IIIT Bangalore Recruitment 2022: ಬೆಂಗಳೂರಿನ ಐಐಐಟಿಯಲ್ಲಿ Research Associate ಹುದ್ದೆಗೆ ಅರ್ಜಿ ಸಲ್ಲಿಸಿ

By Suvarna News  |  First Published Dec 26, 2021, 10:42 PM IST
  • ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು 
  • ಸಂಶೋಧನಾ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದ  IIIT ಬೆಂಗಳೂರು
  • ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ

ಬೆಂಗಳೂರು(ಡಿ.26): ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು (International Institute of Information Technology Bangalore -IIITB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಸಂಶೋಧನಾ ಸಹಾಯಕ (Research Associate)​ ಹುದ್ದೆಗಳು ಖಾಲಿ ಇದ್ದು, ಬಿಇ/ಬಿ.ಟೆಕ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈಗಾಗಲೇ ಅರ್ಜಿ  ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last Date)ವಾಗಿದೆ. ಹೆಚ್ಚಿನ ಮಾಹಿತಿಗಾಗಿ iiitb.ac.in ಗೆ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಇಲ್ಲಿನ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಕಂಪ್ಯೂಟರ್​ ಸೈನ್ಸ್​/ ಕಂಪ್ಯೂಟರ್ ಎಂಜಿನಿಯರಿಂಗ್​/ ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​/ ಮೆಕ್ಯಾನಿಕಲ್​ ಎಂಜಿನಿಯರಿಂಗ್​/ ಮಾಹಿತಿ ತಂತ್ರಜ್ಞಾನದಲ್ಲಿ ಬಿಇ, ಬಿ.ಟೆಕ್ ಪದವಿ​ ಪೂರ್ಣಗೊಳಿಸಿರಬೇಕು. 

Tap to resize

Latest Videos

undefined

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇಲ್​ ಐಡಿ- opportunities@iiitb.ac.in ಗೆ ಕಳುಹಿಸಲು ಕೋರಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

WIPRO RECRUITMENT 2022: ಎಂಜಿನಿಯರಿಂಗ್​ ಅಭ್ಯರ್ಥಿಗಳಿಗೆ ವಿಪ್ರೋ ಭರ್ಜರಿ ಆಫರ್, ಹೊಸಬರಿಗೆ ಮಾತ್ರ ಅವಕಾಶ

ಹಟ್ಟಿ ಚಿನ್ನದ ಗಣಿಯಲ್ಲಿ 1 ಲಕ್ಷಕ್ಕೂ ಅಧಿಕ ವೇತನದ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ: ರಾಯಚೂರಿನ (Raichur) ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ (Hutti Gold Mines Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್ (Manager), ಡಿಜಿಎಂ, ಜನರಲ್ ಮ್ಯಾನೇಜರ್ (General Manager) ಹೀಗೆ ಒಟ್ಟು 4 ಹುದ್ದೆಗಳು ಖಾಲಿ ಇದ್ದು, ಬಿಇ, ಪಿಎಚ್​.ಡಿ. ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ (Application) ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಲು ಜನವರಿ 21, 2022 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಂಪೆನಿಯ https://huttigold.karnataka.gov.in/ ಗೆ ಭೇಟಿ ನೀಡಿ ವಿವರಣೆ ಪಡೆದುಕೊಳ್ಳಬಹುದು.

ಜನರಲ್ ಮ್ಯಾನೇಜರ್- 1, ಡೆಪ್ಯುಟಿ ಜನರಲ್ ಮ್ಯಾನೇಜರ್-1, ಸೀನಿಯರ್ ಮ್ಯಾನೇಜರ್ -1, ಮ್ಯಾನೇಜರ್ -1 ಹೀಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಯಚೂರಿನ ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ ಅಧಿಸೂಚನೆ ಹೊರಡಿಸಿದೆ.

UPSC Recruitment 2022: ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

ಶೈಕ್ಷಣಿಕ ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನರಲ್ ಮ್ಯಾನೇಜರ್- ಮೈನಿಂಗ್​ ವಿಭಾಗದಲ್ಲಿ ಎಂಜಿನಿಯರಿಂಗ್ (BE) ಪೂರ್ಣಗೊಳಿಸಿರಬೇಕು.
ಡೆಪ್ಯುಟಿ ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ - BE, ಎಂಎಸ್ಸಿ, ಪಿಎಚ್​​ಡಿ, ಸ್ನಾತಕೋತ್ತರ ಪದವಿ, ಎಂಬಿಎ ಮಾಡಿರಬೇಕು.
ಮ್ಯಾನೇಜರ್ - ಮಿನರಲ್​ ಡ್ರೆಸ್ಸಿಂಗ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಕೆಮಿಕಲ್ ಎಂಜಿನಿಯರಿಂಗ್​ ಓದಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ ಮತ್ತು ವಿಧಾನ: ಅಭ್ಯರ್ಥಿಗಳು  ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಂಡ ವಿಳಾಸಕ್ಕೆ ಕಳುಹಿಸಿ
I/c ಎಕ್ಸಿಕ್ಯೂಟಿವ್ ಡೈರೆಕ್ಟರ್
ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್​
PO ಹಟ್ಟಿ- 584115
ರಾಯಚೂರು ಜಿಲ್ಲೆ
ಕರ್ನಾಟಕ

click me!