ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 23 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸು ಸೆಪ್ಟೆಂಬರ್ 16 ಕೊನೆಯ ದಿನ. ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಕೇಂದ್ರ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಹಾಯಕ ಭೂವಿಜ್ಞಾನಿ ಮತ್ತು ಇತರೆ ಹುದ್ದೆಗಳಿಗೆ ಅರ್ಹರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ನೇಮಕ
undefined
ಕೇಂದ್ರ ಲೋಕಸೇವಾ ಆಯೋಗವು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 23 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದೆ. ಸಂಪೂರ್ಣವಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ ಬಳಿಕ ದಾಖಲೆಗಳನ್ನ ಸಲ್ಲಿಸಲು ಮತ್ತೊಂದು ದಿನ ಕಾಲಾವಕಾಶ ನೀಡಲಾಗಿದೆ. ಅಂದ್ರೆ ಸೆಪ್ಟೆಂಬರ್ 17ರವರೆಗೆ ಅಗತ್ಯ ದಾಖಲೆ ಸಲ್ಲಿಕೆಗೆ ಕಾಲಾವಕಾಶವಿದೆ. ಇನ್ನು ಹುದ್ದೆಗಳಿಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಅಧಿಕೃತ ವೆಬ್ ಸೈಟ್ upsc.gov.in. ಗೆ ಭೇಟಿ ನೀಡಿ ಪರಿಶೀಲಿಸಬಹುದು.
ಖಾಲಿ ಇರುವ 23 ಹುದ್ದೆಗಳ ಪೈಕಿ ಅಸಿಸ್ಟೆಂಟ್ ಡೈರೆಕ್ಟರ್ ( ಪ್ಲಾಂಟ್ ಪ್ಯಾಥಾಲಜಿ)- 2 ಹುದ್ದೆ, ಒಂದು ಅಗ್ರಿಕಲ್ಚರಲ್ ಇಂಜಿನಿಯರ್ (ಇಂಸ್ಟ್ರುಮೆಂಟೇಷನ್) ಹುದ್ದೆ, ಅಸಿಸ್ಟೆಂಟ್ ಜಿಯಾಲಾಜಿಸ್ಟ್ 20 ಹುದ್ದೆಗಳು ಸೇರಿವೆ.
ಅಸಿಸ್ಟೆಂಟ್ ಡೈರೆಕ್ಟರ್ ( ಪ್ಲಾಂಟ್ ಪ್ಯಾಥಾಲಜಿ) ಹುದ್ದೆಗೆ 7 ನೇ ಸಿಪಿಸಿಯ ಪ್ರಕಾರ ಪೇ ಮ್ಯಾಟ್ರಿಕ್ಸ್‌ನಲ್ಲಿ ಲೆವೆಲ್ -೧೦ ಅಡಿ ವೇತನ ನೀಡಲಾಗುತ್ತದೆ. ಅಗ್ರಿಕಲ್ಚರಲ್ ಇಂಜಿನಿಯರ್ (ಇಂಸ್ಟ್ರುಮೆಂಟೇಷನ್) ಹುದ್ದೆಗೆ 7 ನೇ ಸಿಪಿಸಿ ಪ್ರಕಾರ ಪೇ-ಮ್ಯಾಟ್ರಿಕ್ಸ್‌ನಲ್ಲಿ ಲೆವೆಲ್- 07ರ ಅಡಿ ಜನರಲ್ ಸೆಂಟ್ರಲ್ ಸರ್ವೀಸಸ್ ಗ್ರೂಪ್- "ಬಿ" ಗೆಜೆಟೆಡ್ (ಮಂತ್ರಿಗಳಲ್ಲದ) ಹುದ್ದೆಯಂತೆ ವೇತನ ದೊರೆಯಲಿದೆ. ಇನ್ನು ಅಸಿಸ್ಟೆಂಟ್ ಜಿಯಾಲಾಜಿಸ್ಟ್ ಹುದ್ದೆಗೆ 7 ನೇ ಸಿಪಿಸಿ ಪ್ರಕಾರ ಪೇ-ಮ್ಯಾಟ್ರಿಕ್ಸ್‌ನಲ್ಲಿ ಲೆವೆಲ್- 0೮ರ ಅಡಿ ಜನರಲ್ ಸೆಂಟ್ರಲ್ ಸರ್ವೀಸಸ್ ಗ್ರೂಪ್- "ಬಿ" ಗೆಜೆಟೆಡ್ (ಮಂತ್ರಿಗಳಲ್ಲದ) ಹುದ್ದೆಯ ಮಾದರಿಯಲ್ಲೇ ವೇತನ ನೀಡಲಾಗುತ್ತದೆ.
ನಾವಲ್ ಶಿಪ್ ರಿಪೇರ್ ಯಾರ್ಡ್ ನೇಮಕಾತಿ: 230 ಅಪ್ರೆಂಟಿಸ್‌ಗೆ ಅರ್ಜಿ ಆಹ್ವಾನ
ಯುಪಿಎಸ್ಸಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಸ್ಯ ರೋಗಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಅಥವಾ ಸಸ್ಯ ರೋಗಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಕೃಷಿಯಲ್ಲಿ ಎಂ.ಎಸ್ಸಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಸ್ಯ ರೋಗಶಾಸ್ತ್ರದಲ್ಲಿ ಪರಿಣತಿ ಪಡೆದಿರಬೇಕು.
ಹಾಗೇ ಅಗ್ರಿಕಲ್ಚರಲ್ ಇಂಜಿನಿಯರ್ (ಇಂಸ್ಟ್ರುಮೆಂಟೇಷನ್) ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಅಥವಾ ಇನ್ಸ್ಟ್ರುಮೆಂಟೇಶನ್ ತಂತ್ರಜ್ಞಾನದಲ್ಲಿ ಪದವಿ ಹೊಂದಿರಬೇಕು. ಅಸಿಸ್ಟೆಂಟ್ ಜಿಯಾಲಾಜಿಸ್ಟ್ ಹುದ್ದೆಗೆ ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಪಡೆದಿರಬೇಕು. ಜಿಯಾಲಜಿ ಅಥವಾ ಜಿಯೋ-ಎಕ್ಸ್ ಫ್ಲೋರೇಷನ್ ಅಥವಾ ಮಿನರಲ್ ಎಕ್ಸ್ ಫ್ಲೋರೇಷನ್ ಅಥವಾ ಇಂಜಿನಿಯರಿಂಗ್ ಜಿಯೋಲಾಜಿ ಅಥವಾ ಜಿಯೊ-ಕೆಮಿಸ್ಟ್ರಿ ಅಥವಾ ಮರಿನ್ ಜಿಯೋಲಾಜಿ ಅಥವಾ ಅರ್ಥ್ ಸೈನ್ಸ್ & ರಿಸೋರ್ಸ್ ಮ್ಯಾನೇಜ್ಮೆಂಟ್ ಅಥವಾ ಒಸಿಯನೋಗ್ರಫಿ ಆ್ಯಂಡ್ ಕೋಸ್ಟಲ್ ಏರಿಯಾ ಸ್ಟಡೀಸ್ ಅಥವಾ ಎನ್ವಿರಾನ್ಮೆಂಟಲ್ ಜಿಯೋಲಾಜಿ ಅಥವಾ ಜಿಯೋ- ಇನ್ಫಾರ್ಮೆಟಿಕ್ಸ್ - ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಮಾನ್ಯತೆ ಪಡೆದ ವಿವಿಯಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಅಭ್ಯರ್ಥಿಗಳ ಅರ್ಜಿ ಶುಲ್ಕ ಕೇವಲ 25 ರೂ. ಆಗಿದ್ದು, ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಹಣವನ್ನು ನಗದು ಮೂಲಕ ಅಥವಾ ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಸಲ್ಲಿಸಬಹುದು. SC/ST/PwBD ಸಮುದಾಯ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿಯಿಂದ ವಿನಾಯ್ತಿ ನೀಡಲಾಗಿದೆ.
ಬಿಇಎಲ್‌ನಲ್ಲಿ ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ, ಅರ್ಜಿ ಹಾಕಿ
ಅರ್ಜಿದಾರರು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ upsconline.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬೇರೆ ಯಾವುದೇ ವಿಧಾನದ ಮೂಲಕ ಸ್ವೀಕರಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳೇ ಎಚ್ಚರ..ಮರೆಯದೇ ಸೆಪ್ಟೆಂಬರ್ 16 ರೊಳಗೆ ಅರ್ಜಿ ಸಲ್ಲಿಸಿ.