ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ, 7 ಸಾವಿರಕ್ಕೂ ಹೆಚ್ಚು ನೇಮಕಾತಿ

By Gowthami K  |  First Published Jan 23, 2024, 2:27 PM IST

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ 7000 ಕ್ಕೂ ಹೆಚ್ಚು ಹುದ್ದೆಗಳಿವೆ  ಆಸಕ್ತರು ಅರ್ಜಿ ಸಲ್ಲಿಸಬಹುದು.


ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ 7000 ಕ್ಕೂ ಹೆಚ್ಚು ಹುದ್ದೆಗಳಿವೆ  ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಬೇಕು ಒಬಿಸಿ ಅಭ್ಯರ್ಥಿಗಳಿಗೆ ರೂ 500 ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯಾ ಹುದ್ದೆಗಳಿಗನುಗುಣವಾಗಿ ನೀವು ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ. 19 ಫೆಬ್ರವರಿ 2024 ಕೊನೆಯ ದಿನಾಂಕವಾಗಿದೆ . ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಹೊರಡಿಸಿದ್ದು, ಜನವರಿ 20 ರಿಂದ ಫೆಬ್ರವರಿ 19 ರವರೆಗೆ ಅಧಿಕೃತ ವೆಬ್ಸೈಟ್ https://www.recruitmentrrb.in/#/auth/landing ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Tap to resize

Latest Videos

undefined

ಅಗ್ನಿವೀರ ನೇಮಕಕ್ಕೆ ಆನ್‌ಲೈನ್‌ ಪರೀಕ್ಷೆ, ಫೆಬ್ರವರಿ 6ರೊಳಗೆ ಅರ್ಜಿ ಸಲ್ಲಿಸಲು ಸೂಚನೆ

ಭಾರತೀಯ ರೈಲ್ವೆಯ ಅಡಿಯಲ್ಲಿ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆಯಾಯ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು. 

ಪಿಟ್ಟರ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮಿಲ್ ರೈಟ್ / ಎಲೆಕ್ಟ್ರಿಕಲ್ ಮೆಕ್ಯಾನಿಕ್ ಆಗಿರಬೇಕು. ಮೆಕ್ಯಾನಿಕ್ ಟ್ರೇಡ್ ಗಳಲ್ಲಿ ಮೆಂಟೇನೆನ್ಸ್ ಮೆಕ್ಯಾನಿಕ್, ಎನ್ ಸಿವಿಟಿ / ಪಿಜಿಡಿಎಂ ಎಸ್ಸಿವಿಟಿಯ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್ / ಡಿಪ್ಲೊಮಾ. ಎಸ್‌ಎಸ್‌ಎಲ್ಸಿ ಮತ್ತು ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.

ನ್ಯಾಷನಲ್ ಇನ್ಶೂರೆನ್ಸ್‌ ಕಂಪನಿಯಲ್ಲಿ 274 ಅಡ್ಮಿನಿಸ್ಟ್ರೇಟಿವ್ ಆಫೀಸರ್ ನೇಮಕಾತಿ

ಮೆಟ್ರಿಕ್ಯುಲೇಷನ್ ಎಸ್‌ಎಸ್‌ಎಲ್ಸಿ ಪ್ಲಸ್ ಕೋರ್ಸ್ ಆಕ್ಟ್ ಅಪ್ರೆಂಟಿಸ್ಶಿಪ್ ಪೂರ್ಣಗೊಳಿಸಿದ ಟ್ರೇಡ್ಗಳಲ್ಲಿ ಅಪ್ರೆಂಟಿಸ್ಶಿಪ್ ಅನ್ನು ಜನವರಿ 20 ರಂದು ಬಿಡುಗಡೆ ಮಾಡುವ ವಿವರವಾದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗುವುದು ಅಥವಾ ಮೆಟ್ರಿಕ್ಯುಲೇಷನ್/ ಎಸ್‌ಎಸ್‌ಎಲ್ಸಿ ಜೊತೆಗೆ ಐಟಿಐ ಬದಲಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ ಎಂಜಿನಿಯರಿಂಗ್ನಲ್ಲಿ ಮೂರು ವರ್ಷಗಳ ಡಿಪ್ಲೊಮಾ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

click me!