NVS Recruitment 2021: ನವೋದಯ ವಿದ್ಯಾಲಯ ಸಮಿತಿಯಲ್ಲಿ ಉದ್ಯೋಗವಕಾಶ, ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Dec 15, 2021, 1:54 PM IST
  • ಖಾಲಿ ಇರುವ ಹುದ್ದೆಗಳ ಭರ್ತಿಗೆ NVS ಅರ್ಜಿ ಆಹ್ವಾನ
  • ಒಟ್ಟು 10 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ
  • ಅರ್ಜಿ ಸಲ್ಲಿಸಲು ಕೊನೆ ದಿನ ಡಿಸೆಂಬರ್ 30.
     

ಬೆಂಗಳೂರು (ಡಿ.15): ನವೋದಯ ವಿದ್ಯಾಲಯ ಸಮಿತಿ (Navodaya Vidyalaya Samiti) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಜನರಲ್ ವ್ಯವಸ್ಥಾಪಕ (General Manager), ಡೆಪ್ಯುಟಿ ಕಮಿಷನರ್ (Deputy Commissioner) ಮತ್ತು ಅಕೌಂಟ್ಸ್​ ಅಧಿಕಾರಿ (Accounts Officer)ಹುದ್ದೆಗಳು ಖಾಲಿ ಇದ್ದು, ಬಿಇ, ಬಿ.ಟೆಕ್​ ಪಾಸಾದ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದೆ. ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು. 

ಜನರಲ್ ವ್ಯವಸ್ಥಾಪಕ - 1 ಹುದ್ದೆ, ಡೆಪ್ಯುಟಿ ಕಮಿಷನರ್ - 1 ಹುದ್ದೆ, ಅಕೌಂಟ್ಸ್ ಅಧಿಕಾರಿ - 8 ಹುದ್ದೆಗಳು ಹೀಗೆ ಒಟ್ಟು
ಒಟ್ಟು 10 ಹುದ್ದೆಗಳು ಖಾಲಿ ಇದೆ. ಹೆಚ್ಚಿನ ಮಾಹಿತಿಗೆ  navodaya.gov.in ಗೆ ಭೇಟಿ ನೀಡಿ.

Tap to resize

Latest Videos

undefined

ಜನರಲ್ ವ್ಯವಸ್ಥಾಪಕ, ಡೆಪ್ಯುಟಿ ಕಮಿಷನಲ್ ಮತ್ತು ಅಕೌಂಟ್ಸ್​ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್​ ಪೂರ್ಣಗೊಳಿಸಿರಬೇಕು. ಜೊತೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

TCS BPS HIRING: 2022ರಲ್ಲಿ ಪದವಿ ಪೂರೈಸುವವರನ್ನು ನೇಮಕ ಮಾಡಿಕೊಳ್ಳುತ್ತಿರುವ ಟಿಸಿಎಸ್

ವೇತನ ಮತ್ತು ಆಯ್ಕೆ ಪ್ರಕ್ರಿಯೆ: ಜನರಲ್ ವ್ಯವಸ್ಥಾಪಕ, ಡೆಪ್ಯುಟಿ ಕಮಿಷನರ್ ಮತ್ತು ಅಕೌಂಟ್ಸ್​ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 44,900 ರೂ ನಿಂದ 2,15,900 ರೂವರೆಗೆ ವೇತನ ಇರಲಿದೆ. ನವೋದಯ ವಿದ್ಯಾಲಯ ಸಮಿತಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಹೆಸರನ್ನು ಕಿರುಪಟ್ಟಿ ಮಾಡಲಾಗುವುದು. ಬಳಿಕ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

BECIL Recruitment 2021: ಸರ್ಕಾರಿ ಸ್ವಾಮ್ಯದ ಬಿಇಸಿಐಎಲ್ ನಲ್ಲಿ ಖಾಲಿ ಇರುವ ಹುದ್ದೆಗೆ ಇಂದೇ ಅರ್ಜಿ ಹಾಕಿ

ಭಾರತದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS), ಫ್ರೆಶರ್ಸ್ಗೆ ಬಂಪರ್ ಆಫರ್ ಕೊಡಲು ರೆಡಿಯಾಗಿದೆ. ಐಟಿ ಉದ್ಯಮದಲ್ಲಿ ಫ್ರೆಶರ್ಸ್ ಉದ್ಯೋಗಗಳನ್ನ ನೇಮಕ ಮಾಡಿಕೊಳ್ಳಲು ಟಿಸಿಎಸ್ ಸಿದ್ಧತೆ ನಡೆಸಿದೆ. ಪದವೀಧರರ ಸಿದ್ಧತೆಯನ್ನು ಪರಿಶೀಲಿಸುವ ರಾಷ್ಟ್ರವ್ಯಾಪಿ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT) ಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. 

UPSC Recruitment 2021: ಬಿಇ, ಬಿ.ಟೆಕ್​ ಆದವರಿಗೆ ಲೋಕ ಸೇವಾ ಆಯೋಗದಲ್ಲಿ ಉದ್ಯೋಗ

B.Com, BA, BAF, BBI, BBA, BBM, BMS, BSc – IT/CS/General, BCA, BCS, B.Pharm, M.Pharm ಪೂರೈಸಿರುವ ಪದವೀಧರರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅಂದಹಾಗೇ ಈ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರ್ಣ ಸಮಯ ತರಗತಿಗೆ ಹಾಜರಾಗಿ ಡಿಗ್ರಿ ಪೂರೈಸಿದವರು ಮಾತ್ರ ಅರ್ಜಿ ಸಲ್ಲಿಸಬೇಕು. 2022 ರಲ್ಲಿ ವಿವಿಧ ಕೋರ್ಸ್ಗಳಲ್ಲಿ ಉತ್ತೀರ್ಣರಾದ ಪದವೀಧರರು ಟಿಸಿಎಸ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. TCS NQT ಗಾಗಿ ಶೀಘ್ರದಲ್ಲೇ ನೋಂದಣಿ  ಪ್ರಕ್ರಿಯೆ ಶುರುವಾಗಲಿದೆ. ಟೆಕ್ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಕಿಕ್‌ಸ್ಟಾರ್ಟ್ ಮಾಡಲು ಬಯಸುವ ಅಭ್ಯರ್ಥಿಗಳು TCS ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು TCS ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   TCS BPS ಫ್ರೆಶರ್ ನೇಮಕಾತಿಗಾಗಿ ಅರ್ಜಿಗಳ ನೋಂದಣಿಗೆ ಜನವರಿ 7 ಕೊನೆಯ ದಿನಾಂಕವಾಗಿದೆ.  ಯಾವುದೇ ಸಹಾಯಕ್ಕಾಗಿ, TCS ತಂಡವನ್ನು  ilp.support@tcs.com ಇಮೇಲ್ ಮೂಲಕ ಸಂಪರ್ಕಿಸಬಹುದು ಅಥವಾ ಹೆಲ್ಪ್‌ಡೆಸ್ಕ್  ಸಹಾಯವಾಣಿ ಸಂಖ್ಯೆ 18002093111 ಕರೆ ಮಾಡಬಹುದು.

click me!