RCFL Recruitment 2022: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ನೇಮಕಾತಿ

By Suvarna News  |  First Published Mar 13, 2022, 5:22 PM IST

ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ಖಾಲಿ ಇರುವ ಆಪರೇಟರ್ ಕೆಮಿಕಲ್ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಸೇರಿ ಒಟ್ಟು 135 ಹುದ್ದೆಗಳಿಗೆ   ನೇಮಕಾತಿ ನಡೆಯುತ್ತಿದ್ದು, ಮಾರ್ಚ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಮಾ.13): ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತ (Rashtriya Chemicals and Fertilizers Limited- RCFL) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಪರೇಟರ್ ಕೆಮಿಕಲ್ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಸೇರಿ ಒಟ್ಟು 135 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ www.rcfltd.com ಗೆ ಭೇಟಿ ನೀಡಬಹುದು.

ಒಟ್ಟು 135 ಹುದ್ದೆಗಳ ಮಾಹಿತಿ
ಆಪರೇಟರ್ ಕೆಮಿಕಲ್ ಟ್ರೈನಿ (Operator Chemical Trainee ): 133 ಹುದ್ದೆಗಳು
ಜೂನಿಯರ್ ಫೈರ್‌ಮ್ಯಾನ್ ಗ್ರೇಡ್ - ||| (Junior Fireman Grade-|||): 4 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ಖಾಲಿ ಇರುವ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ರಾಸಾಯನಿಕ ಎಂಜಿನಿಯರಿಂಗ್  Bsc, ರಸಾಯನ ಶಾಸ್ತ್ರದಲ್ಲಿ Bsc, ಡಿಪ್ಲೊಮಾ ಮಾಡಿರಬೇಕು.

Indian Army SSC Recruitment 2022: ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ಟೆಕ್ನಿಕಲ್ ಕೋರ್ಸ್‌ ನೇಮಕಾತಿ

ಅರ್ಜಿ ಶುಲ್ಕ: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ಖಾಲಿ ಇರುವ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/OBC/EWS ಅಭ್ಯರ್ಥಿಗಳು  ₹700 ಅರ್ಜಿ ಶುಲ್ಕ ಪಾವತಿಸಬೇಕು. SC/ST/PwBD/ExSM ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ವಯೋಮಿತಿ: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ಖಾಲಿ ಇರುವ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 29 ವರ್ಷ, SC/STಗೆ ಗರಿಷ್ಠ 34 ವರ್ಷ, OBCಗೆ 32 ವರ್ಷ, PwBDಗೆ ಗರಿಷ್ಠ 44 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ಖಾಲಿ ಇರುವ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು  ಟ್ರೇಡ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. 

ವೇತನ ವಿವರ: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ಖಾಲಿ ಇರುವ ಟ್ರೈನಿ ಮತ್ತು ಜೂನಿಯರ್ ಫೈರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರ ವೇತನ ದೊರೆಯಲಿದೆ.
ಆಪರೇಟರ್ ಕೆಮಿಕಲ್ ಟ್ರೈನಿ ಹುದ್ದೆಗೆ : ₹22,000 ರಿಂದ ₹60,000
ಜೂನಿಯರ್ ಫೈರ್‌ಮ್ಯಾನ್ ಗ್ರೇಡ್ - ||| ಹುದ್ದೆಗೆ: ₹18,000 ರಿಂದ ₹42,000 

MMRC RECRUITMENT 2022: ಮುಂಬೈ ಮೆಟ್ರೋ ಇಲಾಖೆಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ 

ವಿವಿಧ ಹುದ್ದೆಗಳಿಗೆ ಐಆರ್‌ಇಡಿಎ ನೇಮಕಾತಿ: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತ (India Renewable Energy Development Agency Limited-IREDA)ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 16 ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ www.ireda.in ಗೆ ಭೇಟಿ ನೀಡಲು ಕೋರಲಾಗಿದೆ.

ಮುಖ್ಯ ಅಪಾಯ ಅಧಿಕಾರಿ (Chief Risk Officer): 1 ಹುದ್ದೆ
ಮುಖ್ಯಸ್ಥ (ಮೇಲ್ವಿಚಾರಣೆ ಮತ್ತು ರಿಕವರಿ): 1 ಹುದ್ದೆ
ಮುಖ್ಯಸ್ಥ (ಆಂತರಿಕ ಆಡಿಟ್ -Internal Audit): 1 ಹುದ್ದೆ
ಮುಖ್ಯಸ್ಥ (Chief-ಕಾನೂನು): 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು-ಅಪಾಯ ನಿರ್ವಹಣೆ (Deputy General Manager-Risk Management): 1 ಹುದ್ದೆ
ಮುಖ್ಯ ವ್ಯವಸ್ಥಾಪಕ (Chief Manager)- ಮೇಲ್ವಿಚಾರಣೆ ಮತ್ತು ರಿಕವರಿ): 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು- ಆಂತರಿಕ ಲೆಕ್ಕಪರಿಶೋಧನೆ (Deputy General Manager- Internal Audit): 1 ಹುದ್ದೆ 
ಮುಖ್ಯ ವ್ಯವಸ್ಥಾಪಕ -ಕಾನೂನು (Chief Manager -Law): 1 ಹುದ್ದೆ
ಪ್ರೋಟೋಕಾಲ್ ಅಧಿಕಾರಿ(Protocol Officer)/ತಾಂತ್ರಿಕ ಸಹಾಯಕ(Technical Assistant)/ವಿಶೇಷ ಕರ್ತವ್ಯದ ಅಧಿಕಾರಿ(Officer on Special Duty): 8 ಹುದ್ದೆಗಳು

click me!