ಹಿಂದೆ ನೇಮಕಾತಿಗೆ ಒಂದೂವರೆ ವರ್ಷ, ಈಗ ಕೆಲವೇ ತಿಂಗಳು: 70000 ಜನರಿಗೆ ಉದ್ಯೋಗ ಪತ್ರ ವಿತರಣೆ ವೇಳೆ ‘ಕೈ’ ವಿರುದ್ಧ ಮೋದಿ ಚಾಟಿ

By Kannadaprabha News  |  First Published Jun 14, 2023, 3:28 PM IST

2014ರಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸರ್ಕಾರದಲ್ಲಿ ಪಾರದರ್ಶಕತೆ ಬಂದಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತ ಅಂತ್ಯವಾಗಿದೆ’ ಎಂದು ಕಾಂಗ್ರೆಸ್‌ ಪಕ್ಷದ ಹೆಸರತ್ತದೇ ಪ್ರಧಾನಿ ಕುಟುಕಿದರು.


ನವದೆಹಲಿ (ಜೂನ್ 14, 2023): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ‘ರೋಜಗಾರ್‌ ಮೇಳ’ ಯೋಜನೆಯಡಿ ಖಾಲಿಯಿದ್ದ ವಿವಿಧ ಇಲಾಖೆಗಳ ಹುದ್ದೆಗಳಿಗೆ 70,000ಕ್ಕೂ ಅಧಿಕ ಜನರಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು. ಬಳಿಕ ಸರ್ಕಾರಿ ಉದ್ಯೋಗ ಪಡೆದ ಯುವಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ ‘ಸರ್ಕಾರಿ ನೌಕರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಎಸಗುವ ಮೂಲಕ ಕುಟುಂಬ ರಾಜಕಾರಣ ಪಕ್ಷಗಳು ಯುವಕರಿಗೆ ದ್ರೋಹ ಬಗೆದಿವೆ. ವಿವಿಧ ಹುದ್ದೆಗಳಿಗೆ ತಮ್ಮ ‘ರೇಟ್‌ ಕಾರ್ಡ್‌’ ಮೂಲಕ ಯುವಕರನ್ನು ಲೂಟಿ ಮಾಡಿವೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ‘ನಮ್ಮ ಸರ್ಕಾರ ಯುವಕರ ಉಜ್ವಲ ಭವಿಷ್ಯವನ್ನು ರಕ್ಷಿಸುತ್ತಿದೆ. ಈ ಹಿಂದೆ ನೇಮಕಾತಿ ಪ್ರಕ್ರಿಯೆಗೆ ಒಂದರಿಂದ ಒಂದೂವರೆ ವರ್ಷ ಬೇಕಾಗಿತ್ತು. ಆದರೆ ಈಗ ಅದು ಪಾರದರ್ಶಕವಾಗಿದ್ದು ಕೆಲವೇ ತಿಂಗಳಲ್ಲಿ ಮುಗಿದು ಹೋಗುತ್ತದೆ. ಕುಟುಂಬ ರಾಜಕಾರಣದ ಪಕ್ಷವು ಕೋಟಿ ಕೋಟಿ ಯುವಕರಿಗೆ ದ್ರೋಹ ಬಗೆದಿತ್ತು. 

Latest Videos

undefined

ಇದನ್ನು ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್‌ ಅಲರ್ಟ್‌: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

2014ರಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸರ್ಕಾರದಲ್ಲಿ ಪಾರದರ್ಶಕತೆ ಬಂದಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತ ಅಂತ್ಯವಾಗಿದೆ’ ಎಂದು ಕಾಂಗ್ರೆಸ್‌ ಪಕ್ಷದ ಹೆಸರತ್ತದೇ ಪ್ರಧಾನಿ ಕುಟುಕಿದರು.

ಇನ್ನು ‘ರೋಜಗಾರ್‌ ಮೇಳ’ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ಪ್ರಮುಖ ಗುರುತಾಗಿದೆ. ಈ ಹೊಸ ನೇಮಕಾತಿಗಳು ಮುಂದಿನ 25 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಹೊಂದಿವೆ’ ಎಂದೂ ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌ ಅಳಿಯ ಪ್ರತೀಕ್‌ ದೋಶಿ ಬಗ್ಗೆ ನಿಮಗೆಷ್ಟು ಗೊತ್ತು? ಮೋದಿ ನೆಚ್ಚಿನ ಅಧಿಕಾರಿಗಳಲ್ಲಿ ಇವರೂ ಒಬ್ರು!

click me!