ನೌಕಾಪಡೆಯು ನೇಮಕಾತಿಯನ್ನು ಆರಂಭಿಸಿದೆ. ಶಾರ್ಟ್ ಸರ್ವೀಸ್ ಕಮಿಷನ್(ಎಸ್‌ಎಸ್‌ಸಿ) ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಒಟ್ಟು 181 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಭಾರತೀಯ ನೌಕಾಪಡೆಯು ನೇಮಕಾತಿ ಆಂದೋಲನವನ್ನು ನಡೆಸುತ್ತಿದೆ. ಶಾರ್ಟ್ ಸರ್ವಿಸ್ ಕಮಿಷನ್ (ಎಸ್‌ಎಸ್‌ಸಿ) ಅಧಿಕಾರಿಗಳ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ joinindiannavy.gov.in ನಲ್ಲಿ ಅರ್ಜಿ ನಮೂನೆಗಳನ್ನು ಭರ್ತಈಜಿಮಾಲಾದಲ್ಲಿ ಕೋರ್ಸ್ಗೆಲೇ ನೌಕಾಪಡೆಯು ಶಾರ್ಟ್ ಸರ್ವೀಸ್ ಕಮಿಷನ್ (SSC) ಅಧಿಕಾರಿಗಳ ಹುದ್ದೆಯ ಭರ್ತಿಗಾಗಿ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ.
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸಿದರೆ, ಅವರು ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕು ಎಂಬುದನ್ನು ಗಮನಿಸಬೇಕು. ಸೆಪ್ಟೆಂಬರ್ 9 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಸೆಪ್ಟೆಂಬರ್ 18 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಅಕ್ಟೋಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
undefined
NIOS ನೇಮಕಾತಿ: 115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಈ ಹುದ್ದೆಗಳ ಕೋರ್ಸ್‌ಗಳು 2022ರ ಜೂನ್ ನಿಂದ ಕೇರಳದ ಭಾರತೀಯ ನೌಕಾ ಅಕಾಡೆಮಿಕ್ (ಐಎನ್‌ಎ) ಎಜಿಮಾಲಾದಲ್ಲಿ ಆರಂಭವಾಗುತ್ತವೆ. ಭಾರತೀಯ ನೌಕಾಪಡೆಯಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಆಸಕ್ತಿ ಹೊಂದಿದ್ದರೆ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಜನರಲ್ ಸರ್ವಿಸ್/ಹೈಡ್ರೋ ಕೇಡರ್- 45 ಹುದ್ದೆಗಳು, ಏರ್ ಟ್ರಾಫಿಕ್ ಕಂಟ್ರೋಲರ್ (ATC)- 4 ಹುದ್ದೆಗಳು, ಅಬ್ಸರ್ವರ್- 8 ಹುದ್ದೆಗಳು, ಪೈಲಟ್- 15 ಹುದ್ದೆಗಳು, ಲಾಜಿಸ್ಟಿಕ್- 18 ಹುದ್ದೆ, ಎಜ್ಯುಕೇಷನ್ - 18 ಹುದ್ದೆಗಳು, ಇಂಜಿನಿಯರಿಂಗ್ ಬ್ರಾಂಚ್(ಸಾಮಾನ್ಯ ಸೇವೆ (GS)]- 27 ಹುದ್ದೆಗಳು, ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವಿಸ್)-34 ಹುದ್ದೆಗಳು, ನಾವಲ್ ಅರ್ಕಿಟೆಕ್ಟ್ (NA)- 12 ಹುದ್ದೆಗಳು ಸೇರಿ ಒಟ್ಟು 181 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಮೇಲೆ ತಿಳಿಸಿದ ಹುದ್ದೆಗಳಿಗೆ ಅವಿವಾಹಿತ ಪುರುಷರು ಮತ್ತು ಮಹಿಳೆಯರನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಅಧಿಸೂಚನೆಯು ಪದವಿ ಅಥವಾ ಅಂತಿಮ ವರ್ಷದಲ್ಲಿರುವ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
UPSC ನೇಮಕಾತಿ: ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನ
ಕೇಂದ್ರ ಅಥವಾ ರಾಜ್ಯ ಶಾಸಕಾಂಗದ ಕಾಯಿದೆ ಅಥವಾ ಸಂಸತ್ತಿನ ಕಾಯಿದೆಯಿಂದ ಸ್ಥಾಪಿತವಾದ ಇತರ ಶಿಕ್ಷಣ ಸಂಸ್ಥೆಗಳಿಂದ ಸಂಯೋಜಿಸಲ್ಪಟ್ಟ ವಿಶ್ವವಿದ್ಯಾನಿಲಯದಿಂದ ಒಟ್ಟು 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು
ಎಂದು ಘೋಷಿಸಲಾಗಿದೆ; ಐಐಟಿ ಕಾಯ್ದೆ, 1961ರ ಎಐಸಿಟಿಇ ಕಾಯಿದೆ, 1987ರ NITSER ಕಾಯಿದೆ, 2007ರ ಐಐಐಟಿ ಕಾಯ್ದೆ 2014, ಅಥವಾ ಎಐಯು, ಕಾಯ್ದೆ 1973 ರ ಅಡಿಯಲ್ಲಿ ಸ್ಥಾಪಿಸಲಾದ ಭಾರತೀಯ ವಿಶ್ವವಿದ್ಯಾಲಯಗಳ ಉದ್ದೇಶದಿಂದ ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಅಂತಹ ವಿದೇಶಿ ವಿಶ್ವವಿದ್ಯಾಲಯ/ ಕಾಲೇಜು/ ಸಂಸ್ಥೆಯಿಂದ ಒಟ್ಟು ಅಥವಾ ಸಮಾನ ಸಿಜಿಪಿಎ/ ವ್ಯವಸ್ಥೆಯಲ್ಲಿ 60% ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
ಆದಾಗ್ಯೂ, ಅಭ್ಯರ್ಥಿಗಳು ಐಎನ್‌ಎಗೆ ಸೇರುವ ಮೊದಲು ಮೇಲೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸಬೇಕಾಗುತ್ತದೆ. ನಿಗದಿತ ಶೈಕ್ಷಣಿಕ ಮಾನದಂಡಗಳನ್ನು ಪೂರೈಸಲು ವಿಫಲರಾದ ಅಭ್ಯರ್ಥಿಗಳಿಗೆ ಐಎನ್ಎ, ಈಜಿಮಾಲಾದಲ್ಲಿ ಸೇರಲು ಅನುಮತಿ ಇಲ್ಲ. ಎಲ್ಲಾ ಎಸ್‌ಎಸ್‌ಬಿ ಶಿಫಾರಸು ಮಾಡಿದ ಅಭ್ಯರ್ಥಿಗಳು ತಮ್ಮ ಪದವಿ ಅಂತಿಮ ಫಲಿತಾಂಶವನ್ನು ಏಪ್ರಿಲ್ 30 ರೊಳಗೆ ಭಾರತೀಯ ನೌಕಾಪಡೆಗೆ ಇಮೇಲ್ ಐಡಿ ಆಫೀಸರ್@navy.gov.in ನಲ್ಲಿ ತಿಳಿಸಬೇಕಾಗುತ್ತದೆ.
ಭಾರತದಲ್ಲಿ IBM ನೇಮಕಾತಿ: ಫ್ರೆಶರ್ಸ್‌ಗೆ ಅವಕಾಶ
ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಕ್ಟೋಬರ್ 5ರೊಳಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಈ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, ನೇಮಕಾತಿ ಪ್ರಕ್ರಿಯೆ ಸೆಪ್ಟೆಂಬರ್ 18ರಿಂದಲೇ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಆಸಕ್ತರು ಭೇಟಿ ನೀಡಬಹುದು.