Coast Guard Recruitment 2022: 10th ಪಾಸಾದವರಿಗೆ ಕರಾವಳಿ ಭದ್ರತಾಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ

Published : Jan 24, 2022, 09:58 PM IST
Coast Guard Recruitment 2022: 10th ಪಾಸಾದವರಿಗೆ ಕರಾವಳಿ ಭದ್ರತಾಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ

ಸಾರಾಂಶ

ಭಾರತೀಯ ಕರಾವಳಿ ಭದ್ರತಾಪಡೆ ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.  ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಬೆಂಗಳೂರು(ಜ.24): ಭಾರತೀಯ ಕರಾವಳಿ ಭದ್ರತಾಪಡೆ (Indian Coast Guard - ICG) ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ (Group C Civilian) ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಇಂಜಿನ್ ಡ್ರೈವರ್, ಸಾರಂಗ್ ಲಾಸ್ಕರ್, ಫೈರ್‌ಮ್ಯಾನ್, ಮೋಟಾರ್ ಟ್ರಾನ್ಸ್‌ಪೋರ್ಟ್ ಡ್ರೈವರ್  ಸೇರಿ ಒಟ್ಟು 80 ಹುದ್ದೆಗಳು ಖಾಲಿ ಇದ್ದು, ತ್ವರಿತವಾಗಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಆರಂಭಿಸೋದಾಗಿ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಆಫ್ಲೈ‌ನ್ ​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://www.indiancoastguard.gov.in/ ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 80 ಹುದ್ದೆಗಳ ಮಾಹಿತಿ ಇಲ್ಲಿದೆ
ಇಂಜಿನ್ ಚಾಲಕ - 8
ಮೋಟಾರು ಸಾರಿಗೆ ಚಾಲಕ - 24
ಸಾರಂಗ್ ಲಾಸ್ಕರ್ - 3
ICE ಫಿಟ್ಟರ್ (ನುರಿತ) - 6
ಅಗ್ನಿಶಾಮಕ ಸಿಬ್ಬಂದಿ - 6
ಸ್ಟೋರ್ ಕೀಪರ್ ಗ್ರೇಡ್ II - 4
ಸ್ಪ್ರೇ ಪೇಂಟರ್ - 1
MT ಫಿಟ್ಟರ್/ MTಟೆಕ್‌ನಿಶಿಯನ್/ MTಮೆಕ್ಯಾನಿಕ್ – 6
MTS (ಮಾಲಿ) - 3
MTS (ಪ್ಯೂನ್) -10
MTS (ಡಾಫ್ಟರಿ) - 3
MTS (ಸ್ವೀಪರ್) - 3
ಎಲೆಕ್ಟ್ರಿಕಲ್ ಫಿಟ್ಟರ್ (ಅರೆ ನುರಿತ) - 1
ಶೀಟ್ ಮೆಟಲ್ ವರ್ಕರ್ (ಅರೆ ನುರಿತ) - 1
ಕಾರ್ಮಿಕ - 1

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಕರಾವಳಿ ಭದ್ರತಾಪಡೆ  ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ  ವಿದ್ಯಾರ್ಹತೆ ಮಾಡಿರಬೇಕು.

ಇಂಜಿನ್ ಡ್ರೈವರ್ (ಗುಂಪು ಸಿ), ಸಾರಂಗ್ ಲಾಸ್ಕರ್, ಫೈರ್‌ಮ್ಯಾನ್, ಮೋಟಾರ್ ಟ್ರಾನ್ಸ್‌ಪೋರ್ಟ್ ಡ್ರೈವರ್, ಫೈರ್‌ಮ್ಯಾನ್, ICE ಫಿಟ್ಟರ್, ಸ್ಪ್ರೇ ಪೇಂಟರ್,MT ಫಿಟ್ಟರ್/ MTಟೆಕ್‌ನಿಶಿಯನ್/ MTಮೆಕ್ಯಾನಿಕ್ : ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಮೆಟ್ರಿಕ್ಯುಲೇಷನ್ ಅಥವಾ ಅದಕ್ಕೆ ಸಮಾನಾದ ವಿದ್ಯಾರ್ಹತೆ ಪಡೆದಿರಬೇಕು.ಸ್ಟೋರ್ ಕೀಪರ್: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಬಹುಕಾರ್ಯ ಸಿಬ್ಬಂದಿ (Multitasking staff): ಅರ್ಜಿದಾರರು ಸಂಬಂಧಿತ ಕ್ಷೇತ್ರದಲ್ಲಿ ಎರಡು ಅನುಭವದೊಂದಿಗೆ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
ಕೆಲಸಗಾರ, ಎಲೆಕ್ಟ್ರಿಕಲ್ ಫಿಟ್ಟರ್, ಕಾರ್ಮಿಕ: ಅರ್ಜಿದಾರರು ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಮೆಟ್ರಿಕ್ಯುಲೇಷನ್/ಅದಕ್ಕೆ ಸಮಾನಾದ ವಿದ್ಯಾರ್ಹತೆ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐಟಿಐ ಮಾಡಿರಬೇಕು. ವ್ಯಾಪಾರದಲ್ಲಿ ಮೂರು ವರ್ಷಗಳ ಅನುಭವ ಇರಬೇಕು.

Mangalore University Recruitment 2022: ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ: ಭಾರತೀಯ ಕರಾವಳಿ ಭದ್ರತಾಪಡೆ  ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 2 ಜುಲೈ 1997 ಮತ್ತು 1 ಜನವರಿ 2003 ರ ನಡುವೆ ಜನಿಸಿದವರಾಗಿರಬೇಕು.

ವೇತನ ವಿವರ: ಭಾರತೀಯ ಕರಾವಳಿ ಭದ್ರತಾಪಡೆ  ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ. ಅಂದರೆ 56100 ರಿಂದ 110700 ರೂ ವೇತನ ನಿಗದಿಯಾಗಿದೆ.

DRDO Apprentice Recruitment 2022: ಆರ್‌ಸಿಐ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ DRDO

ಆಯ್ಕೆ ಪ್ರಕ್ರಿಯೆ:  ಭಾರತೀಯ ಕರಾವಳಿ ಭದ್ರತಾಪಡೆ  ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಂಡಳಿಯು ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ.

ಅರ್ಜಿ ಶುಲ್ಕ:  ಭಾರತೀಯ ಕರಾವಳಿ ಭದ್ರತಾಪಡೆ  ಖಾಲಿ ಇರುವ ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ಬಗೆಗಿನ ಮಾಹಿತಿ ತಿಳಿಯಲು ಇಲಾಖೆಯ ಅಧಿಕೃತ ವೆಬ್‌ತಾಣ https://www.indiancoastguard.gov.in/ಗೆ  ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ:
The Commander
Coast Guard Region (E)
Near Napier Bridge
Chennai- 600009.

 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್