ಬಿಎಚ್ಇಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಆಹ್ವಾನ, ಅರ್ಜಿ ಹಾಕಿ

By Suvarna NewsFirst Published Sep 3, 2021, 5:44 PM IST
Highlights

ದೇಶಶ ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ.(ಬಿಎಚ್‌ಇಎಲ್) ಎಂಜಿನಿಯರ್ ಪದವೀಧರರು, ಡಿಪ್ಲೋಮಾ ಅಥವಾ ಟೆಕ್ನಿಷಿಯನ್ ‌ಗಳ ಅಪ್ರೆಂಟಿಸ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಇತ್ತೀಚೆಗಷ್ಟೆ ವೃತ್ತಿಪರ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ಇದೀಗ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. 

BHEL ಈ ನೇಮಕಾತಿಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ಕೂಡ ಸಿಗಲಿದೆ. 61 ಇಂಜಿನಿಯರ್ ಪದವೀಧರರು ಹಾಗೂ ಡಿಪ್ಲೊಮಾ ಅಥವಾ ಟೆಕ್ನಿಷಿಯನ್  ಅಪ್ರೆಂಟಿಸ್ ಹುದ್ದೆಗಳಿಗೆ ಪದವಿ ಮತ್ತು ಡಿಪ್ಲೋಮಾ ಎಂಜಿನಿಯರ್‌ಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಒಟ್ಟು 61 ಹುದ್ದೆಗಳ ಪೈಕಿ 36 ಪದವಿ ಅಪ್ರೆಂಟಿಸ್ ಹುದ್ದೆಗಳು ಮತ್ತು 25 ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳು ಸೇರಿವೆ.

ವಿವಿಧ ಹುದ್ದೆಗಳಿಗೆ UPSC ನೇಮಕಾತಿ, ಅರ್ಜಿ ಹಾಕಿ

ಆಯ್ಕೆಯಾದವರನ್ನು ಹರಿದ್ವಾರದ ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಅಪ್ರೆಂಟಿಸ್ ಆಕ್ಟ್-1961 ರ ಅಡಿಯಲ್ಲಿ ಒಂದು ವರ್ಷದ ಅವಧಿಗೆ ನಿಯೋಜಿಸಲಾಗುವುದು. ಅಪ್ರೆಂಟಿಸ್ ಹುದ್ದೆಗಳಿಂದ ಆಯ್ಕೆಯಾದ ಪದವೀಧರ ಅಭ್ಯರ್ಥಿಗಳಿಗೆ ತಿಂಗಳಿಗೆ 9000 ರೂ. ಸ್ಟೈಫಂಡ್ ಹಾಗೂ  ಡಿಪ್ಲೊಮಾ ಅಥವಾ ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದವರಿಗೆ 7000 ರೂ. ಸ್ಟೈಫಂಡ್ ದೊರೆಯಲಿದೆ. ಈ ಹುದ್ದೆಗಳ ನೇಮಕಾತಿಗೆ ಹೊರಡಿಸಲಾದ ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿಟೆಕ್ ಹೊಂದಿರುವ ಅಭ್ಯರ್ಥಿಗಳು, ಅಥವಾ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

BHEL ನೇಮಕಾತಿ: ವೈದ್ಯ ವೃತ್ತಿಪರರಿಂದ ಅರ್ಜಿ ಆಹ್ವಾನ

ಮೆಕ್ಯಾನಿಕಲ್, ಪ್ರೊಡಕ್ಷನ್ ಅಥವಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಸ್ಟ್ರೀಮ್‌ನಲ್ಲಿ ಪದವಿ ಪಡೆದವರಿಗೆ 23 ಅಪ್ರೆಂಟಿಸ್ ಹುದ್ದೆ, ಡಿಪ್ಲೋಮಾ ಅಭ್ಯರ್ಥಿಗಳಿಗೆ 17 ಹುದ್ದೆಗಳಿವೆ. ಹಾಗೇ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳಿಗೆ 8, ಡಿಪ್ಲೋಮಾ ಅಭ್ಯರ್ಥಿಗಳನ್ನು 4 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಿಗೆ 4, ಡಿಪ್ಲೋಮಾ ಮಾಡಿದವರಿಗೆ 1 ಹುದ್ದೆ ಇವೆ. ಇನ್ನು ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರ ರಿಗೆ ಒಂದು ಹುದ್ದೆಯಷ್ಟೆ ಖಾಲಿಯಿದೆ. ಹಾಗೇ ಮೇನ್ ಆಫೀಸ್ ಮ್ಯಾನೇಜ್ಮೆಂಟ್ ಹುದ್ದೆಗಳಿಗೆ ಡಿಪ್ಲೋಮಾ ಪೂರೈಸಿರುವ ಮೂವರು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳ ಲಾಗುತ್ತದೆ.

ಎಲ್ಲಾ ಪದವಿಗಳನ್ನು 2018 ರ ನಂತರ  ಪಡೆದಿರಬೇಕು. ಮತ್ತು ಯಾವುದೇ ಸರ್ಕಾರ ಅಥವಾ ಪಿಎಸ್‌ಯು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಯಲ್ಲಿ ಈಗಾಗಲೇ ಅಪ್ರೆಂಟಿಸ್‌ಶಿಪ್ ಆಕ್ಟ್ 1961 ರ ಅಡಿಯಲ್ಲಿ  ಅಪ್ರೆಂಟಿಸ್‌ಶಿಪ್ ಪಡೆದಿರುವ ಅಥವಾ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
 

ಆಸಕ್ತ ಅಭ್ಯರ್ಥಿಗಳು ಮೊದಲು ತಮ್ಮನ್ನು ತಾವು BOAT ಮತ್ತು MHRDNATS ಪೋರ್ಟಲ್‌ಗೆ ದಾಖಲಿಸಿಕೊಳ್ಳಬೇಕು ಮತ್ತು ಅವರ ನೋಂದಣಿ ಸಂಖ್ಯೆಗಳನ್ನು ಪಡೆದುಕೊಳ್ಳಬೇಕು. ಆನಂತರ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. ಈ ಬಿಹೆಚ್ ಇಎಲ್ ನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದೆ. ಈ ದಿನಾಂಕದೊಳಗೆ ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪ್‌ಗಳನ್ನು ಪಡೆಯಬೇಕು. ಆ ಸ್ವೀಕೃತಿ ಚೀಟಿಗಳನ್ನು ಸೆಪ್ಟೆಂಬರ್ 18 ಕ್ಕೂ ಮುನ್ನ BHEL ಹರಿದ್ವಾರಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ವಿವರವಾಗಿ ಪರಿಶೀಲಿಸಬಹುದು.

ಬಿಇಎಲ್‌ನಲ್ಲಿ ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ, ಅರ್ಜಿ ಹಾಕಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಗರಿಷ್ಟ 27 ವರ್ಷ ಮೀರಿರಬಾರದು. ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾದ ಪದವೀಧರ ಅಭ್ಯರ್ಥಿಗಳಿಗೆ ಮಾಸಿಕ 9000 ರೂ. ಸ್ಟೈಫಂಡ್ ಸಿಗಲಿದೆ. ಹಾಗೇ ಇತರೆ ಡಿಪ್ಲೋಮಾ, ತಂತ್ರಜ್ಞರಿಗೆ ಮಾಸಿಕ 7000 ರೂ. ಸ್ಟೈಫಂಡ್ ದೊರೆಯಲಿದೆ.

click me!