DRDO Apprentice Recruitment 2022: ಆರ್‌ಸಿಐ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ DRDO

By Suvarna News  |  First Published Jan 24, 2022, 1:17 PM IST

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇಮಾರತ್ ಸಂಶೋಧನಾ ಕೇಂದ್ರದಲ್ಲಿ  ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಜ.24): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation-DRDO), ಇಮಾರತ್ ಸಂಶೋಧನಾ ಕೇಂದ್ರದಲ್ಲಿ (Research Centre Imarat -ಆರ್‌ಸಿಐ)  ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಸಂಸ್ಥೆಯು 150 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಜನವರಿ 25 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 7 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.  ಹೆಚ್ಚಿನ ಮಾಹಿತಿಗೆ  ಇಲಾಖೆಯ ಅಧಿಕೃತ ವೆಬ್‌ಸೈಟ್ https://rcilab.in/ ಗೆ ಭೇಟಿ ನೀಡಬಹುದು.

ಒಟ್ಟು 150 ಹುದ್ದೆಗಳ ವಿವರ:
ಗ್ರಾಜ್ಯುವೇಟ್  ಅಪ್ರೆಂಟಿಸ್: 40 ಹುದ್ದೆಗಳು
ಟೆಕ್ನಿಶಿಯನ್ (ಡಿಪ್ಲೋಮಾ) ಅಪ್ರೆಂಟಿಸ್: 60 ಹುದ್ದೆಗಳು
ಟ್ರೇಡ್ ಅಪ್ರೆಂಟಿಸ್: 50 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಡಿಆರ್‌ಡಿಒ  ಅಪ್ರೆಂಟಿಸ್  ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಹುದ್ದೆಗೆ ಅನುಸಾರ ವಿದ್ಯಾಭ್ಯಾಸ ಹೊಂದಿರಬೇಕು.
ಗ್ರಾಜ್ಯುವೇಟ್  ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು B.E/B.Tech in (ECE, EEE, CSE, Mechanical, Chemical),B.Com ಮತ್ತು BSc.
ಟೆಕ್ನಿಶಿಯನ್ (ಡಿಪ್ಲೋಮಾ) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು  ECE, EEE, CSE, ಮೆಕ್ಯಾನಿಕಲ್ ಮತ್ತು ಕೆಮಿಕಲ್] ನಲ್ಲಿ ಡಿಪ್ಲೊಮಾ.
ಟ್ರೇಡ್ ಅಪ್ರೆಂಟಿಸ್: ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ವೆಲ್ಡರ್ ನಲ್ಲಿ ITI ಪಾಸ್ ಮಾಡಿರಬೇಕು.

ವಯೋಮಿತಿ: ಡಿಆರ್‌ಡಿಒ ಅಪ್ರೆಂಟಿಸ್  ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 1 , 2022ಕ್ಕೆ ಸನುಗುಣವಾಗಿ 18 ವರ್ಷಕ್ಕಿಂತ ಕೆಳಗಿರಬಾರದು.

ಆಯ್ಕೆ ಪ್ರಕ್ರಿಯೆ:  ಡಿಆರ್‌ಡಿಒ ಅಪ್ರೆಂಟಿಸ್  ಹುದ್ದೆಗೆ ಅರ್ಜಿ ಸಲ್ಲಿಸಿಸ ಅಭ್ಯರ್ಥಿಗಳನ್ನು  ಶೈಕ್ಷಣಿಕ ಮೆರಿಟ್, ಲಿಖಿತ ಪರೀಕ್ಷೆ , ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

IOCL RECRUITMENT 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

CVRDE ವಿಭಾಗದಲ್ಲಿ ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಅರ್ಜಿ ಆಹ್ವಾನಿಸಿದ DRDO: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation-DRDO) - ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (Combat Vehicles Research & Development Establishment-CVRDE) ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.  ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಈ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳ ಒಳಗೆ (ಜನವರಿ 27, 2022) ಒಳಗೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ನಿಗದಿತ ನಮೂನೆಯ ಮೂಲಕ ಕಳುಹಿಸಬಹುದು. ಹೆಚ್ಚಿನ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rac.gov.in ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಡಿಆರ್‌ಡಿಒ ಜೂನಿಯರ್ ರಿಸರ್ಚ್ ಫೆಲೋ ( Junior Research Fellow ) ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್​ ಪೂರ್ಣಗೊಳಿಸಿರಬೇಕು. ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಮೊದಲ ವಿಭಾಗದಲ್ಲಿ ಎಂಇ/ಎಂಟೆಕ್​ ಅಥವಾ ಗೇಟ್​ ಸ್ಕೋರ್ ಪೂರ್ಣಗೊಳಿಸಿರಬೇಕು.

IISc Recruitment 2022: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ

ವಯೋಮಿತಿ: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಕೆಟಗರಿಯ  ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳ ವಯಸ್ಸು ಗರಿಷ್ಠ  31 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳ ವಯಸ್ಸು ಗರಿಷ್ಠ 33 ವರ್ಷ ಮೀರಿರಬಾರದು. ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ಪ್ರಕ್ರಿಯೆ: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಸ್ಕ್ರೀನಿಂಗ್ ಪರೀಕ್ಷೆ ಮತ್ತು CBT/ಲಿಖಿತ ಪರೀಕ್ಷೆಯ ಒಟ್ಟು ಅಂಕಗಳ ಶಿಸ್ತುವಾರು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.  ಅಂತಿಮ ಫಲಿತಾಂಶವನ್ನು RAC ವೆಬ್‌ಸೈಟ್ rac.gov.in ನಲ್ಲಿ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 31,000 ಮಾಸಿಕ ವೇತನ ಸಿಗಲಿದೆ.  ಮತ್ತು ಚೆನ್ನೈನಲ್ಲಿ ಉದ್ಯೋಗ ಮಾಡಬೇಕಾಗುತ್ತದೆ.

click me!