BEL Recruitment 2022: ಬೆಂಗಳೂರಿನ BELನಲ್ಲಿ 360 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Feb 25, 2022, 10:25 PM IST

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಖಾಲಿ ಇರುವ ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್‌ ಮೂಲಕ ಮಾರ್ಚ್ 10 ರೊಳಗೆ ಅರ್ಜಿ ಸಲ್ಲಿಸಬಹುದು. 


ಬೆಂಗಳೂರು(ಫೆ.25): ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharath Electronics Limited- BEL)  ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 360 ಹುದ್ದೆಗಳು ಖಾಲಿ ಇದ್ದು, ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್‌ ಮೂಲಕ ಮಾರ್ಚ್ 10 ರೊಳಗೆ ಅರ್ಜಿ ಸಲ್ಲಿಸಬಹುದು.  ಆಸಕ್ತ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ bel-india.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಒಟ್ಟು 360  ಹುದ್ದೆಗಳ ಮಾಹಿತಿ ಇಂತಿದೆ:
ಟೆಕ್ನಿಶಿಯನ್ ಅಪ್ರೆಂಟಿಸ್ (Technician Apprentice) - 100 ಹುದ್ದೆಗಳು
ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) - 260 ಹುದ್ದೆಗಳು

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಬಿಇಎಲ್ (BEL) ನಲ್ಲಿ ಖಾಲಿ ಇರುವ  ಅಪ್ರೆಂಟಿಸ್  ಹುದ್ದೆಗಳಿಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ  B.E,B.Tech ಮತ್ತು ಡಿಪ್ಲೋಮಾ ವಿದ್ಯಾರ್ಹತೆ ಮಾಡಿರಬೇಕು.

SHIVAMOGGA COURT RECRUITMENT 2022: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ: ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​  ನೇಮಕಾತಿಯ ಅಪ್ರೆಂಟಿಸ್  ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಶಿಪ್ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಅನುಸರಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ : ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​   ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಿ, ಬಳಿಕ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಪ್ರೆಂಟಿಸ್ ಟ್ರೈನಿಂಗ್ ಒಂದು ವರುಷಗಳ ಕಾಲ ಇರಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಟ್ರೈನಿಂಗ್  ನೀಡಲಾಗುತ್ತದೆ.

 ವೇತನ: ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​   ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,400/- ರಿಂದ 11,110/-ರೂಗಳ ವರೆಗೆ ವೇತನ ಸಿಗಲಿದೆ. 

ಅರ್ಜಿ ಶುಲ್ಕ:  ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​   ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

KPSC Recruitment 2022: ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ 

ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation - DRDO) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (Defence Food Research Laboratory - DFRL)ದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಒಟ್ಟು 17 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಮಾರ್ಚ್ 3, 2022 ಕೊನೆಯ ದಿನವಾಗಿದೆ. ಹೆಚ್ಚಿನ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rac.gov.in ಭೇಟಿ ನೀಡಬಹುದು.

ಒಟ್ಟು 17 ಹುದ್ದೆಗಳ ಮಾಹಿತಿ ಇಂತಿದೆ:
ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) – 8 ಹುದ್ದೆಗಳು
ಡಿಪ್ಲೋಮಾ ಅಪ್ರೆಂಟಿಸ್ (Diploma Apprentice) – 9 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ  ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು.

ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ  ಆಹಾರ ತಂತ್ರಜ್ಞಾನ, ಬಿಎಸ್ಸಿ ಆಹಾರ ವಿಜ್ಞಾನ, ಬಯೋ-ಟೆಕ್ನಾಲಜಿ, ಬಯೋಇನ್‌ಫರ್ಮ್ಯಾಟಿಕ್ಸ್, ಬಯೋ-ಎಂಜಿನಿಯರಿಂಗ್, ಬಯೋಮೆಡಿಕಲ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಪಾಲಿಮರ್ ಎಂಜಿನಿಯರಿಂಗ್, ಪ್ಲಾಸ್ಟಿಕ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್‌ನಲ್ಲಿ B.Tech ಪಾಸಾಗಿರಬೇಕು.

ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ ಆಹಾರ ಮತ್ತು ಪೋಷಣೆ, ಹೋಟೆಲ್ ನಿರ್ವಹಣೆ, ಅಡುಗೆ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್, ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು.

click me!