Indian Navy Recruitment 2022: ಟ್ರೇಡ್ಸ್‌ಮ್ಯಾನ್ ಸ್ಕಿಲ್ಡ್ ಹುದ್ದೆಗೆ ನೌಕಾಸೇನೆ ನೇಮಕಾತಿ

By Suvarna News  |  First Published Mar 14, 2022, 5:15 PM IST

ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ಒಟ್ಟು 1531 ಟ್ರೇಡ್ಸ್‌ಮ್ಯಾನ್ ಸ್ಕಿಲ್ಡ್ ಹುದ್ದೆಗೆ  ಅರ್ಜಿ ಆಹ್ವಾನಿಸಿದ್ದು, ಮಾರ್ಚ್​​ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಮಾ.14): ಭಾರತೀಯ ನೌಕಾಸೇನೆಯಲ್ಲಿ (Indian Navy) ಖಾಲಿ ಇರುವ ವಿವಿಧ ಹುದ್ದೆಗಳಿಗೆ  ಅಧಿಸೂಚನೆ ಹೊರಡಿಲಾಗಿದೆ. ನೌಕಾಸೇನೆಯು ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಒಟ್ಟು 1531 ಟ್ರೇಡ್ಸ್‌ಮ್ಯಾನ್ ಸ್ಕಿಲ್ಡ್ (Tradesman Skilled) ಹುದ್ದೆಗೆ  ಅರ್ಜಿ ಆಹ್ವಾನಿಸಿದ್ದು,  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,   ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್22 ಆಗಿದೆ. ಆಸಕ್ತರು  ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ https://www.indiannavy.nic.in/ ಗೆ  ಅಥವಾ https://www.joinindiannavy.gov.in/en ಭೇಟಿ ನೀಡಲು ಕೋರಲಾಗಿದೆ.

ಒಟ್ಟು 1531 ಹುದ್ದೆಗಳ  ವರ್ಗವಾರು ವಿಂಗಡಣೆ ಇಂತಿದೆ
ಕಾಯ್ದಿರಿಸದ ವರ್ಗ (Unreserved category): 697  ಹುದ್ದೆಗಳು
EWS ವರ್ಗ : 141 ಹುದ್ದೆಗಳು
ಒಬಿಸಿ ವರ್ಗ : 385 ಹುದ್ದೆಗಳು
ಪರಿಶಿಷ್ಟ ಜಾತಿ (SC): 215 ಹುದ್ದೆಗಳು
ಪರಿಶಿಷ್ಟ ಪಂಗಡ (ST): 93 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ 10ನೇ ತರಗತಿ/ಐಟಿಐ ಉತ್ತೀರ್ಣರಾಗಿರಬೇಕು. ಅಥವಾ ಸಂಬಂಧಪಟ್ಟ ಟ್ರೇಡ್‌ನಲ್ಲಿ ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿರಬೇಕು. 

ವಯೋಮಿತಿ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷದೊಳಗಿರಬೇಕು. ಸರಕಾರದ ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

CENTRAL BANK OF INDIA RECRUITMENT 2022: ಕಚೇರಿ ಸಹಾಯಕ ಹುದ್ದೆಗೆ ಸಿಬಿಐ ನೇಮಕಾತಿ

ಆಯ್ಕೆ ಪ್ರಕ್ರಿಯೆ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ ವಿವರ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ ಮಾಸಿಕ 19,900 ರಿಂದ 63,200 ರೂ ವರೆಗೆ  ವೇತನ ದೊರೆಯಲಿದೆ.

ಉದ್ಯೋಗ ಸ್ಥಳ: ಭಾರತೀಯ ನೌಕಾಸೇನೆಯ ವಿವಿಧ ಪ್ರಧಾನ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಖಾಲಿ ಇರುವ ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಲು ತಯಾರಿರಬೇಕು.

Google Recruitment 2022: ಬೆಂಗಳೂರು ಕಛೇರಿಯಲ್ಲಿನ ಹುದ್ದೆಗೆ ದೈತ್ಯ ಗೂಗಲ್ ನೇಮಕಾತಿ 

ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾದ WNC: ಭಾರತೀಯ ನೌಕಾಸೇನೆಯ (indian navy) ವೆಸ್ಟರ್ನ್ ನೇವಲ್ ಕಮಾಂಡ್ (Western Naval Command ) ವಿಭಾಗದಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಗ್ರೂಪ್ ಸಿ ವಿಭಾಗದ ಫಾರ್ಮಸಿಸ್ಟ್, ಫೈರ್‌ಮ್ಯಾನ್ ಸೇರಿ ಒಟ್ಟು 127 ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು  ಇಚ್ಚಿಸುವವರು ಏಪ್ರಿಲ್​ 26ರ ಒಳಗೆ ಆಫ್​ಲೈನ್​ (Offline) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು indiannavy.nic.in ವೆಬ್‌ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಫ್ಲಾಗ್ ಆಫೀಸರ್
ಕಮಾಂಡಿಂಗ್-ಇನ್-ಚೀಫ್,
ಪ್ರಧಾನ ಕಛೇರಿ
ಪಶ್ಚಿಮ ನೌಕಾ ಕಮಾಂಡ್,
ಬಲ್ಲಾಡ್ ಪಿಯರ್,ಟೈಗರ್ ಗೇಟ್ ಹತ್ತಿರ
ಮುಂಬೈ 400001

click me!