ಆರೋಗ್ಯ ಸೇವೆ ನಿರ್ದೇಶನಾಲಯದಲ್ಲಿ 487 ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

By Kannadaprabha News  |  First Published Nov 22, 2023, 9:06 AM IST

ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ (ಡಿಜಿಎಚ್‌ಎಸ್)‌ ನಲ್ಲಿ 487 ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳ ನೇಮಕಾತಿ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ನವೆಂಬರ್‌ 30ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.


ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ ಅಡಿಯಲ್ಲಿ ಭಾರತದಾದ್ಯಂತ ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಖಾಲಿ ಇರುವ 487 ಗ್ರೂಪ್‌ ಬಿ ಮತ್ತು ಸಿ ಸಂಶೋಧನಾ ಸಹಾಯಕ, ತಂತ್ರಜ್ಞ ಮತ್ತು ಇತರೆ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

Tap to resize

Latest Videos

undefined

ಡಿಜಿಎಚ್‌ಎಸ್‌ಯು ಸಂಶೋಧನಾ ಸಹಾಯಕ, ತಂತ್ರಜ್ಞ, ಪ್ರಯೋಗಾಲಯ ಪರಿಚಾರಕ, ಸಂಶೋಧನಾ ಸಹಾಯಕ, ಕೀಟ ಸಂಗ್ರಾಹಕ, ಪ್ರಯೋಗಾಲಯ ತಂತ್ರಜ್ಞ, ಆರೋಗ್ಯ ನಿರೀಕ್ಷಕರು, ಫೀಲ್ಡ್ ವರ್ಕರ್, ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ, ಭೌತ ಚಿಕಿತ್ಸಕ, ವೈದ್ಯಕೀಯ ಸಮಾಜ ಕಲ್ಯಾಣ ಅಧಿಕಾರಿ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ, ಜೂನಿಯರ್ ಮೆಡಿಕಲ್ ಪ್ರಯೋಗಾಲಯ ತಂತ್ರಜ್ಞ, ಲೈಬ್ರರಿ ಕ್ಲರ್ಕ್, ನರ್ಸಿಂಗ್ ಅಧಿಕಾರಿ (ಸಿಬ್ಬಂದಿ ನರ್ಸ್), ಫಿಟ್ಟರ್ ಎಲೆಕ್ಟ್ರಿಷಿಯನ್, ವರ್ಕ್‌ಶಾಪ್ ಅಟೆಂಡೆಂಟ್, ಜೂನಿಯರ್ ಸೈಕಿಯಾಟ್ರಿಕ್ , ಸಮಾಜ ಕಲ್ಯಾಣ ಅಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿಸ್ಟ್, ಮೇಲ್ವಿಚಾರಕರು ಇತರೆ ಒಟ್ಟು 64 ವಿವಿಧ ಹುದ್ದೆಗಳು ಖಾಲಿ ಇವೆ.

ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಹೇಗೆ?

ವಯಸ್ಸಿನ ಮಿತಿ

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 30 ವರ್ಷಗಳು

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 30-11-2023

ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 01-12-2023

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವ ತಾತ್ಕಾಲಿಕ ದಿನಾಂಕ : ಡಿಸೆಂಬರ್ 2023 ರ ಮೊದಲ ವಾರ

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ದಿನಾಂಕ: ಡಿಸೆಂಬರ್ 2023ರ ಎರಡನೇ ವಾರ

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಫಲಿತಾಂಶ ಪ್ರಕಟ ದಿನಾಂಕ : ಡಿಸೆಂಬರ್ 2023ರ ಮೂರನೇ ವಾರ

ಡಾಕ್ಯುಮೆಂಟ್ ಪರಿಶೀಲನೆಗಾಗಿ ತಾತ್ಕಾಲಿಕ ದಿನಾಂಕ : ಡಿಸೆಂಬರ್ 2023ರ ನಾಲ್ಕನೇ ವಾರ

ಬೆಮೆಲ್‌ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, 3 ಲಕ್ಷವರೆಗೂ ವೇತನ!

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ/ ಓಬಿಸಿ/ಇ ಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ರೂ. 600

ಎಸ್‌ ಸಿ/ ಎಸ್‌ ಟಿ/ ಪಿ ಡಬ್ಲ್ಯೂಡಿ/ ಮಹಿಳಾ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ.

ವೇತನ ಶ್ರೇಣಿ

ರೂ. 18,000 ರಿಂದ 1,42,400

(ವೇತನ ಶ್ರೇಣಿಯು ಆಯಾಯ ಹುದ್ದೆಗೆ ತಕ್ಕಂತೆ ನಿಗದಿಯಾಗಿರುತ್ತದೆ. ಹೆಚ್ಚಿನ ಮಾಹಿತಿ ಅಧಿಸೂಚನೆಯಲ್ಲಿ ನೀಡಲಾಗಿದೆ.)

ಶೈಕ್ಷಣಿಕ ಅರ್ಹತೆ

1. ಗ್ರೂಪ್‌ ಬಿ ಹುದ್ದೆಗೆ ಸಂಬಂಧಿಸಿದಂತೆ (ಸಾಮಾನ್ಯ ಅರ್ಹತೆ)

- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಾಣಿಶಾಸ್ತ್ರ/ಸೂಕ್ಷ್ಮ - ಜೀವಶಾಸ್ತ್ರ / ಜೀವ ರಸಾಯನಶಾಸ್ತ್ರ ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಬಯೋಕೆಮಿಸ್ಟ್ರಿ /ಮೈಕ್ರೊಬಯಾಲಜಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ವೈದ್ಯಕೀಯ/ಸಂಶೋಧನಾ ಪ್ರಯೋಗಾಲಯದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಫಿಸಿಯೋಥೆರಪಿಯಲ್ಲಿ ಪದವಿ ಅಥವಾ ಡಿಪ್ಲೊಮಾ / ಬಯೋ ಕೆಮಿಸ್ಟ್ರಿಯಲ್ಲಿ ಎಂ ಎಸ್ಸಿ / ಆಹಾರ ತಂತ್ರಜ್ಞಾನ/ಆಹಾರದೊಂದಿಗೆ ರಸಾಯನಶಾಸ್ತ್ರ ಮತ್ತು ನ್ಯೂಟ್ರಿಷನ್ ನಲ್ಲಿ ಎಂ ಎಸ್ಸಿ / ಪದವಿ ಪಡೆದಿರಬೇಕು.

- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ ಎಸ್ಸಿ ನಲ್ಲಿ ನರ್ಸಿಂಗ್ ಹಾಗೂ ರಾಜ್ಯ ನರ್ಸಿಂಗ್ ಕೌನ್ಸಿಲ್ ನಲ್ಲಿ ದಾದಿಯಾಗಿ ನೋಂದಾಯಿಸಲ್ಪಟ್ಟಿರಬೇಕು. ಮತ್ತು ಐವತ್ತು ಹಾಸಿಗೆಗಳ ಆಸ್ಪತ್ರೆ ಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

2. ಗ್ರೂಪ್‌ ಸಿ ಹುದ್ದೆಗೆ ಸಂಬಂಧಿಸಿದಂತೆ (ಸಾಮಾನ್ಯ ಅರ್ಹತೆ) :

- ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಎಸ್‌ ಎಸ್‌ ಎಲ್‌ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಮತ್ತು ಫಾರ್ಮಸಿ ಕೌನ್ಸಿಲ್ ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಔಷಧ ವಿಭಾಗದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ ಆಗಿಬೇಕು.

- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಹೊಂದಿರಬೇಕು. ಮತ್ತು ಎಸ್‌ ಎ ಎಸ್‌ ಅಥವಾ ಸಿ ಎ ಪರೀಕ್ಷೆ ಉತ್ತೀರ್ಣರಾಗಿಬೇಕು. ಜೊತೆಗೆ ಖಾತೆ(ಅಕೌಂಟ್) ನಿರ್ವಹಣೆಯಲ್ಲಿ ಮೂರು ವರ್ಷಗಳ ಅನುಭವ ಅಥವಾ ಸರ್ಕಾರ/ಅರೆ ಸರ್ಕಾರದಲ್ಲಿ ಕಚೇರಿ/ಸಂಸ್ಥೆ ಮೇಲಾಗಿ ವೈಜ್ಞಾನಿಕ ಸಂಸ್ಥೆಯಲ್ಲಿ ಖಾತೆ(ಅಕೌಂಟ್) ವಿಭಾಗದಲ್ಲಿ 5 ವರ್ಷಗಳ ಅನುಭವ ಹಾಗೂ ಬಜೆಟ್, ಇನ್ವೆಂಟರಿ ನಿಯಂತ್ರಣ ಮತ್ತು ಮಳಿಗೆಗಳು, ಖಾತೆ(ಅಕೌಂಟ್) ನಿರ್ವಹಿಸಲು ಶಕ್ತರಾಗಿರಬೇಕು.

ಪರೀಕ್ಷೆಯ ವಿಧಾನ

1. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಒಂದು ವಸ್ತುನಿಷ್ಠ ( ಆಬ್ಜೆಕ್ಟಿವ್ ಮಲ್ಟಿಪಲ್ ಚಾಯ್ಸ್) ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆ ಪತ್ರಿಕೆಯು 60 ಪ್ರಶ್ನೆಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಲಾಗಿದ್ದು, ಒಂದು ಗಂಟೆ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

2. ಪ್ರಶ್ನೆ ಪತ್ರಿಕೆಯು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರುತ್ತದೆ.

3. ಪ್ರತಿ ತಪ್ಪು ಉತ್ತರಕ್ಕೆ 1 ಋಣಾತ್ಮಕ ಅಂಕವನ್ನು ಕಡಿತಗೊಳಿಸಲಾಗುತ್ತದೆ.

4. ಪರೀಕ್ಷೆಯ ದಿನಾಂಕ ಮತ್ತು ಪ್ರವೇಶ ಪತ್ರಗಳ ಬಗ್ಗೆ ಅಭ್ಯರ್ಥಿಗಳಿಗೆ ಸಂಸ್ಥೆಯ ವೆಬ್‌ಸೈಟ್ ಮೂಲಕ ತಿಳಿಸಲಾಗುತ್ತದೆ

5. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮರು-ಮೌಲ್ಯಮಾಪನ/ ಮರು ಪರಿಶೀಲನೆಗೆ ಯಾವುದೇ ಅವಕಾಶವಿರುವುದಿಲ್ಲ.

ಪರೀಕ್ಷಾ ಕೇಂದ್ರಗಳು

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೇಂದ್ರವು ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈ, ಲಕ್ನೋ, ರಾಂಚಿ, ಚಂಡೀಗಢ, ಗುವಾಹಟಿ ಮತ್ತು ಕೋಲ್ಕತ್ತಾನಲ್ಲಿ ನಡೆಯಲಿದೆ.

ಸೂಚನೆ: ಹೆಚ್ಚಿನ ವಿದ್ಯಾರ್ಹತೆ ಹಾಗೂ ಇನ್ನಿತರ ವಿವರಗಳಿಗಾಗಿ ಸಂಬಂಧಪಟ್ಟ ವೆಬ್‌ಸೈಟ್‌ ವೀಕ್ಷಿಸಿರಿ.

click me!