NIMHANS Recruitment 2022: ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ನಿಮ್ಹಾನ್ಸ್ ಅರ್ಜಿ ಆಹ್ವಾನ

Published : Mar 18, 2022, 09:02 PM IST
NIMHANS Recruitment 2022: ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ನಿಮ್ಹಾನ್ಸ್ ಅರ್ಜಿ ಆಹ್ವಾನ

ಸಾರಾಂಶ

ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಮಾರ್ಚ್ 28 ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಬೆಂಗಳೂರು(ಮಾ.18): ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ  ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 1 ಪ್ರಾಜೆಕ್ಟ್ ವಿಜ್ಞಾನಿ (Project Scientist) ಹುದ್ದೆ ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಮಾರ್ಚ್ 28 ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನಿಮ್ಹಾನ್ಸ್ ನ ಅಧಿಕೃತ ವೆಬ್‌ತಾಣ nimhans.ac.in ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪೂರ್ಣಗೊಳಿಸಿರಬೇಕು.

ಕೆಲಸದ ಅನುಭವ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  PhD ಬಳಿಕ  ಹ್ಯೂಮನ್ ಜೆನೆಟಿಕ್ಸ್‌ನಲ್ಲಿ ಕನಿಷ್ಠ 2 ವರ್ಷಗಳ ಸಂಶೋಧನಾ ಅನುಭವ ಹೊಂದಿರಬೇಕು.  ಅಥವಾ ಸ್ನಾತಕೋತ್ತರ ಪದವಿ ಬಳಿಕ ಹ್ಯೂಮನ್ ಜೆನೆಟಿಕ್ಸ್‌ನಲ್ಲಿ ಕನಿಷ್ಠ 4 ರಿಂದ 5 ವರ್ಷಗಳ ಸಂಶೋಧನಾ ಅನುಭವ ಪಡೆದಿರಬೇಕು.

Bengaluru Udyoga Mela 2022: ಬೆಂಗಳೂರಿನಲ್ಲಿ ಮಾರ್ಚ್ 27ರಂದು ಉದ್ಯೋಗ ಮೇಳ

ವಯೋಮತಿ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳಾಗಿರಬೇಕು. ವರ್ಗಾನುಸಾರ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ  ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ. 

ಆಯ್ಕೆ ಪ್ರಕ್ರಿಯೆ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹69,440 ವೇತನ ದೊರೆಯಲಿದೆ.

HAL Recruitment 2022: ವೈದ್ಯಕೀಯ ಅಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ HAL ನೇಮಕಾತಿ 

ವೈದ್ಯಕೀಯ ಅಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ HAL ನೇಮಕಾತಿ: ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited-HAL) ಕಂಪನಿಯು ಖಾಲಿ ಇರುವ  ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ವೈದ್ಯಕೀಯ ಅಧಿಕಾರಿ, ವೈದ್ಯಕೀಯ ಸೂಪರಿಂಟೆಂಡೆಂಟ್  ಸೇರಿ ಒಟ್ಟು 15 ಹುದ್ದೆಗಳು ಖಾಲಿ ಇದೆ.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಪ್‌ಲೈನ್ ಮೂಲಕ ಎಪ್ರಿಲ್ 10ರೊಳಗೆ  ಅರ್ಜಿ ಸಲ್ಲಿಸಬೇಕು. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://hal-india.co.in/  ಭೇಟಿ ನೀಡಬಹುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ
Chief Manager (HR)
Recruitment Cell
Koraput Division
Hindustan Aeronautics Limited
Koraput Division
Sunabeda – 763002, 
Dist: Koraput, Odisha
ಸಂದೇಹಗಳಿದ್ದರೆ 06853-220929
ಈ ಮೇಲ್ recruitment.koraput@hal-india.com

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್