ONGC Recruitment 2022: ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿ

By Suvarna News  |  First Published Feb 26, 2022, 11:00 AM IST
  • ONGC ಒಟ್ಟು 28 ಹುದ್ದೆಗಳು ಖಾಲಿ ಇದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ
  • ಮಾರ್ಚ್1, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ
  • ಹೆಚ್ಚಿನ ಮಾಹಿತಿಗಾಗಿ www.ongcindia.com ಗೆ ಭೇಟಿ ನೀಡಿ

ಬೆಂಗಳೂರು(ಫೆ.26): ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ (Oil and Natural Gas Corporation Limited-ONGC)ನಲ್ಲಿ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.  ಕಿರಿಯ ಕನ್ಸಲ್ಟೆಂಟ್ (Junior Consultant) ಮತ್ತು ಸಹಾಯಕ ಕನ್ಸಲ್ಟೆಂಟ್ (Associate Consultant) ಸೇರಿ ಒಟ್ಟು 28 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 1 ಆಫ್‌ಲೈನ್ ಅಥವಾ ಈ ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ ongcindia.com ಗೆ ಭೇಟಿ ನೀಡಲು ಕೋರಲಾಗಿದೆ.

ಅರ್ಹತೆ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಕನ್ಸಲ್ಟೆಂಟ್  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಮುಖ್ಯವಾಗಿ ಡ್ರಿಲ್ಲಿಂಗ್ ಕಾರ್ಯಾಚರಣೆಗಳಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವ E3 ರಿಂದ E6 ಹಂತದ ನಿವೃತ್ತ ONGC ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. 

Tap to resize

Latest Videos

ವಯೋಮಿತಿ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಕನ್ಸಲ್ಟೆಂಟ್  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  65 ವರ್ಷದ ಒಳಗಿನವರಾಗಿರಬೇಕು.

BEL RECRUITMENT 2022: ಬೆಂಗಳೂರಿನ BELನಲ್ಲಿ 360 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಕನ್ಸಲ್ಟೆಂಟ್  ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪರೀಕ್ಷೆ, ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ಪರೀಕ್ಷೆಗಳ ದಿನಾಂಕ ಮತ್ತು ಸ್ಥಳವನ್ನು ಅಭ್ಯರ್ಥಿಗಳಿಗೆ ಈ ಮೇಲ್ ಮೂಲಕ ತಿಳಿಸಲಾಗುತ್ತದೆ.

ಉದ್ಯೋಗ ಸ್ಥಳ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಕನ್ಸಲ್ಟೆಂಟ್  ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಅಸ್ಸಾಂ (Assam) ನ ಗುವಾಹಟಿಯಲ್ಲಿ  ಕರ್ತವ್ಯ ನಿರ್ವಹಿಸಬೇಕು.

ವೇತನ ವಿವರ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಕನ್ಸಲ್ಟೆಂಟ್  ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಳಿಗೆ ಮಾಸಿಕ 40,000 ರೂ , ನಿಂದ 66,000 ರೂ ವೇತನ ದೊರೆಯಲಿದೆ.

Shivamogga Court Recruitment 2022: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ ಮತ್ತು ವಿಳಾಸ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಕನ್ಸಲ್ಟೆಂಟ್  ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ONGC ವೆಬ್‌ಸೈಟ್ www.ongcindia.com ಗೆ  ಭೇಟಿ ನೀಡಿ. ಬಳಿಕ ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ ಉದ್ಯೋಗಗಳ ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನು ಡೌನ್‌ಲೋಡ್ ಮಾಡಿ. ಅಗತ್ಯ ಮಾಹಿತಿಗಳನ್ನು ತುಂಬಿ. ಅಗತ್ಯ ದಾಖಲೆಗಳನ್ನು ಇಟ್ಟು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ. ಅಥವಾ sethi_raja@ongc.co.in ಈ ವಿಳಾಸಕ್ಕೆ ಮೇಲ್‌ ಕೂಡ ಮಾಡಬಹುದು.

ಕಾಂಟ್ರ್ಯಕ್ಟ್​ ಸೆಲ್​
ವೆಲ್​ ಸರ್ವಿಸ್​, ಓಟಿ ಕಾಂಪ್ಲೆಕ್ಸ್
ಅಸ್ಸಾಂ 
Contract Cell
Well Services at OT Complex
Assam Asset.

Indian Bank Recruitment 2022: ಖಾಲಿ ಇರುವ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ 

click me!