ನೌಕಾಪಡೆಯಲ್ಲಿ 2,800 ಅಗ್ನಿವೀರ ಹುದ್ದೆಗೆ ಅರ್ಜಿ ಆಹ್ವಾನ

By Kannadaprabha News  |  First Published Jul 12, 2022, 5:48 PM IST

ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಭಾರತೀಯ ನೌಕಾಸೇನೆಯು ಅಗ್ನಿವೀರರ ಹುದ್ದೆಗಳಿಗೆ ಹೊಸದಾಗಿ ಯೋಧರನ್ನು ನೇಮಕಾತಿ ನಡೆಸಲಿದ್ದು, ಇದರ ಅನ್ವಯ 2022ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.


ನವದೆಹಲಿ: ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಭಾರತೀಯ ನೌಕಾಸೇನೆಯು ಅಗ್ನಿವೀರರ ಹುದ್ದೆಗಳಿಗೆ ಹೊಸದಾಗಿ ಯೋಧರನ್ನು ನೇಮಕಾತಿ ನಡೆಸಲಿದ್ದು, ಇದರ ಅನ್ವಯ 2022ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಹಾಗೂ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳಿಗಾಗಿ ಅಧಿಸೂಚನೆಯಲ್ಲಿ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಆಯೆ ವಿಧಾನ, ವಿದ್ಯಾರ್ಹತೆ, ವಯಸ್ಸಿನ ಮಿತಿ, ಬೇಕಾದ ದಾಖಲೆ ಹಾಗೂ ಅರ್ಜಿ ಸಲ್ಲಿಕೆ ಹೇಗೆ ಎಂಬ ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ.

ಹುದ್ದೆಗಳು, ವಯಸ್ಸು

Tap to resize

Latest Videos

undefined

ಭಾರತೀಯ ನೌಕಾಸೇನೆಯು ಹೊರಡಿಸಿರುವ ಅಗ್ನಿವೀರರ ಹುದ್ದೆಗಳಿಗೆ ನೇಮಕಾತಿಯ ಆಧಿಸೂಚನೆಯಲ್ಲಿ ಹುದ್ದೆಗಳು ಹಾಗೂ ವಯಸ್ಸಿನ ಮಿತಿಯನ್ನು ತಿಳಿಸಿದೆ. ಅಧಿಸೂಚನೆಯಲ್ಲಿ ನೀಡಿದ ಪ್ರಕಾರ, ಒಟ್ಟು 2,800 ಹುದ್ದೆಗಳು ಖಾಲಿ ಇದೆ. ಇಷ್ಟು ಹುದ್ದೆಗಳ ಪೈಕಿ 560 ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ವಿವಿಧ ನೌಕಾ ವಿಭಾಗಗಳಿಗೆ ನೇಮಕಾತಿ ಮಾಡಲಾಗುತ್ತದೆ. ಇನ್ನು ವಯೋ ಅರ್ಹತೆಯನ್ನೂ ತಿಳಿಸಲಾಗಿದ್ದು, ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗೆ 17.5 ವರ್ಷ ತುಂಬಿರಬೇಕಿದ್ದು, ಗರಿಷ್ಠ 24 ವರ್ಷದೊಳಗಿರಬೇಕಿದೆ (1999 ನವೆಂಬರ್‌ 1ರಿಂದ 2005 ಏಪ್ರಿಲ್‌ 30ರ ಒಳಗಿನವರು).

IAF Recruitment; ಅಗ್ನಿವೀರರಾಗಲು ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ

ವಿದ್ಯಾರ್ಹತೆ ಹಾಗೂ ದಾಖಲೆ

ನೌಕಾಸೇನೆಯ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು, ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗೆ ಎಸ್‌ಎಸ್‌ಎಲ್‌ಸಿ ಬಳಿಕ ಪಿಯುಸಿ ಆಗಿರಬೇಕಿದ್ದು, ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ , ಕಂಪ್ಯೂಟರ್‌ ಸೈನ್ಸ್‌ ಅಥವಾ ರಸಾಯನಶಾಸ್ತ್ರವನ್ನು ಆಯ್ದುಕೊಂಡಿರಬೇಕು. ಈ ವಿಷಯಗಳಲ್ಲಿ ಕನಿಷ್ಠ ಶೇ.50 ಅಥವಾ ಅದಕ್ಕಿಂತ ಮೇಲೆ ಅಂಕದೊಂದಿಗೆ ತೇರ್ಗಡೆæಯಾಗಿರಬೇಕು. ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಅರ್ಜಿ ಸಲ್ಲಿಕೆ ವೇಳೆ ಪ್ರಮುಖ ದಾಖಲೆಗಳಾದ ಆಧಾರ್‌ಕಾರ್ಡ್‌ ನಕಲು ಪ್ರತಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅಂಕಪಟ್ಟಿ, ಮೀಸಲಾತಿ ಪ್ರಮಾಣ ಪತ್ರ ಹಾಗೂ ಇತರೆ ಪ್ರಮಾಣ ಪತ್ರ(ಇದ್ದರೆ ಮಾತ್ರ) ನಕಲು ಪ್ರತಿಗಳನ್ನು ಲಗತ್ತಿಸಬೇಕಿದೆ.

ಆಯ್ಕೆ ಹಾಗೂ ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳಿಗೆ ಆಯ್ಕೆ ವಿಧಾನ ಹಾಗೂ ಅರ್ಜಿ ಸಲ್ಲಿಕೆ ವಿಧಾನವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಲಾಗುತ್ತದೆ. ಬಳಿಕ ದೈಹಿಕ ಪರೀಕ್ಷೆಯನ್ನೂ (ಪಿಎಫ್‌ಟಿ) ನಡೆಸಲಿದ್ದು, ಅಂತಿಮವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿಗೆ ಆಯ್ಕೆ ಪ್ರಕ್ರಿಯೆ ಮುಗಿದು ಅರ್ಹ ಅಭ್ಯರ್ಥಿಗಳು ಒಂದು ಹಂತಕ್ಕೆ ಆಯ್ಕೆಯಾದರೂ ಅಧಿಕೃಕೃತವಾಗಿ ಸಂದರ್ಶನ ನಡೆದ ಮೇಲೆ ನಿರ್ಧಾರ ಹೊರಬೀಳುತ್ತದೆ. ಅರ್ಜಿ ಸಲ್ಲಿಕೆ ಹೇಗೆ ಎಂದೂ ಮಾರ್ಗದರ್ಶನ ನೀಡಲಾಗಿದ್ದು, ಅಭ್ಯರ್ಥಿಗಳು ಮೊದಲು ಭಾರತೀಯ ನೌಕಾ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ತೆರಳಬೇಕಿದೆ. ಬಳಿಕ ವೆಬ್‌ಸೈಟನ್‌ನಲ್ಲಿ ಗುರುತಿನ ದಾಖಲೆಗಳಲ್ಲಿರುವಂತೆ ಹೆಸರು ಹಾಗೂ ಇ-ಮೇಲ್‌ ಮೂಲಕ ನೋಂದಣಿಯಾಗಬೇಕು. ಬಳಿಕ ಅಭ್ಯರ್ಥಿಗಳು ಆನ್‌ಲೈನ್‌ ನಮೂನೆಯ ಅರ್ಜಿಯನ್ನು ಸರಿಯಾದ ಮಾಹಿತಿಗಳು ಹಾಗೂ ದಾಖಲೆಗಳ ಲಗತ್ತಿಸುವಿಕೆ ಜೊತೆಗೆ ಭರ್ತಿ ಮಾಡಿ ಸೆಂಡ್‌ ಆಪ್ಷನ್‌ಗೆ ಕ್ಲಿಕ್ಕಿಸಿದಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯಿತು.

ಅಗ್ನಿಪಥ್‌ ಬಗ್ಗೆ ಪ್ರತಿಭಟನೆ ಆರಂಭವಾದಷ್ಟೇ ವೇಗದಲ್ಲಿ ಕಾವು ಕಳೆದುಕೊಂಡಿದೆ: ವಾಯುಪಡೆ ಅಧಿಕಾರಿ

ವೇತನ ಶ್ರೇಣಿ ಹೇಗಿದೆ

ಭಾರತೀಯ ನೌಕಾ ಸೇನೆಯ ನೇಮಕಾತಿ ಮಂಡಳಿ ವತಿಯಿಂದ ಅಧಿಸೂಚನೆಯಲ್ಲಿ ತಿಳಸಿದಂತೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ನಿಗದಿ ಮಾಡಿದಂತೆ ಮಾಸಿಕವಾಗಿ 30,000 ರು. ಪಾವತಿಸಲಾಗುತ್ತದೆ. ಸಂದರ್ಭಕ್ಕನುಸಾರವಾಗಿ ಹಲವು ಭತ್ಯೆಗಳು( ಸರ್ಕಾರ ಸಮ್ಮತಿಸಿದಲ್ಲಿ) ನೀಡಲಾಗುತ್ತದೆ. ಇದರೊಂದಿಗೆ ಬಟ್ಟೆಹಾಗೂ ಪ್ರಯಾಣದ ಭತ್ಯೆಗಳನ್ನೂ ಸೇನೆಯೇ ಭರಿಸುತ್ತದೆ ಎಂದು ನೌಕಾ ಸೇನೆಯಯ ನೇಮಕಾತಿ ಮಂಡಳಿ ತಿಳಿಸಿದೆ.

* ಆರ್ಜಿ ಸಲ್ಲಿಸಲು ಜುಲೈ 22ರಂದು ಕೊನೆಯ ದಿನವನ್ನಾಗಿ ನಿಗದಿ ಮಾಡಲಾಗಿದೆ.

*ಪರೀಕ್ಷಾ ಅವಧಿಯು ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ ನಡೆಯಲಿದೆ.

*ನವೆಂಬರ್‌ನಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.

* ನೇಮಕಾತಿಯು 4 ವರ್ಷಗಳಿಗೆ ಒಳಗೊಂಡಿದೆ.

* 2800 ಹುದ್ದೆಗಳು, 560 ಹುದ್ದೆಗಳು ಮಹಿಳಾ ಅಭ್ಯರ್ಥಿಗೆ ಮೀಸಲು

click me!