Indian Army SSC Recruitment 2022: ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ಟೆಕ್ನಿಕಲ್ ಕೋರ್ಸ್‌ ನೇಮಕಾತಿ

By Suvarna News  |  First Published Mar 13, 2022, 12:44 PM IST

ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ನಲ್ಲಿ ಖಾಲಿ ಇರುವ 191 ಟೆಕ್ನಿಕಲ್  ಹುದ್ದೆಗಳ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಎಪ್ರಿಲ್ 6 ಕೊನೆಯ ದಿನವಾಗಿದೆ.


ಬೆಂಗಳೂರು(ಮಾ.12): ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ (Short Service Commission ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇಂಜಿನಿಯರಿಂಗ್ ಪದವೀಧರರಾಗಿರುವ ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳೆ ಹಾಗೂ ವಿಧವೆಯರು  ಶಾರ್ಟ್ ಸರ್ವಿಸ್ ಕಮಿಷನ್ ನಲ್ಲಿರುವ 191 ಟೆಕ್ನಿಕಲ್ (Technical) ಹುದ್ದೆಗಳ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಎಪ್ರಿಲ್ 6, 2022, ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಬಹುದು.

ನೇಮಕಾತಿ ಅಧಿಸೂಚನೆ ಪ್ರಕಾರ  ಭಾರತೀಯ ಸೇನೆಯ SSC ಟೆಕ್ನಿಕಲ್  ಹುದ್ದೆಯ ಕೋರ್ಸ್ ಗಳು 2022ರ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ಪ್ರಾರಂಭವಾಗಲಿದೆ.

Tap to resize

Latest Videos

undefined

ಒಟ್ಟು 191 ಹುದ್ದೆಗಳ ಮಾಹಿತಿ ಇಂತಿದೆ
ಮಹಿಳೆಯರಿಗೆ : 14 ಹುದ್ದೆಗಳು
ರಕ್ಷಣಾ ಸಿಬ್ಬಂದಿಯ ವಿಧವೆಯರಿಗೆ : 2 ಹುದ್ದೆಗಳು
ಪುರುಷರಿಗೆ 175 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ನಲ್ಲಿ ಖಾಲಿ ಇರುವ 191 ಟೆಕ್ನಿಕಲ್  ಹುದ್ದೆಗಳ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಮಾಡಿರಬೇಕು. ಇಂಜಿನಿಯರಿಂಗ್ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿರುವವರು ಕೂಡ ಅರ್ಜಿ ಸಲ್ಲಿಸಬಹುದು. 

ವಯೋಮಿತಿ: ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ನಲ್ಲಿ ಖಾಲಿ ಇರುವ 191 ಟೆಕ್ನಿಕಲ್  ಹುದ್ದೆಗಳ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಅಕ್ಟೋಬರ್ 1, 2022ಕ್ಕೆ ಅನುಗುಣವಾಗಿ 20 ರಿಂದ 27 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ವಿಧವೆಯರಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

VIJAYAPURA COOPERATIVE BANK RECRUITMENT 2022: ವಿಜಯಪುರ ಸಹಕಾರಿ ಬ್ಯಾಂಕ್ ನೇಮಕಾತಿ 

ನರ್ಸಿಂಗ್ ಟ್ಯೂಟರ್ ಹುದ್ದೆಗೆ ಬಿಇಸಿಐಎಲ್‌ ನೇಮಕಾತಿ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (Broadcast Engineering Consultants India Limited) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.  ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 2 ನರ್ಸಿಂಗ್ ಟ್ಯೂಟರ್ (Nursing Tutor)  ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 22 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.becil.com ಆಸಕ್ತರು ಭೇಟಿ ನೀಡಬಹುದು. 

ಶೈಕ್ಷಣಿಕ ವಿದ್ಯಾರ್ಹತೆ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ನರ್ಸಿಂಗ್ ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಬಿಎಸ್‌ಸಿ, ಡಿಪ್ಲೊಮಾ,  ಸಿಸ್ಟರ್ ಟ್ಯೂಟರ್ ಕೋರ್ಸ್‌ ಮಾಡಿರಬೇಕು.  ಸ್ಟಾಫ್ ನರ್ಸ್  ಅಥವಾ ಹೋಮ್ ಸಿಸ್ಟರ್ ಆಗಿ  ಐದು ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿರಬೇಕು. 

HPCL Recruitment 2022: ಒಟ್ಟು 25 ಮ್ಯಾನೇಜರ್ ಹುದ್ದೆಗಳಿಗೆ ಹೆಚ್‌ಪಿಸಿಎಲ್‌ ನೇಮಕಾತಿ

ವಯೋಮಿತಿ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ನರ್ಸಿಂಗ್ ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 30.  ಸರಕಾರದ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.s 

click me!