Delhi University Recruitment 2022: ಒಟ್ಟು 635 ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

By Suvarna NewsFirst Published Jan 26, 2022, 7:18 PM IST
Highlights

ದೆಹಲಿ ವಿಶ್ವವಿದ್ಯಾಲಯ ಪ್ರೊಫೆಸರ್  ಮತ್ತು ಅಸೋಸಿಯೇಟ್‌ ಪ್ರೊಫೆಸರ್ ಒಟ್ಟು 635 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಫೆಬ್ರವರಿ 07  ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು(ಜ.26): ದೆಹಲಿ ವಿಶ್ವವಿದ್ಯಾಲಯ (Delhi University) ಪ್ರೊಫೆಸರ್ (Professor) ಮತ್ತು ಅಸೋಸಿಯೇಟ್‌ ಪ್ರೊಫೆಸರ್ ( Associate Professor) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 635 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 07  ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ದೆಹಲಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ http://www.du.ac.in/ ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು 635 ಹುದ್ದೆಗಳ ವಿವರ:
ಪ್ರೊಫೆಸರ್ - 186
ಅಸೋಸಿಯೇಟ್‌ ಪ್ರೊಫೆಸರ್ - 449

ಶೈಕ್ಷಣಿಕ ವಿದ್ಯಾರ್ಹತೆ: ದೆಹಲಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ  ಪ್ರೊಫೆಸರ್ ಮತ್ತು ಅಸೋಸಿಯೇಟ್‌ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪಿಹೆಚ್‌ಡಿ ಜತೆಗೆ ನೆಟ್‌, ಎಸ್‌ಎಲ್‌ಇಟಿ ಅರ್ಹತೆ ಪಡೆದಿರಬೇಕು. ಹಾಗೂ ಕನಿಷ್ಠ ಕಾರ್ಯಾನುಭವವನ್ನು ಹೊಂದಿರಬೇಕು.

ಅಭ್ಯರ್ಥಿಯು ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರಬೇಕು, ಸಂಬಂಧಿತ ವಿಭಾಗಗಳಲ್ಲಿ ಪಿಎಚ್‌ಡಿ ಪದವಿ, ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಬೋಧನೆ / ಸಂಶೋಧನಾ ಅನುಭವ - ಪ್ರೊಫೆಸರ್‌ಗೆ 10 ವರ್ಷಗಳು ಮತ್ತು ಅಸೋಸಿಯೇಟ್ ಪ್ರೊಫೆಸರ್‌ಗೆ 08 ವರ್ಷಗಳ ಅನುಭವ ಇರಬೇಕು.

RRB NTPC CBT 2 Exam 2022 : ರೈಲ್ವೆ ನೇಮಕಾತಿಯ ಸಿಬಿಟಿ-2 ಪರೀಕ್ಷೆಯ ದಿನಾಂಕ ಬಿಡುಗಡೆ

ಅರ್ಜಿ ಶುಲ್ಕ: ದೆಹಲಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ  ಪ್ರೊಫೆಸರ್ ಮತ್ತು ಅಸೋಸಿಯೇಟ್‌ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಅಭ್ಯರ್ಥಿಗಳು/OBC/EWS ಅಭ್ಯರ್ಥಿಗಳು 2000 ರೂ ಅರ್ಜಿ ಶುಲ್ಕ ಪಾವತಿಸಬೇಕು. SC/ST/PwD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ದೆಹಲಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ  ಪ್ರೊಫೆಸರ್ ಮತ್ತು ಅಸೋಸಿಯೇಟ್‌ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸು ವಿಧಾನಗಳು
- ದೆಹಲಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ du.ac.in ಗೆ ಭೇಟಿ ನೀಡಿ.
- ಓಪನ್‌ ಆದ ಪೇಜ್‌ನಲ್ಲಿ 'Latest @DU' ಟ್ಯಾಬ್‌ ಸೆಲೆಕ್ಟ್‌ ಮಾಡಿ.
- ಸ್ಕ್ರಾಲ್‌ ಡೌನ್‌ ಮಾಡಿ ಜನವರಿ 17ನೇ ತಾರೀಖಿನ ನೋಟಿಫಿಕೇಶನ್‌ಗಳು ಇರುತ್ತವೆ.
- ನಿಮ್ಮ ಆಸಕ್ತ ಹುದ್ದೆಯ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ.
- ನೋಟಿಫಿಕೇಶನ್‌ ಓದಿಕೊಂಡು, ನಂತರ ' Apply Online' ಎಂದಿರುವಲ್ಲಿ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಗಳನ್ನು ಎಂಟರ್ ಮಾಡಿ, ಅರ್ಜಿ ಪೂರ್ಣಗೊಳಿಸಿ.
- ಅರ್ಜಿ ಶುಲ್ಕ ಪಾವತಿಸಿ.
- ನಂತರ ಮುಂದಿನ ರೆಫರೆನ್ಸ್‌ಗಾಗಿ ಅಪ್ಲಿಕೇಶನ್‌ ಪ್ರಿಂಟ್‌ ತೆಗೆದುಕೊಳ್ಳಿ.

NLC APPRENTICE RECRUITMENT 2022: 500 ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ: ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science)ಬೆಂಗಳೂರಿನಲ್ಲಿ ಖಾಲಿ ಇರುವ 1 ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಎಸ್ಟೇಟ್ ಆಫೀಸರ್ (Project Engineer and Estate Officer) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಜನವರಿ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 4 ಕೊನೆಯ ದಿನವಾಗಿದೆ.  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ವೆಬ್​ಸೈಟ್​​ www.iisc.ac.in ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು ಖಾಲಿ ಇರುವ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಎಸ್ಟೇಟ್ ಆಫೀಸರ್ ಹುದ್ದೆಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 15 ವರ್ಷ ಅನುಭವ ಹೊಂದಿರಬೇಕು.

click me!