ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆ ದಿನವಾಗಿದೆ.
ಬೆಂಗಳೂರು(ಫೆ.19): ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (Engineers India Ltd), ದೆಹಲಿ. ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕ್ರಿಯೆಯನ್ನು ಆರಂಭಿಸಿದೆ. ಮ್ಯಾನೇಜ್‌ಮೆಂಟ್ ಟ್ರೈನೀ (Management Trainee) ವಿಭಾಗದ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 75 ಹುದ್ದೆಗಳು ಖಾಲಿ ಇದ್ದು ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://engineersindia.com/careers/ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 75 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗೇಟ್ ಪರೀಕ್ಷೆ 2022 ಪಾಸಾಗಿರಬೇಕು. ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗಳ ವಿವರ ಇಂತಿದೆ.
undefined
ಕೆಮಿಕಲ್ ವಿಭಾಗಕ್ಕೆ : 6 ಹುದ್ದೆಗಳು
ಮೆಕ್ಯಾನಿಕಲ್ ವಿಭಾಗಕ್ಕೆ 35 ಹುದ್ದೆಗಳು
ಸಿವಿಲ್ ವಿಭಾಗಕ್ಕೆ : 12 ಹುದ್ದೆಗಳು
ಎಲೆಕ್ಟ್ರಿಕಲ್ ವಿಭಾಗಕ್ಕೆ : 13 ಹುದ್ದೆಗಳು
ಇನ್ಸ್ಟ್ರೂಮೆಂಟೇಶನ್ ವಿಭಾಗಕ್ಕೆ : 9 ಹುದ್ದೆಗಳು
BECIL Recruitment 2022: Bsc ಪದವೀಧರರಿಗೆ ಭರ್ಜರಿ ಉದ್ಯೋಗವಕಾಶ ಅವಕಾಶ
ಶೈಕ್ಷಣಿಕ ವಿದ್ಯಾರ್ಹತೆ: ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರ ಬಿಇ,ಬಿ.ಟೆಕ್,ಬಿಎಸ್‌ಸಿ (ಇಂಜಿನಿಯರಿಂಗ್ -ಮೆಕ್ಯಾನಿಕಲ್,ಸಿವಿಲ್,ಎಲೆಕ್ಟ್ರಿಕಲ್,ಕೆಮಿಕಲ್,ಇನ್ಸ್ಟ್ರೂಮೆಂಟೇಶನ್) ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ: ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ವರ್ಗಾನುಸಾರ ವಯೋಮಿತಿ ನಿಗದಿಯಾಗಿದೆ.
ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಹೆಚ್ಚಿರಬಾರದು. OBC ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ, SC/ST ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ, PWD ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಗಳ ವಯೋಮಿತಿ ಸಡಿಲಿಕೆ ಇದೆ.
ವೇತನ ವಿವರ: ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗನುಸಾರ ವೇತನ ದೊರೆಯಲಿದೆ.
COAL INDIA LIMITED RECRUITMENT 2022: ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸೇರಲು ಭರ್ಜರಿ ಅವಕಾಶ: ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ಮಧ್ಯ ರೈಲ್ವೆ (South East Central Railway -SECR ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಸಿ ಹುದ್ದೆಗಳಿಗೆ ಕ್ರೀಡಾ ಕೋಟದ (Sports Quota) ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 5, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://secr.indianrailways.gov.in/ ಗೆ ಭೇಟಿ ನೀಡಬಹುದು.
ಅರ್ಹತೆಗಳು: ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕ್ರಾಸ್ ಕಂಟ್ರಿ, ಹ್ಯಾಂಡ್‌ಬಾಲ್, ಹಾಕಿ, ಖೋ-ಖೋ ಮತ್ತು ಟೇಬಲ್ ಟೆನ್ನಿಸ್‌ನಂತಹ ಕ್ರೀಡೆ/ಆಟಗಳಲ್ಲಿ ಭಾಗವಹಿಸಿದ್ದ ಎಲ್ಲಾ ಆಸಕ್ತ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಲೆವೆಲ್ 2, 3, 4 ಮತ್ತು 5 ವಿಭಾಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ಮತ್ತು SC/ST, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 150 ರೂ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.