UPSC Recruitment 2022: ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ

By Suvarna News  |  First Published Dec 26, 2021, 12:35 PM IST

* ಕೇಂದ್ರ ಲೋಕಸೇವಾ ಆಯೋಗವು ಖಾಲಿ ಇರುವ ನಾನಾ ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ
* ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
* 13 ಜನವರಿ ಅರ್ಜಿ ಸಲ್ಲಿಸಲು ಕೊನೆಯ ದಿನ


ಬೆಂಗಳೂರು(ಡಿ.26):ಕೇಂದ್ರ ಲೋಕಸೇವಾ ಆಯೋಗ (Union Publice Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 187 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  13 ಜನವರಿ 2022 ರೊಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಸಹಾಯಕ ಕಮಿಷನರ್ (Asistant Commissioner), ಸಹಾಯಕ ಇಂಜಿನಿಯರ್ (Assistant Engineer), ಜೂನಿಯರ್ ಟೈಮ್ ಸ್ಕೇಲ್ (Junior Time Scale), ಆಡಳಿತಾಧಿಕಾರಿ (Administrative Officer) ಮತ್ತು ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳು ಸೇರಿ ಒಟ್ಟು 187 ಹುದ್ದೆಗಳನ್ನು ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. 

ಸಹಾಯಕ ಆಯುಕ್ತರ (Asistant Commissioner) 2 ಹುದ್ದೆಗಳು, ಸಹಾಯಕ ಇಂಜಿನಿಯರ್ (Assistant Engineer) 157 ಹುದ್ದೆಗಳು,  ಜೂನಿಯರ್ ಟೈಮ್ ಸ್ಕೇಲ್ (Junior Time Scale) 17 ಹುದ್ದೆಗಳು, ಆಡಳಿತಾಧಿಕಾರಿ (Administrative Officer) ಒಂಬತ್ತು ಹುದ್ದೆಗಳು ಮತ್ತು ಸಹಾಯಕ ಪ್ರಾಧ್ಯಾಪಕ (Assistant Professor) ಎರಡು ಹುದ್ದೆಗಳು ಖಾಲಿ ಇವೆ. ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಕ್ಷೇತ್ರದಲ್ಲಿ ಪದವಿ/ಸ್ನಾತಕೋತ್ತರ ಪದವಿಯ ಅರ್ಹತೆಯನ್ನು ಹೊಂದಿರಬೇಕು.  ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Tap to resize

Latest Videos

ಸಹಾಯಕ ಕಮಿಷನರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕೃಷಿ ಅರ್ಥಶಾಸ್ತ್ರ ಅಥವಾ ಕೃಷಿ ವಿಸ್ತರಣೆ ಅಥವಾ ಕೃಷಿ ವಿಜ್ಞಾನ ಅಥವಾ ಕೀಟಶಾಸ್ತ್ರ ಅಥವಾ ನೆಮಟಾಲಜಿ ಅಥವಾ ಜೆನೆಟಿಕ್ಸ್ ಮತ್ತು ಸಸ್ಯ ತಳಿ ಅಥವಾ ಕೃಷಿ ಸಸ್ಯಶಾಸ್ತ್ರ ಅಥವಾ ಸಸ್ಯ ಜೈವಿಕ ತಂತ್ರಜ್ಞಾನ ಅಥವಾ ಸಸ್ಯ ರೋಗಶಾಸ್ತ್ರ ಅಥವಾ ಸಸ್ಯ ಶರೀರಶಾಸ್ತ್ರ ಅಥವಾ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಥವಾ  ಕೃಷಿ ವಿಜ್ಞಾನ ತಂತ್ರಜ್ಞಾನ ಅಥವಾ ಕೃಷಿ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.  ಸಹಾಯಕ ಇಂಜಿನಿಯರ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ (ಅಜೈವಿಕ), ರಸಾಯನಶಾಸ್ತ್ರ (ಸಾವಯವ) ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಅಗತ್ಯವಿರುವ ವಿಭಾಗದಲ್ಲಿ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಗಳಿಸಿರಬೇಕು.  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 13 ಟೆಕ್ನಿಷಿಯನ್

ಜೂನಿಯರ್ ಟೈಮ್ ಸ್ಕೇಲ್  ಹುದ್ದಗೆ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.  ಅಥವಾ ಸಮಾಜ ಕಾರ್ಯ ಅಥವಾ ಕಾರ್ಮಿಕ ಕಲ್ಯಾಣ ಅಥವಾ ಕೈಗಾರಿಕಾ ಸಂಬಂಧಗಳು ಅಥವಾ ಸಿಬ್ಬಂದಿ ನಿರ್ವಹಣೆ ಅಥವಾ ಕಾರ್ಮಿಕ ಕಾನೂನಿನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿಪ್ಲೊಮಾ ಮಾಡಿರಬೇಕು. ಆಡಳಿತಾಧಿಕಾರಿ ಹುದ್ದಗೆ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಯು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಆಯುರ್ವೇದ ಮೆಡಿಸಿನ್‌ನಲ್ಲಿ ಪದವಿಯನ್ನು ಹೊಂದಿರಬೇಕು.

IMA Recruitment 2022: 10,12ನೇ ತರಗತಿ ಆದವರಿಗೆ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಕೆಲಸ

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಕನಿಷ್ಠ  30 ವರ್ಷದಿಂದ  40 ವರ್ಷಗಳಗೆ ಇರಬೇಕು. ಪೋಸ್ಟ್‌ಗಾಗಿ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದೆ.ಇನ್ನು ಅರ್ಜಿ ಶುಲ್ಕ 25 ರೂ.ಪಾವತಿಸಬೇಕು. SC, ST, PwBD, ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳು ಜನ್ಮ ದಿನಾಂಕ, ಚಿತ್ರ, ಸಹಿ, ಶಿಕ್ಷಣ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕು. ಪೋಸ್ಟ್‌ಗಳಿಗೆ ಆಯ್ಕೆ ಪ್ರಕ್ರಿಯೆಯು ಸಂದರ್ಶನವನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳ ಹಾರ್ಡ್ ಪ್ರತಿಗಳನ್ನು ನೀಡಬೇಕು.

click me!