
ಪ್ರಧಾನಿ (Prime Minister) ವಿದೇಶಿ ಪ್ರವಾಸಕ್ಕೆ ಹೋದಾಗ ಕ್ಯಾಮರಾ ಹಿಂದೆ ಒಬ್ಬ ವ್ಯಕ್ತಿ ಇರ್ತಾರೆ. ಪ್ರಧಾನಿ ಅನುವಾದಕ ಅವರು. ವಿದೇಶಿ ನಾಯಕರು ಮತ್ತೆ ಪ್ರಧಾನಿ ಮಧ್ಯೆ ಸೇತುವೆಯಾಗಿ ಇಂಟರ್ಪ್ರಿಟರ್ (interpreter) ಕೆಲ್ಸ ಮಾಡ್ತಾರೆ. ವಿದೇಶಿ ನಾಯಕರ ಮಾತನ್ನು ಪ್ರಧಾನಿಗೆ ಹಾಗೂ ಪ್ರಧಾನಿ ಮಾತನ್ನು ನಾಯಕರಿಗೆ ಸರಿಯಾಗಿ ಅರ್ಥವಾಗುವಂತೆ ಅರ್ಥೈಸೋದೇ ಅವರ ಕೆಲ್ಸ. ಪ್ರಧಾನಿ ಹಾಗೂ ಬೇರೆ ದೇಶದ ಮಧ್ಯೆ ನಿಜವಾದ ಕೊಂಡಿಯಾಗಿ ಅವ್ರು ಕೆಲ್ಸ ಮಾಡ್ತಾರೆ. ಇಲ್ಲಿ ಟ್ರಾನ್ಸ್ ಲೇಟರ್ ಪಾತ್ರ ಮುಖ್ಯವಾಗುತ್ತೆ. ಒಬ್ಬ ಟ್ರಾನ್ಸ್ ಲೇಟರ್ ಬರೀ ಮಾತನ್ನು ಅನುವಾದ ಮಾಡೋದಲ್ಲ, ಆಯಾ ದೇಶದ ಸಂಸ್ಕೃತಿ, ಭಾಷೆಯ ಬಗ್ಗೆ ಆಳವಾದ ಜ್ಞಾನ ಹೊಂದಿರೋದು ಮುಖ್ಯವಾಗುತ್ತೆ. ಸಾಮಾನ್ಯವಾಗಿ ಇವರನ್ನು ವಿದೇಶಾಂಗ ಸಚಿವಾಲಯ ಅಥವಾ ಭಾರತೀಯ ವಿದೇಶಾಂಗ ಸೇವೆ (IFS) ನಿಂದ ಆಯ್ಕೆ ಮಾಡಲಾಗುತ್ತದೆ.
ಪ್ರಧಾನಿ ಇಂಟರ್ಪ್ರಿಟರ್ ಗೆ ಇರಬೇಕಾದ ಅರ್ಹತೆ ಏನು? : ಪ್ರಧಾನಿಯ ಇಂಟರ್ಪ್ರಿಟರ್ ಆಗಿ ನೀವು ಕೆಲ್ಸ ಮಾಡ್ಬೇಕು ಅಂದ್ರೆ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವಿ. ಯಾವುದೇ ವಿಷ್ಯದಲ್ಲಿ ನೀವು ಪದವಿ ಹೊಂದಿದ್ರೂ ಸರಿ, ಅಂತರರಾಷ್ಟ್ರೀಯ ಸಂಬಂಧಗಳು ಅಥವಾ ರಾಜಕೀಯ ವಿಜ್ಞಾನದಂತಹ ವಿಷಯಗಳ ಬಗ್ಗೆ ನೀವು ತಿಳಿದಿರಬೇಕು. ಕೇವಲ ಒಂದು ಪದವಿ ಸಾಕಾಗೋದಿಲ್ಲ. ಕನಿಷ್ಠ ಎರಡು ಭಾಷೆಗಳಲ್ಲಿ ಸಂಪೂರ್ಣ ಜ್ಞಾನ ಇರ್ಬೇಕು. ಒಂದು ಹಿಂದಿ ಅಥವಾ ಇಂಗ್ಲಿಷ್ ಮತ್ತು ಇನ್ನೊಂದು ಫ್ರೆಂಚ್, ರಷ್ಯನ್, ಸ್ಪ್ಯಾನಿಷ್, ಜರ್ಮನ್, ಚೈನೀಸ್ ಅಥವಾ ಅರೇಬಿಕ್ನಂತಹ ವಿದೇಶಿ ಭಾಷೆ ತಿಳಿದಿರಬೇಕು. ನೀವು ಈ ಭಾಷೆಗಳನ್ನು ಸಂಪೂರ್ಣವಾಗಿ ಮಾತನಾಡಲು, ಓದಲು ಮತ್ತು ಬರೆಯಲು ಕಲಿತಿರಬೇಕು.
30,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳು, ಪುನರ್‌ರಚನೆಗೆ ಮುಂದಾದ ಪ್ರಸಾರ ಭಾರತಿ!
ಯಾವ ಕೋರ್ಸ್? ಎಲ್ಲಿ ಸಿಗುತ್ತೆ ತರಬೇತಿ? : ಫಾರೆನ್ ಭಾಷೆಗಳಲ್ಲಿ ಡಿಪ್ಲೊಮಾ ಅಥವಾ ಸರ್ಟಿಫೈಡ್ ಕೋರ್ಸ್ ಮಾಡೋದು ಅಗತ್ಯ. ಭಾರತದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ತರಬೇತಿ ನೀಡುತ್ವೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು), ದೆಹಲಿ ವಿಶ್ವವಿದ್ಯಾಲಯ, ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ವಿದೇಶಿ ಭಾಷೆಗಳ ಶಾಲೆ (ಎಸ್ಎಫ್ಎಲ್) ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು)ದಲ್ಲಿ ನೀವು ಇದನ್ನು ಕಲಿಯಬಹುದು. ಫ್ರೆಂಚ್, ಜರ್ಮನ್, ರಷ್ಯನ್ ಅಥವಾ ಚೈನೀಸ್ ಭಾಷೆಗಳಲ್ಲಿ ತರಬೇತಿ ಸಿಗುತ್ತದೆ.
ಈ ಕೋರ್ಸ್ ಆರರಿಂದ 2 ವರ್ಷಗಳ ಅವದಿ ಹೊಂದಿದೆ. 25 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಖರ್ಚಾಗುತ್ತೆ. ಅಲೈಯನ್ಸ್ ಫ್ರಾಂಚೈಸ್ (ಫ್ರೆಂಚ್), ಮ್ಯಾಕ್ಸ್ ಮುಲ್ಲರ್ ಭವನ (ಜರ್ಮನ್) ಮತ್ತು ಇನ್ಸ್ಟಿಟ್ಯೂಟೊ ಸೆರ್ವಾಂಟೆಸ್ (ಸ್ಪ್ಯಾನಿಷ್) ನಂತಹ ವಿದೇಶಿ ಸಂಸ್ಥೆಗಳ ಶಾಖೆಗಳು ಸಹ ಭಾರತದಲ್ಲಿ ಕೋರ್ಸ್ಗಳನ್ನು ನೀಡುತ್ತವೆ.
ಕೆಲ್ಸಕ್ಕೆ ಆಯ್ಕೆಯಾದ್ರೆ ಸಿಗುತ್ತೆ ತರಬೇತಿ : ಯುಪಿಎಸ್ಸಿ ಮೂಲಕ ನೀವು ಐಎಫ್ಎಸ್ (ಭಾರತೀಯ ವಿದೇಶಾಂಗ ಸೇವೆ) ಗೆ ಆಯ್ಕೆಯಾದ್ರೆ ದೆಹಲಿಯಲ್ಲಿರುವ ವಿದೇಶಿ ಸೇವಾ ಸಂಸ್ಥೆಯಲ್ಲಿ (ಎಫ್ಎಸ್ಐ) ಒಂದು ವರ್ಷ ಟ್ರೈನಿಂಗ್ ಸಿಗಲಿದೆ. ಇದು ಅಂತರರಾಷ್ಟ್ರೀಯ ಸಂಬಂಧಗಳ ಅಧ್ಯಯನ, ವಿದೇಶಾಂಗ ನೀತಿಯ ಮಾಹಿತಿ ಮತ್ತು ತೀವ್ರ ಭಾಷಾ ತರಬೇತಿಯನ್ನು ಒಳಗೊಂಡಿದೆ. ಭಾರತದಲ್ಲಿ ಮಾತ್ರವಲ್ಲದೆ, ವಿಶ್ವಸಂಸ್ಥೆ (UN) ಅಥವಾ ಯುರೋಪಿಯನ್ ಒಕ್ಕೂಟ (EU) ನಲ್ಲಿ ಕೆಲಸ ಮಾಡಲು ತರಬೇತಿ ಪಡೆಯುತ್ತಾರೆ.
PMKVY: ಈ ಸರ್ಕಾರಿ ಯೋಜನೆಯಲ್ಲಿ ಉಚಿತ ತರಬೇತಿ ಜೊತೆ ಸಿಗಲಿದೆ
ಟ್ರಾನ್ಸಲೇಟರ್ ಗೆ ಎಷ್ಟು ಸಿಗುತ್ತೆ ಸಂಬಳ ? : ಐಎಫ್ ಎಸ್ ಅಧಿಕಾರಿಗೆ 7 ನೇ ವೇತನ ಆಯೋಗದ ಪ್ರಕಾರ, ತಿಂಗಳಿಗೆ ಸುಮಾರು 56,100 ರೂಪಾಯಿ ಸಿಗುತ್ತದೆ. ವಿದೇಶದಲ್ಲಿ ಕೆಲ್ಸ ಮಾಡ್ತಿದ್ರೆ ವಿಶೇಷ ವಿದೇಶಿ ಭತ್ಯೆ ಸಿಗುತ್ತದೆ. ಅನುಭವ ಮತ್ತು ಸ್ಥಾನಕ್ಕೆ ತಕ್ಕಂತೆ ಸಂಬಳ ಹೆಚ್ಚಾಗುತ್ತೆ. ನಿಮಗೆ ತಿಂಗಳಿಗೆ 1.5 ಲಕ್ಷದಿಂದ 2.25 ಲಕ್ಷ ರೂಪಾಯಿ ಸಿಗುಲಿದೆ. ಉಚಿತ ವಸತಿ, ಕಾರು, ಸೆಕ್ಯೂರಿಟಿ, ಮೆಡಿಕಲ್ ಫೆಸಿಲಿಟಿ ಮತ್ತು ಮಕ್ಕಳ ಶಿಕ್ಷಣದಂತಹ ಸರ್ಕಾರಿ ಸೌಲಭ್ಯಗಳ ವೆಚ್ಚ ಸಿಗಲಿದೆ.