GAIL India Recruitment 2022 : ವಿವಿಧ ವಿಭಾಗದ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ, 1.80 ಲಕ್ಷದವರೆಗೂ ವೇತನ

By Suvarna NewsFirst Published Feb 16, 2022, 4:11 PM IST
Highlights

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್  ವಿವಿಧ ವಿಭಾಗದಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್ ಟ್ರೈನಿ   ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.   ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು  ಮಾರ್ಚ್‌ 16 ಕೊನೆಯ ದಿನವಾಗಿದೆ. 

ಬೆಂಗಳೂರು(ಫೆ.16): ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (Gas Authority of India Limited- GAIL) ವಿವಿಧ ವಿಭಾಗದಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್ ಟ್ರೈನಿ   ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.  ಜಾಹೀರಾತು ಸಂಖ್ಯೆ. ಗೇಲ್ /ಓಪನ್ / ಇಟಿ / 4ಎ /2021 ಅಧಿಸೂಚನೆ ಪ್ರಕಾರ ಒಟ್ಟು 48 ಹುದ್ದೆಗಳು ಖಾಲಿ ಇದ್ದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು  ಮಾರ್ಚ್‌ 16 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಗೈಲ್ ನ ಅಧಿಕೃತ ವೆಬ್‌ತಾಣ https://gailonline.com/ ಗೆ ಭೇಟಿ ನೀಡಲು ಕೋರಲಾಗಿದೆ.

ವಿವಿಧ ವಿಭಾಗದಲ್ಲಿನ ಒಟ್ಟು 48 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ  ವಿವರಗಳು:
ಎಕ್ಸಿಕ್ಯೂಟಿವ್ ಟ್ರೈನಿ (ಇನ್‌ಸ್ಟ್ರುಮೆಂಟೇಶನ್ - Instrumentation) : 18 ಹುದ್ದೆಗಳು
ಎಕ್ಸಿಕ್ಯುಟಿವ್ ಟ್ರೈನಿ (ಮೆಕ್ಯಾನಿಕಲ್ - Mechanical): 15 ಹುದ್ದೆಗಳು
ಎಕ್ಸಿಕ್ಯೂಟಿವ್ ಟ್ರೈನಿ (ಎಲೆಕ್ಟ್ರಿಕಲ್ - Electrical): 15 ಹುದ್ದೆಗಳು

RBI RECRUITMENT 2022: ಪದವೀಧರರಿಗೆ RBIನಲ್ಲಿ ಉದ್ಯೋಗವಕಾಶ, ಇಂದೇ ಅರ್ಜಿ ಸಲ್ಲಿಸಿ

ಶೈಕ್ಷಣಿಕ ವಿದ್ಯಾರ್ಹತೆಗಳು: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.

ಎಕ್ಸಿಕ್ಯೂಟಿವ್  ಟ್ರೈನಿ (ಇನ್‌ಸ್ಟ್ರುಮೆಂಟೇಶನ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಭ್ಯರ್ಥಿಗಳು ಕನಿಷ್ಠ 65% ಅಂಕಗಳೊಂದಿಗೆ ಇನ್‌ಸ್ಟ್ರುಮೆಂಟೇಶನ್ ಅಥವಾ ಇನ್‌ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ ಮತ್ತು ಇನ್‌ಸ್ಟ್ರುಮೆಂಟೇಶನ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು.

ಎಕ್ಸಿಕ್ಯೂಟಿವ್  ಟ್ರೈನಿ (ಮೆಕ್ಯಾನಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಭ್ಯರ್ಥಿಗಳು ಕನಿಷ್ಠ 65% ಅಂಕಗಳೊಂದಿಗೆ ಮೆಕ್ಯಾನಿಕಲ್ / ಪ್ರೊಡಕ್ಷನ್ / ಪ್ರೊಡಕ್ಷನ್ & ಇಂಡಸ್ಟ್ರಿಯಲ್ / ಮ್ಯಾನುಫ್ಯಾಕ್ಚರಿಂಗ್ / ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್‌ನಲ್ಲಿ ಎಂಜಿನಿಯರಿಂಗ್ / ತಂತ್ರಜ್ಞಾನದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದಿರಬೇಕು.

ಎಕ್ಸಿಕ್ಯೂಟಿವ್  ಟ್ರೈನಿ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 65% ಅಂಕಗಳೊಂದಿಗೆ ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

Oil India Limited Recruitment 2022: ಗ್ರೇಡ್ III, V ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು  ಅಭ್ಯರ್ಥಿಗಳ ವಯಸ್ಸು 16 ಮಾರ್ಚ್ 2022ರ ಅನ್ವಯ ಗರಿಷ್ಠ  26 ವರ್ಷವಾಗಿರಬೇಕು. ಸರ್ಕಾರದ ನಿಯಮಗಳ ಅನುಸಾರ ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಅಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ

ಆಯ್ಕೆ ಪ್ರಕ್ರಿಯೆ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  GATE-2022  ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಜೊತೆಗೆ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ವೇತನ ವಿವರ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ವಿಭಾಗದ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 60,000 ರೂ. ನಿಂದ 1,80,000 ರೂ. ವರೆಗೆ ವೇತನ ದೊರೆಯಲಿದೆ.
 

click me!