ರಕ್ಷಣಾ ಇಲಾಖೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಜಾಬ್, 400 ಹುದ್ದೆಗಳಿಗೆ ನೇಮಕಾತಿ

By Suvarna News  |  First Published Sep 4, 2021, 4:23 PM IST

ರಕ್ಷಣಾ ಇಲಾಖೆಯಲ್ಲಿ ಕೆಳ ಹಂತದಲ್ಲಿ ಖಾಲಿ ಇರುವ 400  ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈಗಗಾಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 17 ಕೊನೆಯ ದಿನವಾಗಿದೆ. ಹಾಗಾಗಿ, ಕೂಡಲೇ ಅರ್ಹರು ಅರ್ಜಿ ದಾಖಲಿಸಿಕೊಳ್ಳಬಹುದು.


ಸರ್ಕಾರಿ ಉದ್ಯೋಗನೇ ಬೇಕು..ಸರ್ಕಾರಿ ಕೆಲ್ಸಕ್ಕೇ ಸೇರಬೇಕು ಅಂತ ಬಯಸುವವರಿಗೆ  ಇಲ್ಲೊಂದು  ಒಳ್ಳೆ ಆಫರ್ ಇದೆ. ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗ ಅವಕಾಶವಿದೆ. ಡಿಫೆನ್ಸ್ ಮಿನಿಸ್ಟ್ರಿ ಅಂದಾಕ್ಷಣ ಉನ್ನತ ಶಿಕ್ಷಣ ಆಗಿರಬೇಕೆನೋ ಅನ್ನೋ ಚಿಂತೆ ಬೇಡ. ಜಸ್ಟ್ 10ನೇ ತರಗತಿ ಪಾಸ್ ಆಗಿದ್ರೂ ಸಾಕು, ಈ ಸಚಿವಾಲಯದಲ್ಲಿ ಸೇವೆ ಸಲ್ಲಿಸಲು. ಅಷ್ಟೇ ಅಲ್ಲ, ಕರ್ನಾಟಕದಲ್ಲೇ ಸೇವೆ ಸಲ್ಲಿಸುವ ಭಾಗ್ಯ ನಿಮ್ಮದಾಗಲಿದೆ.

ಹೌದು.. ರಕ್ಷಣಾ ಸಚಿವಾಲಯದಲ್ಲಿ (MoD) ಸಿವಿಲ್ ಮೋಟಾರ್ ಚಾಲಕ, ಕ್ಲೀನರ್ ಮತ್ತಿತರ 400 ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Tap to resize

Latest Videos

undefined

ಬಿಎಚ್ಇಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಆಹ್ವಾನ, ಅರ್ಜಿ ಹಾಕಿ

ಸಿವಿಲಿಯನ್ ಮೋಟಾರು ಚಾಲಕ, ಕ್ಲೀನರ್, ಸಿವಿಲಿಯನ್  ಕ್ಯಾಟರಿಂಗ್ ಇನ್ಸ್ಟ್ರಕ್ಟರ್ ಆ್ಯಂಡ್ ಕುಕ್‌ಗಾಗಿ ಈ ಹಿಂದೆ ಜುಲೈನಲ್ಲಿ ಕರೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿದ್ದವರು ಈಗ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. 

 ಜೂನ್ 12 ರಿಂದ 18ರ ಸಂದರ್ಭದಲ್ಲಿ ಪ್ರಕಟಿಸಿದ್ದ ಜಾಹೀರಾತಿಗೆ ಸಲ್ಲಿಸಿರುವ ಅರ್ಜಿಗಳನ್ನು ಸಹ ಪರಿಗಣಿಸಲಾಗುತ್ತದೆ ಮತ್ತು ಪ್ರಸ್ತುತ ಜಾಹೀರಾತಿಗೂ ಮಾನ್ಯತೆ ಇರುತ್ತದೆ. ಈಗಾಗಲೇ ಅರ್ಜಿಗಳನ್ನು ಫಾರ್ವರ್ಡ್ ಮಾಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಧಿಕೃತ ಸೂಚನೆಯಲ್ಲಿ ತಿಳಿಸಲಾಗಿದೆ.

ಉದ್ಯೋಗ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಅಧಿಸೂಚನೆ ಬಿಡುಗಡೆಯಾದ 21 ದಿನಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಆಗಸ್ಟ್ 28ರಂದು ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 17 ಕೊನೆಯ ದಿನಾಂಕ ಆಗಿದೆ. ಇನ್ನು ಈ ನೇಮಕಾತಿ ಮೂಲಕ ರಕ್ಷಣಾ ಸಚಿವಾಲಯ ಭರ್ತಿ ಮಾಡಿಕೊಳ್ಳಲಿರುವ 400 ಹುದ್ದೆಗಳು ಕರ್ನಾಟಕದ ಬೆಂಗಳೂರು ಶಾಖೆಗೆ ಸೇರಿದ್ದಾಗಿವೆ.

BHEL ನೇಮಕಾತಿ: ವೈದ್ಯ ವೃತ್ತಿಪರರಿಂದ ಅರ್ಜಿ ಆಹ್ವಾನ

ಎಎಸ್ ಸಿ ಸೆಂಟರ್(ಉತ್ತರ) ಸಿವಿಲ್ ಮೋಟರ್ ಡ್ರೈವರ್ ( ಪುರುಷ ಅಭ್ಯರ್ಥಿಗಳು ಮಾತ್ರ)- 115 ಹುದ್ದೆ, ಕ್ಲೀನರ್ - 67 ಹುದ್ದೆ, ಕುಕ್-15 ಹುದ್ದೆ, ಸಿವಿಲಿಯನ್ ಕೆಟರಿಂಗ್ ಇನ್ಸ್ಟ್ರಕ್ಟರ್-3 ಹುದ್ದೆ, ಎಎಸ್ ಸಿ ಸೆಂಟರ್(ದಕ್ಷಿಣ) ಸಿವಿಲ್ ಮೋಟರ್ ಡ್ರೈವರ್ ( ಪುರುಷ ಅಭ್ಯರ್ಥಿಗಳು ಮಾತ್ರ)- 193 ಹುದ್ದೆ, ಎಂಟಿಎಸ್(ಸಫಾಯಿವಾಲಾ)(ಪುರುಷರು ಮಾತ್ರ) -7 ಹುದ್ದೆಗಳು ಸೇರಿ ಒಟ್ಟು 400 ಹುದ್ದೆಗಳನ್ನು ಈ ನೇಮಕಾತಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. 
 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 10ನೇ ತರಗತಿ ಉತ್ತೀರ್ಣರಾಗಿರಬೇಕು. ಇದಲ್ಲದೇ, ಸಿವಿಲ್ ಕ್ಯಾಟರಿಂಗ್ ಬೋಧಕ, ಕ್ಲೀನರ್, ಕುಕ್, ಲೇಬರ್ ಮತ್ತು ಎಂಟಿಎಸ್ ಹುದ್ದೆಗೆ ನೇಮಕಾತಿ ಮಾಡಲು ಅಭ್ಯರ್ಥಿಯ ವಯಸ್ಸು 18 ರಿಂದ 25 ವರ್ಷ ವಯೋಮಿತಿ ಇರಬೇಕು. ಸಿವಿಲ್ ಮೋಟಾರು ಚಾಲಕರ ಹುದ್ದೆಗೆ ನೇಮಕಾತಿ ಮಾಡುವ ಅಭ್ಯರ್ಥಿಯ ವಯಸ್ಸು 18 ರಿಂದ 27 ವರ್ಷಗಳ ನಡುವೆ ಇರಬೇಕು.
 

ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ / ದೈಹಿಕ / ಪ್ರಾಯೋಗಿಕ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಆಧಾರದ ಮೇಲೆ ಕಟ್ಟುನಿಟ್ಟಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಲಿಖಿತ ಪರೀಕ್ಷೆಯಲ್ಲಿ ಅರ್ಜಿದಾರರು ಪಡೆದಿರುವ ಅಂಕಗಳ ಆಧಾರದ ಮೇಲೆ ಮತ್ತು ಕೌಶಲ್ಯ/ದೈಹಿಕ/ಪ್ರಾಯೋಗಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಎಲ್ಲಾ ಗ್ರೂಪ್ 'ಸಿ' ಹುದ್ದೆಗಳಿಗೆ ಮಾತ್ರ ಆಯ್ಕೆ ಮಾಡಲಾಗುತ್ತದೆ.

ವಿವಿಧ ಹುದ್ದೆಗಳಿಗೆ UPSC ನೇಮಕಾತಿ, ಅರ್ಜಿ ಹಾಕಿ

 ಎಲ್ಲಾ ವಿವರಗಳು ಹಾಗೂ ಅಗತ್ಯವಿರುವ ಎಲ್ಲ ದಾಖಲೆಗಳನ್ನು  ಸ್ವಯಂ -ವಿಳಾಸದ ಲಕೋಟೆಯೊಂದಿಗೆ ಪ್ರಿಸೈಡಿಂಗ್ ಆಫೀಸರ್, ಸಿವಿಲಿಯನ್ ಡೈರೆಕ್ಟ್ ರೆಕ್ರ್ಯೂಟ್ಮೆಂಟ್ ಬೋರ್ಡ್‌, CHQ, ASC ಸೆಂಟರ್ (ದಕ್ಷಿಣ) -2 ಆಗ್ರಾಮ್ ಪೋಸ್ಟ್, ಬೆಂಗಳೂರು -07 (ಕಾರ್ಮಿಕ ಮತ್ತು ಎಂಟಿಎಸ್ (ಸಫಾಯಿವಾಲಾ) ವಿಳಾಸಕ್ಕೆ ಹಾಗೂ ಪ್ರಿಸೈಡಿಂಗ್ ಆಫೀಸರ್, ಸಿವಿಲಿಯನ್ ಡೈರೆಕ್ಟ್ ರೆಕ್ರ್ಯೂಟ್ಮೆಂಟ್ ಬೋರ್ಡ್‌, CHQ, ASC ಸೆಂಟರ್ (ಉತ್ತರ) -೨ ಎಟಿಸಿ, ಅಗ್ರಾಮ್ ಪೋಸ್ಟ್, ಬೆಂಗಳೂರು -07 (ಇತರ ವ್ಯಾಪಾರಗಳಿಗೆ) ವಿಳಾಸಕ್ಕೆ ಕಳುಹಿಸಬೇಕು.

click me!