ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು ಬೆಂಗಳೂರು ಖಾಲಿ ಇರುವ 77 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಎಪ್ರಿಲ್ 4 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಬೆಂಗಳೂರು(31): ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು ( National Aerospace Laboratories) ಬೆಂಗಳೂರು ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 77 ಟ್ರೇಡ್ ಅಪ್ರೆಂಟಿಸ್ (Trade Apprentice) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಪ್ರಿಲ್ 4 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಆಸಕ್ತರು https://www.apprenticeshipindia.gov.in/ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಮುಖ್ಯವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ http://www.nal.res.in/ ಗೆ ಭೇಟಿ ನೀಡಬಹುದು.
ಒಟ್ಟು 77 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಮಾಹಿತಿ
ಫಿಟ್ಟರ್: 12 ಹುದ್ದೆಗಳು
ಟರ್ನರ್: 15 ಹುದ್ದೆಗಳು
ಎಲೆಕ್ಟ್ರಿಷಿಯನ್: 18 ಹುದ್ದೆಗಳು
ಯಂತ್ರಶಾಸ್ತ್ರಜ್ಞ (Machinist): 26 ಹುದ್ದೆಗಳು
ಮೆಕ್ಯಾನಿಕ್ (ಮೋಟಾರು ವಾಹನ) : 3 ಹುದ್ದೆಗಳು
ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) : 3 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಸಾರವಾಗಿ 10ನೇ ತರಗತಿ , ಐಟಿಐ ಪೂರ್ಣಗೊಳಿಸಿರಬೇಕು.
Zomato Instant ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್
ವಯೋಮಿತಿ: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 16 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿರಬೇಕು.
ಅರ್ಜಿ ಶುಲ್ಕ: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸಲಾಗಿಲ್ಲ.
ಆಯ್ಕೆ ಪ್ರಕ್ರಿಯೆ: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 8050ರೂ ಸ್ಟೈಫಂಡ್ ನೀಡಲಾಗುತ್ತದೆ.
Work From Home ಭಾರತಕ್ಕೆ ಸೂಕ್ತವಲ್ಲ ಎಂದ ಇನ್ಫಿ ನಾರಾಯಣಮೂರ್ತಿ
ಬೆಂಗಳೂರಿನಲ್ಲಿ ಮಾರ್ಚ್ 27ರಂದು ಉದ್ಯೋಗ ಮೇಳ:
ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ (Deen Dayal Upadhyaya Grameen Kaushalya Yojana - DDU-GKY) 18ರಿಂದ 25 ವರ್ಷದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ದಿನಾಂಕ ಮಾರ್ಚ್ 27ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ (Rajarajeswari College of Engineering) ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ,ಬೆಂಗಳೂರು ದಕ್ಷಿಣ ತಾಲೂಕು ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ (Job fair) ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಕನಿಷ್ಠ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಹೊಂದಿರಬೇಕು.
ಪಿಯುಸಿ, ಐಟಿಐ, ಡಿಪ್ಲೋಮ, ಬಿಕಾಂ, ಬಿಬಿಎ, ಬಿಎ, ಬಿಸಿಎ, ಬಿಇ, ಎಂಕಾಂ, ಎಂಬಿಎ, ಎಂಎ, ಎಂಸಿಎ ಪದವಿಗಳನ್ನು ಹೊಂದಿದ ಉದ್ಯೋಗಕಾಂಕ್ಷಿಗಳಿಗೆ ಒಂಭತ್ತು ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳಾದ ಮುತ್ತೂಟ್ ಗ್ರೂಪ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್,ಯುರೇಕಾ ಫೋರ್ಬ್ಸ್, ಟೀಮ್ ಲೀಸ್, ಯು ಟಿ ಎಲ್ ಟೆಕ್ನಾಲಜಿ ಲಿಮಿಟೆಡ್, ಜಸ್ಟ್ ಡಯಲ್, ಇಂಪ್ಯಾಕ್ಟ್, ರಿಲೆಯನ್ಸ್ ಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶ ಇದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ: 9964907444 / 7975014738 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಗಪ್ಪರವರು ತಿಳಿಸಿದ್ದಾರೆ.