ಮಂಗಳೂರು (ಜು.7): ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಮಂಗಳೂರಿನ ಯುವತಿ ಮನಿಷಾ ಆಯ್ಕೆಯಾಗಿದ್ದು, ಈ ವಿಭಾಗಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಯುವತಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ನಗರದ ಅಶೋಕನಗರ ನಿವಾಸಿಯಾಗಿರುವ ಮನಿಷಾ, ಜು.9ರಂದು ತರಬೇತಿಗಾಗಿ ಹೈದರಾಬಾದ್‌ಗೆ ತೆರಳಲಿದ್ದಾರೆ. ಭಾರತೀಯ ಸೇನೆ ಸೇರಬೇಕು ಎನ್ನುವ ತನ್ನ ತಂದೆಯ ಆಸೆಯನ್ನು ಈಡೇರಿಸಿದ್ದಾರೆ.
undefined
ವಾಯುಪಡೆಗೆ ಆಯ್ಕೆಗೆ 6 ತಿಂಗಳ ಪ್ರಕ್ರಿಯೆಯನ್ನು ಮನಿಷಾ ಯಶಸ್ವಿಯಾಗಿ ಪೂರೈಸಿದ್ದಾರೆ. ಪ್ರಾರಂಭದಲ್ಲಿ ಏರ್ಫೋರ್ಸ್ ಕಾಮನ್ ಎಂಟ್ರೆಸ್ ಪರೀಕ್ಷೆಯನ್ನು 250 ವಿದ್ಯಾರ್ಥಿನಿಯರು ಬರೆದಿದ್ದು, ಅವರಲ್ಲಿ 59 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದರು. ಇವರಿಗೆ ಒಂದು ವಾರ ವಿವಿಧ ರೀತಿಯ ಪರೀಕ್ಷೆ ನಡೆಸಿ ಕೇವಲ 15 ಮಂದಿಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಬಳಿಕ ಕಠಿಣ ದೈಹಿಕ ಕ್ಷಮತಾ ಪರೀಕ್ಷೆ ನಡೆದಿದ್ದು ಅವರಲ್ಲಿ 5 ಮಂದಿ ಪೈಲಟ್ ಆಯ್ಕೆ ಮಾಡಿದ್ದಾರೆ.
DGCA ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಭಾರತದ ಮೊದಲ ಟ್ರಾನ್ಸ್ಜಂಡರ್ ಫೈಲಟ್
ಇವರಲ್ಲಿ ಮನಿಷಾ ಸೇರಿದಂತೆ ಮೂವರು ಆಯ್ಕೆಯಾಗಿದ್ದಾರೆ. ವಾಯುಪಡೆ ಪೈಲಟ್‌ಗೆ 96 ಹುದ್ದೆಗೆ ಅವಕಾಶವಿದ್ದು, ಇದೀಗ ಮನಿಷಾ ಸೇರಿದಂತೆ 10 ಮಂದಿ ಯುವತಿಯರು, 39 ಯುವಕರನ್ನು ಆಯ್ಕೆ ಮಾಡಲಾಗಿದೆ. ಉಳಿದವರು ಅರ್ಹರಾಗದ ಕಾರಣ 47 ಹುದ್ದೆಗಳನ್ನು ಇನ್ನೂ ಖಾಲಿ ಇರಿಸಲಾಗಿದೆ.
ತಂದೆಯ ಕನಸು ನನಸು: ಮನಿಷಾ ನಿವೃತ್ತ ಬ್ಯಾಂಕ್ ಅಧಿಕಾರಿ ಮನೋಹರ ಶೆಟ್ಟಿಮತ್ತು ಅಧ್ಯಾಪಕಿ ಮಾಲತಿ ಶೆಟ್ಟಿದಂಪತಿ ಪುತ್ರಿ. ಮನೋಹರ ಶೆಟ್ಟಿ ಯುವಕರಾಗಿದ್ದಾಗ ವಾಯುಪಡೆಗೆ ಆಯ್ಕೆಯಾಗಿದ್ದರು. ಆದರೆ ಅವರ ಅಣ್ಣ ವಾಯುಪಡೆಯಲ್ಲಿದ್ದ ಕಾರಣ ಮನೆಯಲ್ಲಿ ಅನುಮತಿ ಕೊಟ್ಟಿರಲಿಲ್ಲ. ಈ ಕಾರಣದಿಂದ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್ ಮಾಡಬೇಕೆಂಬ ಕನಸು ಅವರದಾಗಿತ್ತು. ಅದರಂತೆ ಮನಿಷಾ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿ ಎನ್‌ಸಿಸಿಯಲ್ಲಿ ಗಣರಾಜ್ಯೊತ್ಸವ ಪರೇಡ್‌ಗೆ ಆಯ್ಕೆಯಾಗಿದ್ದರು. ಯಾವುದೇ ಹೊರಗಿನ ಟ್ರೈನಿಂಗ್ ಇಲ್ಲದೆ ಇದೀಗ ವಾಯುಪಡೆಗೆ ಸೇರ್ಪಡೆಯಾಗಿದ್ದಾರೆ.
ಭಾರತದಲ್ಲಿ Work from Home ಮುಂದುವರೆಯುತ್ತಾ, ಸಮೀಕ್ಷೆ ಹೇಳೋದೇನು?
ಮನಿಷಾ ಅವರು ಬಿಜೈ ಲೂಯಿಸ್ ಸೆಂಟ್ರಲ್ ಸ್ಕೂಲ್ ಮತ್ತು ಸೈಂಟ್ ಅಲೋಶಿಯಸ್‌ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್ ಸಂಸ್ಥೆಯಲ್ಲಿ ಉದ್ಯೊಗ ಪಡೆದುಕೊಂಡಿದ್ದರು.