CPCL Recruitment 2022 ಚೆನ್ನೈನ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ

By Suvarna News  |  First Published Apr 2, 2022, 4:19 PM IST

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಎಪ್ರಿಲ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಎ.2): ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್  (Chennai Petroleum Corporation Limited-CPCL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 72 ಜೂನಿಯರ್ ಎಂಜಿನಿಯರಿಂಗ್ ಸಹಾಯಕ, ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್  ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಪ್ರಿಲ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ cpcl.co.in ಗೆ ಭೇಟಿ ನೀಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿ ಅಥವಾ ಪ್ರಶ್ನೆಗಳಿದ್ದರೆ chennaipetroleumcorpltd@gmail.com ಗೆ ಇಮೇಲ್  ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟು 72 ಹುದ್ದೆಗಳ ಮಾಹಿತಿ ಇಂತಿದೆ
ಕಿರಿಯ ಎಂಜಿನಿಯರಿಂಗ್ ಸಹಾಯಕ (ಉತ್ಪಾದನೆ): 17 ಹುದ್ದೆಗಳು
ಕಿರಿಯ  ಎಂಜಿನಿಯರಿಂಗ್ ಸಹಾಯಕ  (ಉತ್ಪಾದನೆ) ಟ್ರೈನಿ: 16 ಹುದ್ದೆಗಳು
ಕಿರಿಯ ಎಂಜಿನಿಯರಿಂಗ್ ಸಹಾಯಕ  (ಮೆಕ್ಯಾನಿಕಲ್): 4 ಹುದ್ದೆಗಳು
ಕಿರಿಯ  ಎಂಜಿನಿಯರಿಂಗ್ ಸಹಾಯಕ (ಮೆಕ್ಯಾನಿಕಲ್) ಟ್ರೈನಿ: 5 ಹುದ್ದೆಗಳು
ಕಿರಿಯ ಎಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಿಕಲ್): 4 ಹುದ್ದೆಗಳು
ಕಿರಿಯ  ಎಂಜಿನಿಯರಿಂಗ್ ಸಹಾಯಕ  (ಎಲೆಕ್ಟ್ರಿಕಲ್) ಟ್ರೈನಿ: 4 ಹುದ್ದೆಗಳು
ಕಿರಿಯ ಎಂಜಿನಿಯರಿಂಗ್ ಸಹಾಯಕ (ಇನ್‌ಸ್ಟ್ರುಮೆಂಟೇಶನ್): 3 ಹುದ್ದೆಗಳು
ಕಿರಿಯ  ಎಂಜಿನಿಯರಿಂಗ್ ಸಹಾಯಕ  (ಇನ್‌ಸ್ಟ್ರುಮೆಂಟೇಶನ್) ಟ್ರೈನಿ: 2 ಹುದ್ದೆಗಳು
ಕಿರಿಯ ಎಂಜಿನಿಯರಿಂಗ್ ಸಹಾಯಕ(P&U- ಮೆಕ್ಯಾನಿಕಲ್) ಟ್ರೈನಿ: 2 ಹುದ್ದೆಗಳು
ಕಿರಿಯ ಎಂಜಿನಿಯರಿಂಗ್ ಸಹಾಯಕ(P&U- ಎಲೆಕ್ಟ್ರಿಕಲ್) ಟ್ರೈನಿ: 1 ಹುದ್ದೆ 
ಕಿರಿಯ ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ನಿಶಾಮಕ ಮತ್ತು ಸುರಕ್ಷತೆ) : 8 ಹುದ್ದೆಗಳು
ಕಿರಿಯ ಟೆಕ್ನಿಕಲ್ ಅಸಿಸ್ಟೆಂಟ್(ಫೈರ್ & ಸೇಫ್ಟಿ) ಟ್ರೈನಿ: 6 ಹುದ್ದೆಗಳು

Tap to resize

Latest Videos

ಸಾಲು ಸಾಲು ರಜೆ, ಶಾಲೆಗಳಲ್ಲಿ COVID ಲಸಿಕೆ ಅಭಿಯಾನಕ್ಕೆ ಹಿನ್ನಡೆ

ಶೈಕ್ಷಣಿಕ ವಿದ್ಯಾರ್ಹತೆ: ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಪದವಿ  ಪಡೆದಿರಬೇಕು.

ಕಿರಿಯ ಎಂಜಿನಿಯರಿಂಗ್ ಸಹಾಯಕ (ಉತ್ಪಾದನೆ) ಹುದ್ದೆಗೆ ಕೆಮಿಕಲ್/ಪೆಟ್ರೋಲಿಯಂ/ಪೆಟ್ರೋಕೆಮಿಕಲ್ ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಡಿಪ್ಲೊಮಾ, ಕೆಮಿಸ್ಟ್ರಿಯಲ್ಲಿ ಬಿಎಸ್ಸಿ ಮಾಡಿರಬೇಕು.
ಕಿರಿಯ ಎಂಜಿನಿಯರಿಂಗ್ ಸಹಾಯಕ  (ಮೆಕ್ಯಾನಿಕಲ್) ಹುದ್ದೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.
ಕಿರಿಯ ಎಂಜಿನಿಯರಿಂಗ್ ಸಹಾಯಕ (ಎಲೆಕ್ಟ್ರಿಕಲ್) ಹುದ್ದೆಗೆ ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.
ಕಿರಿಯ  ಎಂಜಿನಿಯರಿಂಗ್ ಸಹಾಯಕ  (ಇನ್‌ಸ್ಟ್ರುಮೆಂಟೇಶನ್) ಹುದ್ದೆಗೆ ಡಿಪ್ಲೊಮಾ ಇನ್ ಇನ್‌ಸ್ಟ್ರುಮೆಂಟೇಶನ್/ ಇನ್‌ಸ್ಟ್ರುಮೆಂಟೇಶನ್ & ಎಲೆಕ್ಟ್ರಾನಿಕ್ಸ್/ ಇನ್‌ಸ್ಟ್ರುಮೆಂಟೇಶನ್ & ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್
ಕಿರಿಯ ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ನಿಶಾಮಕ ಮತ್ತು ಸುರಕ್ಷತೆ) ಹುದ್ದೆಗೆ 10ನೇ ತರಗತಿ ಮತ್ತು  ITI ಮಾಡಿರಬೇಕು.

SC/ST ನೌಕರರ ಬಡ್ತಿ ಮೀಸಲಾತಿ ರದ್ದು ಮಾಡಿದ್ರೆ ಅಶಾಂತಿಗೆ ಕಾರಣ: ಸುಪ್ರೀಂಗೆ ಕೇಂದ್ರ

ವಯೋಮತಿ: ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಟ್ರೈನಿ ಹುದ್ದೆಗಳಿಗೆ ಗರಿಷ್ಠ 26 ವರ್ಷ ಮತ್ತು ಮಿಕ್ಕ ಹುದ್ದೆಗಳಿಗೆ ಗರಿಷ್ಠ 30 ವರ್ಷ ಆಗಿರಬೇಕು. OBC, SC/ST ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳು  ₹1000 ಅರ್ಜಿ ಶುಲ್ಕ ಪಾವತಿಸಬೇಕು. SC/ST/PwBD/ExSM/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ  ಪರೀಕ್ಷೆ, ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹25000 ದಿಂದ ₹105000 ವೇತನ ದೊರೆಯಲಿದೆ. ಚೆನ್ನೈನಲ್ಲಿ ಉದ್ಯೋಗ ದೊರೆಯಲಿದೆ.

click me!