
ನಮ್ಮ ದೇಶದಲ್ಲಿ ಅತ್ಯಂತ ಉನ್ನತವಾದ ಸರ್ಕಾರಿ ನೌಕರಿ ಭಾರತೀಯ ನಾಗರೀಕ ಸೇವೆ (ಐಎಎಸ್) ಹುದ್ದೆಗೆ ಯುಪಿಎಸ್‌ಸಿ ಅತ್ಯಂತ ಕಠಿಣವಾದ ಪರೀಕ್ಷೆಯನ್ನು ನಡೆರಸಲಾಗುತ್ತದೆ. ಇಲ್ಲೊಬ್ಬ ಟೆಕ್ಕಿ ಯುವತಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಗೆ 2 ವರ್ಷಗಳ ಅಭ್ಯಾಸದ ವೇಳೆಯಲ್ಲಿ ಬಳಸಿದ ಪೆನ್ನುಗಳ ಫೋಟೋವನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಈ ಮೂಲಕ ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಎಷ್ಟು ಕಠಿಣ ಅಭ್ಯಾಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಆದರೂ, ಆಕೆ ಯುಪಿಎಸ್‌ಸಿ ಪಾಸ್ ಆಗಲು ಸಾಧ್ಯವಾಗಿಲ್ಲ.
ಹೌದು, ಕೇಂದ್ರ ಲೋಕಸೇವಾ ಆಯೋಗದ (Union Public Service Commission-UPSC) ಕಠಿಣ ಪರೀಕ್ಷೆಗೆ ತಯಾರಿ ನಡೆಸುವುದು ಪ್ರತಿ ವರ್ಷ ಲಕ್ಷಾಂತರ ಯುವಕರ ಕನಸಾಗಿರುತ್ತದೆ. ಇತ್ತೀಚೆಗೆ, ಒಬ್ಬ ಹುಡುಗಿ ತನ್ನ ಯುಪಿಎಸ್ಸಿ ಪ್ರಯಾಣಕ್ಕೆ ಸಂಬಂಧಿಸಿದ ವಿಶೇಷ ನೆನಪನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಈ ಸಂಬಂಧಪಟ್ಟ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಕೆಲವೇ ಸಮಯದಲ್ಲಿ ವೈರಲ್ ಆಯಿತು. ಆದರೆ, ಯುವತಿ ತನ್ನ ಕಠಿಣ ಪರಿಶ್ರಮದ ಹೊರತಾಗಿಯೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.
ಗುರುಗ್ರಾಮ್‌ನ ಐಟಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅದಿತಿ ಜೈಸ್ವಾಲ್ ಅವರು ಈ ಫೋಟೋ ಹಂಚಿಕೊಂಡ ಯುವತಿ ಆಗಿದ್ದಾರೆ. ಇವರು ಕಳೆದ 2 ವರ್ಷಗಳ ತಯಾರಿಯಲ್ಲಿ 100ಕ್ಕೂ ಹೆಚ್ಚು ಪೆನ್ನುಗಳನ್ನು ಬಳಸಿದ ಫೋಟೋವನ್ನು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ '2 ವರ್ಷಗಳಿಗೂ ಹೆಚ್ಚು ಕಾಲ UPSC ತಯಾರಿಗಾಗಿ ಪೆನ್ನುಗಳನ್ನು ಬಳಸಿದ್ದೇನೆ. UPSC ಪರೀಕ್ಷೆಗಾಗಿ ಅದಿತಿ ಜೈಸ್ವಾಲ್ ಅವರ ಎರಡು ವರ್ಷಗಳ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿರುವುದು ಲೇಖನಿ ಮಾತ್ರ' ಎಂದು ಶೀರ್ಷಿಕೆಯನ್ನೂ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅಂತ ಪ್ರೂವ್ ಆಗೋಯ್ತು; ವಿಡಿಯೋ ವೈರಲ್!
ಅದಿತಿ ಜೈಸ್ವಾಲ್ ಅವರ ಈ ಪೋಸ್ಟ್ ವೈರಲ್ ಆಗಿ ಕೆಲವೇ ಕ್ಷಣಗಳಲ್ಲಿ 1.4 ಮಿಲಿಯನ್ ವೀಕ್ಷಣೆಗಳು ಮತ್ತು 27 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿತು. ಈ ಪೋಸ್ಟ್ ಇತರ ಬಳಕೆದಾರರಿಗೆ ಅವರ ಕಠಿಣ ಪರಿಶ್ರಮ ಮತ್ತು ತಯಾರಿ ದಿನಗಳನ್ನು ನೆನಪಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಒಬ್ಬ ಬಳಕೆದಾರರು 'ನನ್ನಲ್ಲೂ ಇದೇ ರೀತಿಯ ಪೆನ್ನುಗಳಿವೆ, 3 ವರ್ಷಗಳ ಕಾಲ ತಯಾರಿ ನಡೆಸಿದ್ದೇನೆ, SSC, RRB, NTPC ನಂತಹ ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದೇನೆ. ಇದಕ್ಕೆ ನಂತರ ರಾಜೀನಾಮೆ ನೀಡಿ ರಾಜ್ಯ PSCಯಲ್ಲಿ ಕಂದಾಯ ನಿರೀಕ್ಷಕನಾದೆ' ಎಂದು ಕಾಮೆಂಟ್ ಮಾಡಿದ್ದಾನೆ.
ವಾಹ್, ಈ ಸಂಗ್ರಹ ಅಥವಾ ಪೆನ್ನುಗಳು 2 ವರ್ಷಗಳ UPSC ತಯಾರಿಯಲ್ಲಿ ಅದ್ಭುತವಾದ ಸಮರ್ಪಣೆಯನ್ನು ತೋರಿಸುತ್ತವೆ! ಇದು ನಿಮ್ಮಲ್ಲಿರುವ ಶಕ್ತಿ ಮತ್ತು ಪರಿಶ್ರಮವನ್ನು ತೋರಿಸುತ್ತದೆ. ನಿಮ್ಮ ಮುಂದಿನ ಅಧ್ಯಾಯದಲ್ಲಿ ನಿಮಗೆಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ! ಎಂದು ಮತ್ತೊಬ್ಬ ನೆಟ್ಟಿಗ ಹಾರೈಸಿದ್ದಾನೆ.
ಮತ್ತೊಬ್ಬ ನೆಟ್ಟಿಗರು, 'ನ್ಯಾಯಾಂಗ ಸೇವೆಗಳ ಪರೀಕ್ಷೆಯ ತಯಾರಿಯಲ್ಲಿ ಸುಮಾರು 1.5 ವರ್ಷಗಳು ಮತ್ತು ಇನ್ನೂ ಸಿದ್ಧತೆ ನಡೆಯುತ್ತಿದೆ... ಎಂದು ತಮ್ಮಲ್ಲಿನ ಪೆನ್ನುಗಳ ಸಂಗ್ರಹಣೆ ಫೋಟೋ ಹಂಚಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗು ಮಾಡಿಕೊಳ್ಳಿ ಎಂದು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟ ಕಂಪೆನಿ ಇದು! ಈ ತಿಂಗಳಿನಿಂದಲೇ ಅನ್ವಯ!
ಇನ್ನು ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಜನರು ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ. ಬೆರಳೆಣಿಕೆ ಜನರು ಮಾತ್ರ ಇದರಲ್ಲಿ ಯಶಸ್ವಿ ಆಗಿತ್ತಾರೆ. ಉಳಿದಂತೆ ಶೇ.95ಕ್ಕಿಂತ ಅಧಿಕ ಜನರು ಈ ಗುರಿ ತಲುಪುವಲ್ಲಿ ವಿಫಲರಾಗುತ್ತಾರೆ. ಆದರೆ, ಕಠಿಣ ಪರಿಶ್ರಮ ಮುಂದುವರೆಸಿದಲ್ಲಿ ಮೂರ್ನಾಲ್ಕು ಪ್ರಯತ್ನದಲ್ಲಿ ಒಮ್ಮೆ ಯಶಸ್ಸಿನ ಗುರಿ ಮುಟ್ಟುತ್ತಾರೆ. ಇನ್ನು ಕೆಲವರು ಸತತ ಪ್ರಯತ್ನದ ನಡುವೆಯೂ ಯಶಸ್ಸು ಸಿಗದಿದ್ದಾಗ ಬೇರೆ ಯಾವುದಾದರೂ ರಾಜ್ಯ ಸರ್ಕಾರದ ಅಥವಾ ಕೇಂದ್ರ ಗ್ರೇಡ್ ಬಿ ಅಥವಾ ಸಿ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುತ್ತಾರೆ.