LIC Recruitment 2022: ಭಾರತೀಯ ಜೀವ ವಿಮಾ ನಿಗಮದಲ್ಲಿ ವಿಮಾ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Feb 16, 2022, 10:17 PM IST

ಭಾರತೀಯ ಜೀವ ವಿಮಾ ನಿಗಮವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ವಿಮಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್​​ 31, 2022 ಕೊನೆಯ ದಿನಾಂಕವಾಗಿದೆ. 


ಬೆಂಗಳೂರು(ಫೆ.16): ಭಾರತೀಯ ಜೀವ ವಿಮಾ ನಿಗಮವು (Life Insurance Corporation of India - LIC) 2022ನೇ ಸಾಲಿನ  ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.  ಒಟ್ಟು 100 ವಿಮಾ ಸಲಹೆಗಾರ (Insurance Advisor) ಹುದ್ದೆಗೆ ಕರೆ ನೀಡಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ವಿಮಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್​​ 31, 2022 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್  https://licindia.in/ ಅನ್ನು ಭೇಟಿ ಮಾಡಿ ಹೆಚ್ಚಿ ನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಜೀವ ವಿಮಾ ನಿಗಮದಲ್ಲಿ  (ಎಲ್‌ಐಸಿ)ಖಾಲಿ ಇರುವ ವಿಮಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

Latest Videos

undefined

ಕೆಲಸದ ಅನುಭವ: ಭಾರತೀಯ ಜೀವ ವಿಮಾ ನಿಗಮ (LIC) ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಅನುಭವ ಹೊಂದಿರಬೇಕು.

HAVERI ANGANWADI RECRUITMENT 2022: ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ: ಭಾರತೀಯ ಜೀವ ವಿಮಾ ನಿಗಮದಲ್ಲಿ  (ಎಲ್‌ಐಸಿ)ಖಾಲಿ ಇರುವ ವಿಮಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಭಾರತೀಯ ಜೀವ ವಿಮಾ ನಿಗಮದಲ್ಲಿ  (ಎಲ್‌ಐಸಿ)ಖಾಲಿ ಇರುವ  ವಿಮಾ ಸಲಹೆಗಾರ ಹುದ್ದೆಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 7,000 ರೂ ನಿಂದ 25,000 ರೂ ವೇತನ ದೊರೆಯಲಿದೆ.

ಉದ್ಯೋಗದ ಸ್ಥಳ: ಭಾರತೀಯ ಜೀವ ವಿಮಾ ನಿಗಮದಲ್ಲಿ  (ಎಲ್‌ಐಸಿ)ಖಾಲಿ ಇರುವ  ವಿಮಾ ಸಲಹೆಗಾರ ಹುದ್ದೆಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.

RRB Recruitment 2022: ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.65 ಲಕ್ಷ ಹುದ್ದೆ ಖಾಲಿ, ಶೀಘ್ರವೇ ನೇಮಕಾತಿ

LIC ಕನ್ಯಾದಾನ ಯೋಜನೆ (LIC Kanyadan Policy ) : ಎಲ್ ಐಸಿ,ಹೆಣ್ಣು ಮಕ್ಕಳ ಪಾಲಕರಿಗಾಗಿಯೇ ಈ ಯೋಜನೆಯನ್ನು ಶುರು ಮಾಡಿದೆ. ಮದುವೆ ಸಂದರ್ಭದಲ್ಲಿ ಪಾಲಕರಿಗೆ ಆರ್ಥಿಕ ಹೊಣೆಯಾಗಬಾರದು ಎಂದ್ರೆ ಮಗು ಹುಟ್ಟಿದ ನಂತ್ರ ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ. ದಿನಕ್ಕೆ ನೀವು 151 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಮಗಳು ಮದುವೆ ವಯಸ್ಸಿಗೆ ಬಂದಾಗ 31 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ನೀವು ಪಡೆಯುತ್ತೀರಿ. 

ಕನ್ಯಾದಾನ ಯೋಜನೆಯಲ್ಲಿ ಹಣ ಹೂಡಲು ಅರ್ಹತೆ :  ಎಲ್ ಐಸಿ   ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡಲು, ನಿಮ್ಮ ವಯಸ್ಸು ಕನಿಷ್ಠ 30 ವರ್ಷವಾಗಿರಬೇಕು.ಮಗಳ ವಯಸ್ಸು 1 ವರ್ಷಕ್ಕಿಂತ ಕಡಿಮೆ ಇರಬಾರದು. ಹೂಡಿಕೆ ಶುರು ಮಾಡಿ 25ನೇ ವರ್ಷಕ್ಕೆ ನೀವು ಹಣವನ್ನು ಪಡೆಯಬಹುದು. ಆದರೆ ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ. ಈ ಪಾಲಿಸಿಯು ಪಾಲಿಸಿದಾರ ಹಾಗೂ ಮಗಳ ವಯಸ್ಸನ್ನು ಅವಲಂಬಿಸಿರುತ್ತದೆ.  
ಕನ್ಯಾದಾನ ಪಾಲಿಸಿಯಲ್ಲಿ ಮೊದಲೇ ಹೇಳಿದಂತೆ ನೀವು ದಿನಕ್ಕೆ 151 ರೂಪಾಯಿಗಳನ್ನು ಉಳಿಸಿದ್ರೆ ಸಾಕು. ಅಂದ್ರೆ ನೀವು ತಿಂಗಳಿಗೆ 4530 ರೂಪಾಯಿ ಉಳಿಸಿ, ಹೂಡಿಕೆ ಮಾಡಬೇಕಾಗುತ್ತದೆ. 25 ವರ್ಷಗಳ ನಂತರ, ಪಾಲಿಸಿಯು ಪಕ್ವವಾದಾಗ ನೀವು ಪೂರ್ಣ 31 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ.

ಎಲ್ ಐಸಿ ಕನ್ಯಾದಾನ ಪಾಲಿಸಿ ಪ್ರಕಾರ, ವಿಮಾದಾರನು ನಡುವೆ ಮರಣಹೊಂದಿದರೆ, ಕುಟುಂಬವು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪಾಲಿಸಿಯ ಉಳಿದ ವರ್ಷದಲ್ಲಿ ಮಗಳು ಪ್ರತಿ ವರ್ಷ ಹಣವನ್ನು ಪಡೆಯುತ್ತಾರೆ. ಈ ಪಾಲಿಸಿಗೆ ಹಣದ ಮಿತಿಯಿಲ್ಲ.  ಹೆಚ್ಚು ಅಥವಾ ಕಡಿಮೆ ಪ್ರೀಮಿಯಂಗೆ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಅದು ಪಾಲಿಸಿದಾರನನ್ನು ಅವಲಂಬಿಸಿರುತ್ತದೆ.

click me!