ಹೈ ಸ್ಪೀಡ್ ರೈಲು ಕಾರ್ಪೊರೇಷನ್‌ನಲ್ಲಿ ಭರ್ಜರಿ ಉದ್ಯೋಗವಕಾಶ, ಆಯ್ಕೆಯಾದವರಿಗೆ 2.40 ಲಕ್ಷ ವೇತನ!

ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ 2025 ನೇ ಸಾಲಿನ ಆಡಳಿತ ಮತ್ತು ಆಡಳಿತೇತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 212 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಏಪ್ರಿಲ್ 15 ಮತ್ತು ಏ 24 ರೊಳಗೆ ಅರ್ಜಿ ಸಲ್ಲಿಸಬೇಕು.

NHSRCL Recruitment 2025 Job openings for 212 posts in railways gow

ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL-national high speed rail corporation limited)   2025 ರಲ್ಲಿ ವಿವಿಧ ಆಡಳಿತ ಮತ್ತು ಆಡಳಿತೇತರ  ಹುದ್ದೆಗಳಿಗೆ ಒಟ್ಟು 212 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.  ವಿವಿಧ ತಾಂತ್ರಿಕ ಮತ್ತು ಆಡಳಿತ ಕ್ಷೇತ್ರಗಳಲ್ಲಿ 72 ವ್ಯವಸ್ಥಾಪಕ ಹುದ್ದೆಗಳಿಗೆ ಹಾಗೂ ಮಿಕ್ಕ 141 ಹುದ್ದೆಗಳು ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಐಟಿ, ಆರ್ಕಿಟೆಕ್ಚರ್, ಮಾರ್ಕೆಟಿಂಗ್, ಸಾರಿಗೆ, ಸಿಗ್ನಲಿಂಗ್, ರೋಲಿಂಗ್ ಸ್ಟಾಕ್ ಮತ್ತು ಟೆಲಿಕಾಂನಂತಹ ವಿವಿಧ ಕ್ಷೇತ್ರಗಳಲ್ಲಿ ಖಾಲಿ ಹುದ್ದೆಗಳು  ಇದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ಅರ್ಹತೆ ಮತ್ತು ಅನುಭವದ ಮಾನದಂಡಗಳನ್ನು ಪೂರೈಸಬೇಕು ಮತ್ತು ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ  ಕೆಲಸ ಮಾಡಲು ತಯಾರಿರಬೇಕು.

Latest Videos

NHSRCL ಆಡಳಿತ ಮತ್ತು ಆಡಳಿತೇತರ ನೇಮಕಾತಿ ಮತ್ತು ಹೈಸ್ಪೀಡ್ ರೈಲು ಪೈಲಟ್ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ ಮಾರ್ಚ್ 26 ರಂದು ಪ್ರಾರಂಭವಾಗಿದ್ದು, ಏಪ್ರಿಲ್ 15, 2025 ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್, ಅಸಿಸ್ಟೆಂಟ್ ಟೆಕ್ನಿಕಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ (ಖರೀದಿ) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಸಾಮಾನ್ಯ) ಹುದ್ದೆಗಳಿಗೆ ಏಪ್ರಿಲ್ 24, 2025 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲ ಅವಕಾಶವಿದೆ. ಆಸಕ್ತರು ನಿಗದಿತ ಸಮಯದೊಳಗೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಬೇಕು.

BHEL ನೇಮಕಾತಿ 2025: 33 ಇಂಜಿನಿಯರ್, ಸೂಪರ್‌ವೈಸರ್ ಹುದ್ದೆಗಳು, ಪರೀಕ್ಷೆ ಇಲ್ಲ!

NHSRCL ನೇಮಕಾತಿ 2025 ವಿವರಗಳು:
ಹುದ್ದೆಗಳು: ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಡೆಪ್ಯೂಟಿ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ರೈಲು ನಿಲ್ದಾಣ ವ್ಯವಸ್ಥಾಪಕ, ರೈಲು ವ್ಯವಸ್ಥಾಪಕ ಮತ್ತು ಹೈಸ್ಪೀಡ್ ರೈಲು ಪೈಲಟ್.
ಒಟ್ಟು ಖಾಲಿ ಹುದ್ದೆಗಳು: 212
ಅರ್ಜಿ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 15, 2025 ಮತ್ತು ಏಪ್ರಿಲ್ 24, 2025 (ಹುದ್ದೆಗಳನ್ನು ಅವಲಂಬಿಸಿ)
ಅಧಿಕೃತ ವೆಬ್‌ಸೈಟ್: nhsrcl.in 

ವಿವಿಧ ತಾಂತ್ರಿಕ ಮತ್ತು ಆಡಳಿತ ಕ್ಷೇತ್ರಗಳಲ್ಲಿ 72 ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಜಿ ಸಲ್ಲಿಸಲು  ಏಪ್ರಿಲ್ 24 ಕೊನೆಯ ದಿನವಾಗಿದೆ. ಹುದ್ದೆಗಳು  ಮತ್ತು ಅರ್ಹತೆ ಅರ್ಜಿ ಶುಲ್ಕ ಮಾಹಿತಿ ಈ ಕೆಳಗಿನಂತಿದೆ.
• ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಸಿವಿಲ್) - 35 ಹುದ್ದೆಗಳು
• ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಎಲೆಕ್ಟ್ರಿಕಲ್) - 17 ಹುದ್ದೆಗಳು • ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (SNT) - 3 ಹುದ್ದೆಗಳು
• ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (RS) - 4 ಹುದ್ದೆಗಳು
• ಸಹಾಯಕ ತಾಂತ್ರಿಕ ಮ್ಯಾನೇಜರ್ (ಆರ್ಕಿಟೆಕ್ಚರ್) - 8 ಹುದ್ದೆಗಳು
• ಸಹಾಯಕ ತಾಂತ್ರಿಕ ಮ್ಯಾನೇಜರ್ (ಡೇಟಾಬೇಸ್ ಆಡಳಿತಾಧಿಕಾರಿ) - 1 ಹುದ್ದೆ
• ಸಹಾಯಕ ವ್ಯವಸ್ಥಾಪಕ (ಸಂಗ್ರಹಣೆ) - 1 ಹುದ್ದೆ
• ಸಹಾಯಕ ವ್ಯವಸ್ಥಾಪಕ (ಸಾಮಾನ್ಯ) - 2 ಹುದ್ದೆಗಳು

ಇಸ್ರೋದಲ್ಲಿ VSSC ನೇಮಕಾತಿ 2025: 16 ಹುದ್ದೆಗಳಿಗೆ ಅರ್ಜಿ ಆಹ್ವಾನ, ಭರ್ಜರಿ ವೇತನ!

ಈ ಹುದ್ದೆಗಳಿಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಕ್ಷೇತ್ರದಲ್ಲಿ BE/B.Tech/ಆರ್ಕಿಟೆಕ್ಚರ್ ಪದವಿಯನ್ನು ಹೊಂದಿರಬೇಕು. ಅರ್ಜಿದಾರರ ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ನಿಗದಿಪಡಿಸಲಾಗಿದೆ, ಮಾರ್ಚ್ 31, 2025 ರ ಆಧಾರದ ಮೇಲೆ ವಯಸ್ಸಿನ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಅಭ್ಯರ್ಥಿಗಳು ಏಪ್ರಿಲ್ 1, 1990 ಮತ್ತು ಮಾರ್ಚ್ 31, 2005 ರ ನಡುವೆ ಜನಿಸಿರಬೇಕು. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ವೇತನ ವಿವರ: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ 40 ಸಾವಿರದಿಂದ 2 ಲಕ್ಷದ 40 ಸಾವಿರದವರೆಗೆ ವೇತನವಿದೆ.

ಅರ್ಜಿ ಶುಲ್ಕಗಳು ಮತ್ತು ಪ್ರಮುಖ ಸೂಚನೆಗಳು: ಸಾಮಾನ್ಯ, EWS ಮತ್ತು OBC-NCL ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 400 ರೂ. ಆದಾಗ್ಯೂ, SC, ST ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ಪಡೆದಿರುತ್ತಾರೆ.
 

vuukle one pixel image
click me!