IISC Recruitment 2022: ಬೆಂಗಳೂರಿನಲ್ಲಿ ಬಂಪರ್ ಆಫರ್

Published : Nov 05, 2022, 06:40 PM IST
IISC Recruitment 2022: ಬೆಂಗಳೂರಿನಲ್ಲಿ ಬಂಪರ್ ಆಫರ್

ಸಾರಾಂಶ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಡ್ ಆಪರೇಷನ್ಸ್ ಹುದ್ದೆ ಖಾಲಿ ಇದ್ದು, ಅರ್ಜಿ ಸಲ್ಲಿಸಲು ನವೆಂಬರ್ 16, ಕೊನೆಯ ದಿನವಾಗಿದೆ.

ಬೆಂಗಳೂರು (ನ.5): ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಡ್ ಆಪರೇಷನ್ಸ್ ಹುದ್ದೆ ಖಾಲಿ ಇದ್ದು, ಅರ್ಜಿ ಸಲ್ಲಿಸಲು ನವೆಂಬರ್ 16, ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಸ್ನಾತಕೋತ್ತರ ಪದವಿ, ಎಂಬಿಎ ಮತ್ತು ಪಿಎಚ್.ಡಿ ವಿದ್ಯಾರ್ಹತೆ ಪಡೆದಿರಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ office.best@iisc.ac.in ಗೆ ಕಳುಹಿಸಬೇಕು.

ಧಾರವಾಡ: ದೈಹಿಕ ಶಿಕ್ಷಣ  ಹುದ್ದೆಗೆ ನೇಮಕಾತಿ 
ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ (ದೈಹಿಕ ಶಿಕ್ಷಣ) ಹುದ್ದೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿವಿ ನಿಗದಿಪಡಿಸಿದ ಬೋಧನಾ ಅನುಭವ ಹೊಂದಿರಬೇಕು. ಆಸಕ್ತರು ಮೂಲ ದಾಖಲೆಗಳೊಂದಿಗೆ ನ. 12ರಂದು ಸಮುದಾಯ ವಿಜ್ಞಾನ ವಿಭಾಗದ ವಿದ್ಯಾಧಿಕಾರಿಗಳನ್ನು ಬೆಳಗ್ಗೆ 10ಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು. ಮಾಹಿತಿಗೆ 0836-2443714 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗದಗ: ತರಬೇತಿಗಾಗಿ ಅರ್ಜಿ ಆಹ್ವಾನ
2022-23ನೇ ಸಾಲಿನಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ವಿದ್ಯಾವಂತ ನಿರುದ್ಯೋಗ ಯುವಕ- ಯುವತಿಯರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ವಿವಿಧ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ನ.30 ಕೊನೆಯ ದಿನವಾಗಿದ್ದು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್‌ https://sevasindhu.karnataka.gov.in/Sevasindhu/Kannada?ReturnUrl=%2F ನ ಗ್ರಾಮ ಒನ್‌, ಕರ್ನಾಟಕ ಒನ್‌ ಮತ್ತು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಆನ್‌ಲೈನ್‌ ಮುಖಾಂತರ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ಆಡಳಿತ ಭವನ, ನೆಲ ಮಹಡಿ, ರೂ. ನಂ.004 ಗದಗ ದೂರವಾಣಿ ಸಂಖ್ಯೆ 08372-239557 ಸಂಪರ್ಕಿಸಬಹುದಾಗಿದೆ ಎಂದು ಪ್ರಕ​ಟಣೆ ತಿಳಿ​ಸಿ​ದೆ.

ಚಾಮರಾಜನಗರ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ
ಕೊಳ್ಳೇಗಾಲದ ಕುಂತೂರು ಗ್ರಾ.ಪಂ.ಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಗೌರವಧನದ ಆಧಾರದ ಮೇಲೆ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಸ್ಥಳೀಯರಾಗಿದ್ದು, ಸಂಬಂಧಪಟ್ಟಗ್ರಾ.ಪಂ.ಗೆ ಸೇರಿದವರಾಗಿರಬೇಕು ಹಾಗೂ ಅದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. 18 ರಿಂದ 45 ವರ್ಷದವರಾಗಿದ್ದು, ಆರೋಗ್ಯವಂತರಾಗಿರಬೇಕು. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಅಂಧರಿಗೆ, ಭಾಗಶಃ ಶ್ರವಣದೋಷವುಳ್ಳವರಿಗೆ (ಮೈಲ್ಡ್‌ ಮತ್ತು ಮಾಡರೇಟ್‌) ಮತ್ತು ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು.

INDIA POST OFFICE RECRUITMENT: ಬರೋಬ್ಬರಿ 98083 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಮೂರು ರೀತಿಯ ಅಂಗವಿಕಲರಿಗೆ ಸಮನಾಗಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುವುದು. ಒಂದು ವರ್ಗದ ಅಂಗವಿಕಲರು ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲತೆ ಶೇ.40ಕ್ಕಿಂತ ಹೆಚ್ಚು ಹಾಗೂ 75 ಕ್ಕಿಂತ ಕಡಿಮೆ ಇರಬೇಕು. ಅಂಗವಿಕಲತೆಯ ಬಗ್ಗೆ ವಿಶಿಷ್ಟವಿಕಲಚೇತನರ ಗುರುತಿನ ಚೀಟಿ ಯುಡಿಐಡಿ ದಾಖಲೆ ಹೊಂದಿರಬೇಕು. ಗ್ರಾ.ಪಂ.ಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಕಂಪ್ಯೂಟರ್‌ ಶಿಕ್ಷಣ ಹೊಂದಿದವರಾಗಿರಬೇಕು.

ಪಿಡಬ್ಲ್ಯೂಡಿ ಹುದ್ದೆಗೂ ಕೆಎಎಸ್‌ ನೇಮಕಾತಿ ಪದ್ಧತಿ ಪಾಲಿಸಲು ಒತ್ತಾಯ

ಪಂಚಾಯಿತಿ ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ನ. 11 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾ.ಪಂ. ಕಾರ್ಯಾಲಯದ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು (ಎಂ.ಆರ್‌.ಡಬ್ಲ್ಯೂ) ಸಂಪರ್ಕಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

PREV
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್