭರ್ತಿ ಮಾಡಿಕೊಳ್ಳಲಿರುವ ಎಲ್ಲಾ ಪೋಸ್ಟಿಂಗ್‌ಗಳು ಅಸ್ಸಾಂ ರಾಜ್ಯಕ್ಕೆ ಒಳಪಡಲಿವೆ. ಜೊತೆಗೆ  ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಅಗತ್ಯ ವಿದ್ಯಾರ್ಹತೆ ಇರಬೇಕು.  ಯುಜಿಸಿ/ಸೂಕ್ತ ಶಾಸನಬದ್ಧ ಪ್ರಾಧಿಕಾರವು ಕೋರ್ಸ್‌ಗಳನ್ನು ಅನುಮೋದಿಸಿರಬೇಕು.

click me!