ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರದಲ್ಲಿ ತಂತ್ರಜ್ಞ ಗ್ರೇಡ್‌ -೨ ಹುದ್ದೆ, ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Jan 18, 2024, 9:11 PM IST

ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ದಲ್ಲಿ ತಂತ್ರಜ್ಞ ಗ್ರೇಡ್‌ -೨  ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಆಸಕ್ತರು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.


ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ದಲ್ಲಿ ತಂತ್ರಜ್ಞ ಗ್ರೇಡ್‌ -೨ (ಅನಿಮಲ್ ಹೌಸ್, ಕ್ಯಾಂಟೀನ್, ಗೆಸ್ಟ್ ಹೌಸ್, ಫಾರ್ಮಾಸಿಸ್ಟ್ ಮತ್ತು ಇತರೆ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: ತಂತ್ರಜ್ಞ ಗ್ರೇಡ್‌ -೨ : 40 ಹುದ್ದೆ ( ಒಟ್ಟು ಹುದ್ದೆಗಳಲ್ಲಿ ಅನಿಮಲ್ ಹೌಸ್, ಕ್ಯಾಂಟೀನ್, ಗೆಸ್ಟ್ ಹೌಸ್, ಫಾರ್ಮಾಸಿಸ್ಟ್ ಮತ್ತು ಇತರೆ ಹುದ್ದೆಗಳು ಒಳಗೊಂಡಿದೆ)

Tap to resize

Latest Videos

undefined

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-01-2024

ಅರ್ಜಿ ಶುಲ್ಕ

ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ : ರು. 100

ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ಇಲ್ಲ.

ವಯಸ್ಸಿನ ಮಿತಿ (20-01-2024 ರಂತೆ) : ಗರಿಷ್ಠ ವಯಸ್ಸಿನ ಮಿತಿ : 28 ವರ್ಷಗಳು

ವೇತನ ಶ್ರೇಣಿ : ರು. 36,425 (ಮಾಸಿಕ)

ಶೈಕ್ಷಣಿಕ ವಿದ್ಯಾರ್ಹತೆ:

ಸಾಮಾನ್ಯ ಅರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಎಸ್‌ ಎಸ್‌ ಎಲ್‌ ಸಿ ಅಥವಾ ತತ್ಸಮಾನ ಪರೀಕ್ಷೆಯನ್ನು ವಿಜ್ಞಾನ ವಿಷಯಗಳೊಂದಿಗೆ ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಹಾಗೂ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ವಿಭಾಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವಿದ್ಯಾರ್ಹತೆ ಹೊಂದಿರಬೇಕು.

ನಿರ್ದಿಷ್ಟ ವಿದ್ಯಾರ್ಹತೆ:

1. ತಂತ್ರಜ್ಞ [ಅನಿಮಲ್ ಹೌಸ್ ವಿಭಾಗ] : ಅನಿಮಲ್ ಫೆಸಿಲಿಟಿ/ಅನಿಮಲ್ ಹೌಸ್ (ಲ್ಯಾಬ್ ಅನಿಮಲ್ ಹ್ಯಾಂಡ್ಲಿಂಗ್/ಬ್ರೀಡಿಂಗ್‌ ) ನಲ್ಲಿ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

2. ತಂತ್ರಜ್ಞ [ ಕ್ಯಾಂಟೀನ್ ವಿಭಾಗ ] : ಆಹಾರ ಮತ್ತು ಪಾನೀಯ ಸೇವೆಗಳು / ಆಹಾರ ಉತ್ಪಾದನೆ / ಅಡುಗೆ ವಿಷಯದಲ್ಲಿ 2 ವರ್ಷಗಳು ಅಪ್ರೆಂಟಿಸ್ ಟ್ರೈನಿಯಾಗಿ ಅನುಭವ ಪಡೆದಿರಬೇಕು.

3. ತಂತ್ರಜ್ಞ [ಅತಿಥಿ ಗೃಹ ವಿಭಾಗ] : ಹೌಸ್ ಕೀಪರ್/ಫ್ರಂಟ್ ಆಫೀಸ್ ಸಹಾಯಕ/ಕಚೇರಿ ಸಹಾಯಕ ಕಮ್ ಕಂಪ್ಯೂಟರ್ ಆಪರೇಟರ್ ವಿಭಾಗದಲ್ಲಿ 2 ವರ್ಷಗಳು ಅಪ್ರೆಂಟಿಸ್ ಟ್ರೈನಿಯಾಗಿ ಅನುಭವ ಪಡೆದಿರಬೇಕು.

4. ತಂತ್ರಜ್ಞ [ಫಾರ್ಮಸಿಸ್ಟ್ ವಿಭಾಗ] : ವೃದ್ಧಾಪ್ಯ ಆರೈಕೆ/ಕಚೇರಿ , ಅಸಿಸ್ಟೆಂಟ್ ಕಮ್ ಕಂಪ್ಯೂಟರ್ ಆಪರೇಟರ್ ವಿಭಾದಲ್ಲಿ 2 ವರ್ಷಗಳು ಅಪ್ರೆಂಟಿಸ್ ಟ್ರೈನಿಯಾಗಿ ಅನುಭವ ಪಡೆದಿರಬೇಕು.

5. ತಂತ್ರಜ್ಞ [ ಎಲ್‌ಟಿಎಸ್‌ ] : ಕಚೇರಿ ಸಹಾಯಕ ಕಮ್ ಕಂಪ್ಯೂಟರ್ ಆಪರೇಟರ್ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರ ಪಡೆದಿರೇಕು.

6. ತಂತ್ರಜ್ಞ [ಐಟಿ ಲ್ಯಾಕೋನ್ಸ್ ವಿಭಾಗ] : ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕ್ ನಿರ್ವಹಣೆ ವಿಭಾಗದಲ್ಲಿ 2 ವರ್ಷಗಳು ಅಪ್ರೆಂಟಿಸ್ ಟ್ರೈನಿಯಾಗಿ ಅನುಭವ ಪಡೆದಿರಬೇಕು.

7. ತಂತ್ರಜ್ಞ [ ಆರ್‌ &ಚಿmಠಿ; ಎಸಿ ವಿಭಾಗ] : ಮೆಕ್ಯಾನಿಕ್ (ಶೀತಲೀಕರಣ ಮತ್ತು ಹವಾನಿಯಂತ್ರಣ) ವಿಭಾದಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರೇಕು.

8. ತಂತ್ರಜ್ಞ [ಪ್ಲಂಬರ್‌ ] : ಪ್ಲಂಬರ್‌ ವಿಭಾದಲ್ಲಿ ಐಟಿಐ ಪ್ರಮಾಣಪತ್ರ ಪಡೆದಿರೇಕು.

9. ತಂತ್ರಜ್ಞ [ಮೇಸನ್ರಿ] : ಮೇಸನ್ (ಕಟ್ಟಡ ನಿರ್ಮಾಣಕಾರ) ವಿಭಾಗದಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರೇಕು.

10. ತಂತ್ರಜ್ಞ [ ಕಾರ್ಪೆಂಟ್ರಿ ] : ಕಾರ್ಪೆಂಟ್ರಿ ವಿಭಾದಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರೇಕು.

11. ತಂತ್ರಜ್ಞ [ ಪ್ರಯೋಗಾಲಯ ] : ಪ್ರಯೋಗಾಲಯ ಸಹಾಯಕ (ಕೆಮಿಕಲ್‌ ಪ್ಲಾನ್ಟ್) ವಿಭಾದಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರೇಕು.

12. ತಂತ್ರಜ್ಞ [ಸಾರಿಗೆ] : ಚಾಲಕ ಕಮ್ ಮೆಕ್ಯಾನಿಕ್ ವಿಭಾಗದಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರಬೇಕು.

ಆಯ್ಕೆಯ ವಿಧಾನ ಎರಡು ಹಂತದ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಟ್ರೇಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮಾತ್ರ ಎರಡನೇ ಹಂತದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗೆ ಆಯ್ಕೆಮಾಡಲಾಗುವುದು. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯು ಪೇಪರ್‌ ೧, ೨ ಮತ್ತು ೩ ರಂತೆ ಒಟ್ಟು 150 ಪ್ರಶ್ನೆಗಳಿಗೆ ಎರಡೂವರೆ ಗಂಟೆಯ ಅವಧಿಗೆ ನಡೆಸಲಾಗುತ್ತದೆ. ಅಂತಿಮವಾಗಿ ಪೇಪರ್-2 ಮತ್ತು ಪೇಪರ್-3 ರಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಮಾತ್ರ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ವೀಕ್ಷಿಸಲು ಕೋರಲಾಗಿದೆ.

click me!