ಭಾರತೀಯ ರೈಲ್ವೇಯಲ್ಲಿ ಉದ್ಯೋಗಕವಕಾಶ, ಅರ್ಜಿ ಸಲ್ಲಿಸಲು ಫೆ.22 ಕೊನೆಯ ದಿನಾಂಕ

Published : Jan 27, 2025, 03:42 PM IST
ಭಾರತೀಯ ರೈಲ್ವೇಯಲ್ಲಿ ಉದ್ಯೋಗಕವಕಾಶ, ಅರ್ಜಿ ಸಲ್ಲಿಸಲು ಫೆ.22 ಕೊನೆಯ ದಿನಾಂಕ

ಸಾರಾಂಶ

ಭಾರತೀಯ ರೈಲ್ವೇಯಲ್ಲಿ ಬರೋಬ್ಬರಿ 32,438 ಖಾಲಿ ಹುದ್ದೆಗಳಿಗೆ ನೇಮಕಾತಿ ಆರಂಭಗೊಂಡಿದೆ. ಉತ್ತಮ ವೇತನ, ಕನಿಷ್ಠ ವಿದ್ಯಾರ್ಹತೆ ಇದ್ದರೆ ಸಾಕು. ಇನ್ನು ಫೆ.22 ಅರ್ಜಿ ಸಲ್ಲಿಸಲು ಕೊನೆಯ ದಿನ. 

ನವದೆಹಲಿ(ಜ.27) ಕೆಲಸ ಹುಡುಕುತ್ತಿರುವವರಿಗೆ ಭಾರತೀಯ ರೈಲ್ವೇ ಸಿಹಿ ಸುದ್ದಿ ನೀಡಿದೆ. ಶೀಘ್ರದಲ್ಲೇ ನೇಮಕಾತಿಯಾಗಲಿದೆ. ಜೊತೆಗೆ ಕೈತುಂಬ ವೇತನ ಕೂಡ ಸಿಗಲಿದೆ. ಭಾರತೀಯ ರೈಲ್ವೇ ಈಗಾಗಲೇ ಹಲವು ಖಾಲಿ ಹುದ್ದೆಗಳ ಭರ್ತಿ ಮಾಡುತ್ತಿದೆ. ಈ ಪೈಕಿ ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ (RRB) ಮಹತ್ವದ ಅಧಿಸೂಚನೆ ಹೊರಡಿಸಿದೆ. ಈ ಬಾರಿ ಬರೋಬ್ಬರಿ 38,438 ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು RRB ಮನವಿ ಮಾಡಿಕೊಂಡಿದೆ. ಕನಿಷ್ಠ ವಯಸ್ಸು 18 ಇನ್ನು ಗರಿಷ್ಠ ವಯಸ್ಸು 36. ಫೆಬ್ರವರಿ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 

ಪ್ರಮುಖವಾಗಿ ನೀವು ಸರ್ಕಾರಿ ಕೆಲಸ ಹುಡುಕುತ್ತಿದ್ದರೆ, ರೈಲ್ವೆಯಲ್ಲಿ ಕೆಲಸ ಮಾಡಲು ಇಷ್ಟಪಟ್ಟರೆ ಇದೀಗ ಉತ್ತಮ ಅವಕಾಶ ಒದಗಿ ಬಂದಿದೆ.   ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ನೀಡಲಾಗುವುದು. ಈ ನೇಮಕಾತಿಯು ರೈಲ್ವೆ ನೇಮಕಾತಿ ಮಂಡಳಿ ಮಟ್ಟ ಒಂದರ ಅಡಿಯಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು www.rrbapply.gov.in/ ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 36 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 23 ಜನವರಿ 2025 ರಿಂದ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಫೆಬ್ರವರಿ 2025.

ಭಾರತದ ಅತೀ ದೊಡ್ಡ ಹೆಸರಿನ ರೈಲು ನಿಲ್ದಾಣಲ್ಲಿದೆ 57 ಪದ , ಎಲ್ಲಿದೆ ಈ ಸ್ಟೇಶನ್?

ವಿಶೇಷ ಅಂದರೆ ಕೋವಿಡ್ ಸಮಯದದಲ್ಲಿ ವಿದ್ಯಾಭ್ಯಾಸ ಪೂರೈಸಿದ ಅಥವಾ ಪಡೆದ ಅಭ್ಯರ್ಥಿಗಳು ಕಳೆದ ರೈಲ್ವೇ ನೇಮಕಾತಿ ಮಿಸ್ ಮಾಡಿಕೊಂಡಿದ್ದರೆ, ಅಂಥವರಿಗೆ 3 ವರ್ಷಗಳ ವಯಸ್ಸಿನ ವಿನಾಯಿತಿ ನೀಡಲಾಗಿದೆ. ಭಾರತೀಯ ರೈಲ್ವೇಯ ಈ ನಡೆ ಹಲವು ಅರ್ಹ ಅಭ್ಯರ್ಥಿಗಳಿಗೆ ನೆರವಾಗಲಿದೆ. 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ₹500 ಶುಲ್ಕ ಪಾವತಿಸಬೇಕು. PwBD, ಮಹಿಳೆಯರು, ತೃತೀಯ ಲಿಂಗಿಗಳು, ಮಾಜಿ ಸೈನಿಕರು ಮತ್ತು SC, ST, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ವರ್ಗಗಳ (EBC) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹250. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೊದಲು www.rrbapply.gov.in ಗೆ ಭೇಟಿ ನೀಡಿ. ನಂತರ ಮುಖಪುಟದಲ್ಲಿ "ನೇಮಕಾತಿ" ವಿಭಾಗಕ್ಕೆ ಹೋಗಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಅರ್ಜಿ ಶುಲ್ಕ ಪಾವತಿಸಿ. ಅರ್ಜಿ ನಮೂನೆಯನ್ನು ಸಲ್ಲಿಸಿ. ಭವಿಷ್ಯದ ಉಪಯೋಗಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಟಿಕೆಟ್ ರಿಸರ್ವೇಶನ್ ಮಾಡದ ಪ್ರಯಾಣಿಕರಿಗೆ ಗುಡ್ ನ್ಯೂಸ್, 10 ಹೊಸ ರೈಲು ಸೇವೆ ಆರಂಭ
 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್