Indian Army Recruitment 2022: ಗ್ರೂಪ್ ಸಿ ಹುದ್ದೆಗಳಿಗೆ ಭಾರತೀಯ ಸೇನೆ ನೇಮಕಾತಿ

By Suvarna NewsFirst Published Mar 14, 2022, 7:21 PM IST
Highlights

ಭಾರತೀಯ ಸೇನಾಪಡೆಯು ವಾಶರ್‌ಮ್ಯಾನ್ ಮತ್ತು  ಉದ್ಯಾನಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 2 ಕೊನೆಯ ದಿನವಾಗಿದೆ. 
 

ಬೆಂಗಳೂರು(ಮಾ.14): ಭಾರತೀಯ ಸೇನಾಪಡೆಯು ಆರ್ಮಿ ಪೋಸ್ಟಲ್ ಸರ್ವಿಸ್ ವಿಂಗ್, ಬ್ರಿಗೇಡ್ ಆಫ್ ಗಾರ್ಡ್ಸ್ ನಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.   ವಾಶರ್‌ಮ್ಯಾನ್ ಮತ್ತು ಗಾರ್ಡ್‌ನರ್ (ಉದ್ಯಾನಪಾಲಕ) ಹುದ್ದೆಗಳು ಸೇರಿ ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 2 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ  joinindianarmy.nic.in ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಮೆಟ್ರಿಕ್ಯುಲೇಶನ್ ಅಥವಾ 10 ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 25 ವರ್ಷಗಳ ಒಳಗಿರಬೇಕು.

Google Recruitment 2022: ಬೆಂಗಳೂರು ಕಛೇರಿಯಲ್ಲಿನ ಹುದ್ದೆಗೆ ದೈತ್ಯ ಗೂಗಲ್ ನೇಮಕಾತಿ 

ಆಯ್ಕೆ ಪ್ರಕ್ರಿಯೆ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ (practical test) ಮೂಲಕ ಆಯ್ಕೆ ಮಾಡಲಾಗುತ್ತದೆ. 

ವೇತನ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹18,000 ದಿಂದ ₹56,900 ರೂ ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಎಪ್ರಿಲ್ 2 ಕ್ಕೂ ಮುನ್ನ ಈ ವಿಳಾಸಕ್ಕೆ ಕಳುಹಿಸಿ ಕೊಡಿ
Wing Commander
APS Wing
Brigade of The Guards Regimental Centre Kamptee
Dist- Nagpur, MR- 441001 

Central Bank of India Recruitment 2022: ಕಚೇರಿ ಸಹಾಯಕ ಹುದ್ದೆಗೆ ಸಿಬಿಐ ನೇಮಕಾತಿ 

ಟ್ರೇಡ್ಸ್‌ಮ್ಯಾನ್ ಸ್ಕಿಲ್ಡ್ ಹುದ್ದೆಗೆ ನೌಕಾಸೇನೆ ನೇಮಕಾತಿ: ಭಾರತೀಯ ನೌಕಾಸೇನೆಯಲ್ಲಿ (Indian Navy) ಖಾಲಿ ಇರುವ ವಿವಿಧ ಹುದ್ದೆಗಳಿಗೆ  ಅಧಿಸೂಚನೆ ಹೊರಡಿಲಾಗಿದೆ. ನೌಕಾಸೇನೆಯು ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಒಟ್ಟು 1531 ಟ್ರೇಡ್ಸ್‌ಮ್ಯಾನ್ ಸ್ಕಿಲ್ಡ್ (Tradesman Skilled) ಹುದ್ದೆಗೆ  ಅರ್ಜಿ ಆಹ್ವಾನಿಸಿದ್ದು,  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,   ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್22 ಆಗಿದೆ. ಆಸಕ್ತರು  ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ https://www.indiannavy.nic.in/ ಗೆ  ಅಥವಾ https://www.joinindiannavy.gov.in/en ಭೇಟಿ ನೀಡಲು ಕೋರಲಾಗಿದೆ.

ಒಟ್ಟು 1531 ಹುದ್ದೆಗಳ  ವರ್ಗವಾರು ವಿಂಗಡಣೆ ಇಂತಿದೆ
ಕಾಯ್ದಿರಿಸದ ವರ್ಗ (Unreserved category): 697  ಹುದ್ದೆಗಳು
EWS ವರ್ಗ : 141 ಹುದ್ದೆಗಳು
ಒಬಿಸಿ ವರ್ಗ : 385 ಹುದ್ದೆಗಳು
ಪರಿಶಿಷ್ಟ ಜಾತಿ (SC): 215 ಹುದ್ದೆಗಳು
ಪರಿಶಿಷ್ಟ ಪಂಗಡ (ST): 93 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ 10ನೇ ತರಗತಿ/ಐಟಿಐ ಉತ್ತೀರ್ಣರಾಗಿರಬೇಕು. ಅಥವಾ ಸಂಬಂಧಪಟ್ಟ ಟ್ರೇಡ್‌ನಲ್ಲಿ ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿರಬೇಕು. 

ವೇತನ ವಿವರ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ ಮಾಸಿಕ 19,900 ರಿಂದ 63,200 ರೂ ವರೆಗೆ  ವೇತನ ದೊರೆಯಲಿದೆ.

click me!