Post Office Recruitment 2022: ಅಂಚೆ ಇಲಾಖೆಯ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Jan 25, 2022, 6:49 PM IST

 ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.   ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 15 ಕೊನೆಯ ದಿನಾಂಕವಾಗಿದೆ. 


ಬೆಂಗಳೂರು(ಜ.25): ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಒಟ್ಟು 29 ಸ್ಟಾಫ್​ ಕಾರ್ ಡ್ರೈವರ್ (Staff Car Driver) ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಜನವರಿ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 15 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.indiapost.gov.in ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

Tap to resize

Latest Videos

undefined

ಕೆಲಸದ ಅನುಭವ:  ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಡ್ರೈವಿಂಗ್ ಲೈಟ್​ ಮತ್ತು ಹೆವಿ ಮೋಟಾರ್​ ವೆಹಿಕಲ್​ನಲ್ಲಿ ಕನಿಷ್ಠ 3 ವರ್ಷ ಅನುಭವ ಹೊಂದಿರಬೇಕು.

KPTCL RECRUITMENT 2022: ವಿದ್ಯುತ್ ಪ್ರಸರಣ ನಿಗಮದಲ್ಲಿ 1492 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ವಯೋಮಿತಿ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18-27 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 19,900 ದಿಂದ 63,200 ವೇತನ ದೊರೆಯಲಿದೆ.

Mangalore University Recruitment 2022: ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bengaluru Metro Rail Corporation Limited- BMRCL)​ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ ಮ್ಯಾನೇಜರ್‌, ಸೀನಿಯರ್ ಟ್ರಾನ್ಸ್​​​ಪೋರ್ಟ್​​ ಪ್ಲ್ಯಾನರ್  ಸೇರಿ ಒಟ್ಟು 11 ಹುದ್ದೆಗಳು ಖಾಲಿ ಇವೆ. ಜನವರಿ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​(Online) ಮತ್ತು ಆಫ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ  ಅಧಿಕೃತ ವೆಬ್​ಸೈಟ್​ https://english.bmrc.co.in/ ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗನುಸಾರವಾಗಿ ಓದಿರಬೇಕು
ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​-ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ, ಬಿ.ಟೆಕ್ ಮಾಡಿರಬೇಕು.
ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- ಸಿವಿಲ್ ಎಂಜಿನಿಯರಿಂಗ್, ಟ್ರಾನ್ಸ್​ಪೋರ್ಟ್​ ಪ್ಲ್ಯಾನಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)- ಎಂಬಿಎ, ಎಕನಾಮಿಕ್ಸ್​/ಕಾಮರ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​
ಕೆ.ಹೆಚ್​. ರಸ್ತೆ , ಶಾಂತಿನಗರ
ಬೆಂಗಳೂರು-560027

click me!