Coal India Limited Recruitment 2022: ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Feb 19, 2022, 5:21 PM IST

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ   ಚೀಪ್​ ಮ್ಯಾನೇಜರ್ ಮತ್ತು ಜನರಲ್​ ಮ್ಯಾನೇಜರ್ ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಿದ್ದು, ಮಾರ್ಚ್​ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಫೆ.19): ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನ (Coal India Limited)ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮುಖ್ಯ ವ್ಯವಸ್ಥಾಪಕ (Chief Manager) , ಪ್ರಧಾನ ವ್ಯವಸ್ಥಾಪಕ  ​​ (General Manager) ಸೇರಿ ಒಟ್ಟು 14 ಹುದ್ದೆಗಳು ಖಾಲಿ ಇದ್ದು, ಆನ್ಲೈನ್​ ಮೂಲಕ ಅರ್ಜಿ ಸಲ್ಲಿಸಲು  ಮಾರ್ಚ್​ 1, 2022 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ https://www.coalindia.in/ ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 14 ಹುದ್ದೆಗಳ ವಿವರ
 ಚೀಪ್​ ಮ್ಯಾನೇಜರ್ : 10 ಹುದ್ದೆಗಳು
ಜನರಲ್​ ಮ್ಯಾನೇಜರ್: 4 ಹುದ್ದೆಗಳು

Tap to resize

Latest Videos

undefined

ಸರ್ಕಾರಿ / ಅರೆ ಸರ್ಕಾರಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಅಥವಾ ಸಾರ್ವಜನಿಕ ವಲಯದ ಉದ್ಯಮ / ಸ್ವಾಯತ್ತ ಸಂಸ್ಥೆಯ  ಪತ್ರದೊಂದಿಗೆ  ಪ್ರಸ್ತುತ ಉದ್ಯೋಗದಾತರು ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ   ಚೀಪ್​ ಮ್ಯಾನೇಜರ್ ಮತ್ತು ಜನರಲ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.

ಹುದ್ದೆಯ ಅನುಭವ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ   ಚೀಪ್​ ಮ್ಯಾನೇಜರ್ ಮತ್ತು ಜನರಲ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ಕಾರ್ಯಾನುಭವ ಹೊಂದಿರಬೇಕು,

ಮುಖ್ಯ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಸಶಸ್ತ್ರ ಪಡೆಗಳು, ಕೇಂದ್ರೀಯ ಪೋಲಿಸ್ ಇಲಾಖೆಯಲ್ಲಿ 19 ವರ್ಷಗಳ ಕಾರ್ಯಾನುಭವ ಇರಬೇಕು. ಅಥವಾ ಕೈಗಾರಿಕಾ ಭದ್ರತೆಯನ್ನು ನಿರ್ವಹಿಸುವಲ್ಲಿ ಕನಿಷ್ಠ 22 ವರ್ಷಗಳ ಅನುಭವ ಹೊಂದಿರಬೇಕು.

ಜನರಲ್​ ಮ್ಯಾನೇಜರ್ ಹುದ್ದೆಗೆ  ಅರ್ಜಿ ಸಲ್ಲಿಸಲು ಇಚ್ಚಿಸುವವರು ಸಶಸ್ತ್ರ ಪಡೆಗಳು, ಕೇಂದ್ರೀಯ ಪೋಲಿಸ್ ಇಲಾಖೆಯಲ್ಲಿ 22  ವರ್ಷಗಳ ಕಾರ್ಯಾನುಭವ ಇರಬೇಕು. ಅಥವಾ ಕೈಗಾರಿಕಾ ಭದ್ರತೆಯನ್ನು ನಿರ್ವಹಿಸುವಲ್ಲಿ ಕನಿಷ್ಠ 25ವರ್ಷಗಳ ಅನುಭವ ಹೊಂದಿರಬೇಕು.

South East Central Railway Recruitment 2022: ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸೇರಲು ಭರ್ಜರಿ ಅವಕಾಶ

ಆಯ್ಕೆ ಪ್ರಕ್ರಿಯೆ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ   ಚೀಪ್​ ಮ್ಯಾನೇಜರ್ ಮತ್ತು ಜನರಲ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಶಾರ್ಟ್​ ಲಿಸ್ಟ್​, ಸಂದರ್ಶನ  ಮತ್ತು ಅರ್ಹತೆಯ ಮೇಲೆ ಆಯ್ಕೆ ಮಾಡಲಾಗುವುದು. 

ವಯೋಮತಿ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ   ಚೀಪ್​ ಮ್ಯಾನೇಜರ್ ಮತ್ತು ಜನರಲ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಹುದ್ದೆಗೆ ಅನುಸಾರವಾಗಿ ಗರಿಷ್ಠ 62 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಸುವ ವಿಧಾನ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ   ಚೀಪ್​ ಮ್ಯಾನೇಜರ್ ಮತ್ತು ಜನರಲ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಈ ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
Dy. General Manager (Personnel/Rectt.)
Coal India Limited, “Coal Bhawan”,
 Premise No-04, MAR Plot No.AF-III, Action Area-1A,
 New Town, Rajarhat, Kolkata-700156

click me!