UCIL Recruitment 2022: CA, ICWA, ಪದವೀಧರರಿಗೆ UCIL ನಲ್ಲಿ ಉದ್ಯೋಗವಕಾಶ

By Suvarna NewsFirst Published Jan 29, 2022, 5:35 PM IST
Highlights

ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್  ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಫ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನಾಂಕವಾಗಿದೆ. 

ಬೆಂಗಳೂರು(ಜ.29): ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ (Uranium Corporation of India Limited -UCIL) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಅಕೌಂಟ್ಸ್​ ಆಫೀಸರ್, ಮೈನಿಂಗ್ ಮೇಟ್ ಸೇರಿ ಒಟ್ಟು 41 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು  ಇಲಾಖೆಯ ಅಧಿಕೃತ ವೆಬ್‌ತಾಣ www.ucil.gov.in ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು  41 ಹುದ್ದೆಗಳ ಮಾಹಿತಿ:
ಮೈನಿಂಗ್ ಮೇಟ್- 38
ಅಕೌಂಟ್ಸ್​ ಆಫೀಸರ್-3

ಶೈಕ್ಷಣಿಕ ವಿದ್ಯಾರ್ಹತೆ: ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ CA, ICWA, ಪದವಿ ಮಾಡಿರಬೇಕು.

BACKLOG POSTS ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ತಿರ್ಮಾನ

ವಯೋಮಿತಿ: ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/EWS ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 53 ವರ್ಷ , ಎಸ್​ಸಿ/ಎಸ್​ಟಿ ಗರಿಷ್ಠ 55 ವರ್ಷ  ಅಕೌಂಟ್ಸ್​ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ  ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.

ಉದ್ಯೋಗದ ಸ್ಥಳ: ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಕೌಂಟ್ಸ್​ ಆಫೀಸರ್, ಮೈನಿಂಗ್ ಮೇಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಜಾರ್ಖಂಡ್​​ನ ಈಸ್ಟ್​ ಸಿಂಗ್​ಭುಮ್​ನಲ್ಲಿ ಉದ್ಯೋಗ ಮಾಡಲು ತಯಾರಿರಬೇಕು.

ವೇತನ ವಿವರ:  ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಕೌಂಟ್ಸ್​ ಆಫೀಸರ್ ಹುದ್ದೆಗೆ ಮಾಸಿಕ 46,020 ರೂ ಮತ್ತು ಮೈನಿಂಗ್ ಮೇಟ್ ಹುದ್ದೆಗೆ ಮಾಸಿಕ  35,904 ರೂ ವೇತನ ಇರಲಿದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ವಿಳಾಸ: ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಕೌಂಟ್ಸ್​ ಆಫೀಸರ್ ಮತ್ತು ಮೈನಿಂಗ್ ಮೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮ್ಯಾನೇಜರ್
ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್​
ಪಿ.ಒ. ಜಡುಗುಡ ಮೈನ್ಸ್​, ಸಿಂಗ್​​ಭುಮ್ ಈಸ್ಟ್​
ಜಾರ್ಖಂಡ್- 832102

SAIL Recruitment 2022: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ: ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science)ಬೆಂಗಳೂರಿನಲ್ಲಿ ಖಾಲಿ ಇರುವ 1 ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಎಸ್ಟೇಟ್ ಆಫೀಸರ್ (Project Engineer and Estate Officer) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಜನವರಿ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 4 ಕೊನೆಯ ದಿನವಾಗಿದೆ.  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ವೆಬ್​ಸೈಟ್​​ www.iisc.ac.in ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು ಖಾಲಿ ಇರುವ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಎಸ್ಟೇಟ್ ಆಫೀಸರ್ ಹುದ್ದೆಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 15 ವರ್ಷ ಅನುಭವ ಹೊಂದಿರಬೇಕು.

click me!