ಗಡಿ ಭದ್ರತಾ ಪಡೆ ಯಲ್ಲಿ ಖಾಲಿ ಇರುವ 1,312 ಹೆಡ್‌ಕಾನ್‌ಸ್ಟೇಬಲ್ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಯಲಿದ್ದು, ಅಧಿಸೂಚನೆ ಬಿಡುಗಡೆಯಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 09 ಆಗಿದೆ.
ನವದೆಹಲಿ (ಆ.11): ಗಡಿ ಭದ್ರತಾ ಪಡೆಯು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಇದೀಗ 1,312 ಹೆಡ್‌ಕಾನ್‌ಸ್ಟೇಬಲ್ಸ್ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ನೇಮಕಾತಿಯು ವಿವಿಧ ವಿಭಾಗಗಳಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಬೇಕಾದ ದಾಖಲೆಗಳು, ವಯೋಮಿತಿ ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ. ಗಡಿ ಭದ್ರತಾ ಪಡೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಒಟ್ಟು 1,312 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಪೈಕಿ ಹೆಡ್‌ಕಾನ್‌ಸ್ಟೇಬಲ್ (ರೇಡಿಯೊ ಆಪರೇಟರ್) ಹುದ್ದೆಗಳು 982, ಹೆಡ್‌ಕಾನ್‌ಸ್ಟೇಬಲ್ (ರೇಡಿಯೊ ಮೆಕ್ಯಾನಿಕ್) ಹುದ್ದೆಗಳು 330 ಲಭ್ಯ ಇದೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ ಹಾಗೂ ಐಟಿಐ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಯು ಸೆಪ್ಟೆಂಬರ್ 9ರ ವೇಳೆಗೆ ಕನಿಷ್ಠ 18 ವರ್ಷ ತುಂಬಿರಬೇಕಿದ್ದು, ಗರಿಷ್ಠ 25 ವರ್ಷವಷ್ಟೇ ಆಗಿರಬೇಕು. ಸರ್ಕಾರಿ ನಿಯಮಾನುಸಾರ ವರ್ಗಾವಾರು ವಯೋ ಸಡಿಲಿಕೆ ಅನ್ವಯವಾಗಲಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಪಡೆಯಬಹುದಾಗಿದೆ.ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮಥರ್ಯ ಹಾಗೂ ಕ್ಷಮತೆ ಪರೀಕ್ಷೆ, ಸಂದರ್ಶನ ಮೂಲಕ ನಡೆಯಲಿದೆ.
ವೇತನ, ಬೇಕಾದ ದಾಖಲೆಗಳು: ಗಡಿ ಭದ್ರತಾ ಪಡೆಗೆ ಹೆಡ್‌ಕಾನ್‌ಸ್ಟೇಬಲ್ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಪ್ಯಾಕೇಜ್‌ನ್ನು ನೇಮಕಾತಿ ಮಂಡಳಿ ಘೋಷಿಸಿದೆ. ಇದರ ಅನ್ವಯ ಹುದ್ದೆಗಳಿಗೆ ಅನುಗುಣವಾಗಿ ಪ್ರಾರಂಭಿಕವಾಗಿ 25,500 ರು.ಇಂದ 81,100 ರು.ವರೆಗೆ ಮಾಸಿಕವಾಗಿ ವೇತನ ಪಾವತಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಗತ್ಯವಾಗಿ ಹಲವು ದಾಖಲೆಗಳನ್ನು ಸಿದ್ಧವಿರಿಸಿಕೊಳ್ಳಬೇಕಿದೆ. ಆಧಾರ್‌ಕಾರ್ಡ್, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಾಗಿದ್ದಲ್ಲಿ ನಿರ್ದಿಷ್ಠ ಪದವಿಯ ಅಂಕಪಟ್ಟಿಗಳು, ಮೀಸಲಾತಿ ಪ್ರಮಾಣ ಪತ್ರಗಳು, ಇತ್ಯಾದಿ ಪ್ರಮುಖ ದಾಖಲೆಗಳಿದ್ದಲ್ಲಿ ಅವುಗಳೆಲದ್ದರ ನಕಲು ಪ್ರತಿಗಳನ್ನು ಸಲ್ಲಿಸಬೇಕೆಂದು ಗಡಿ ಭದ್ರತಾ ಪಡೆ ತಿಳಿಸಿದೆ.
PNB Recruitment 2022; ಖಾಲಿ ಇರುವ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗೆ ನೇಮಕಾತಿ
ಅರ್ಜಿ ಶುಲ್ಕ, ಆಯ್ಕೆ ವಿವರ: ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಎಲ್ಲಾ ವರ್ಗದ ಅಭ್ಯರ್ಥಿಗಳನ್ನು ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮೊದಲು ಬಿಎಸ್‌ಎಫ್‌ಗೆ ಸಂಬಂಧಿಸಿದ ನಿರ್ದಿಷ್ಠ ವೆಬ್‌ಸೈಟ್‌ನ ತೆರೆಯಬೇಕಿದ್ದು, ಅಲ್ಲಿ ರಿಜಿಸ್ಪ್ರೇಷನ್ ಮಾಡಿಕೊಳ್ಳಬೇಕಿದೆ. ಬಳಿಕ ದೊರೆಯುವ ಆನ್‌ಲೈನ್ ನಮೂನೆಯ ಅರ್ಜಿಯನ್ನು ಸರಿಯಾದ ಮಾಹಿತಿಗಳಿಂದ ಭರ್ತಿಗೊಳಿಸಿ ದಾಖಲೆಗಳ ಸಹಿತ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಅಧಿಸೂಚನೆಯನ್ನು ತೆರೆಯಬಹದಾಗಿದೆ.
*ಆರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 09ರಂದು ಕೊನೆಯ ದಿನ
*ಆಯ್ಕೆಯಾದವರಿಗೆ ಮಾಸಿಕವಾಗಿ 25,500 ರು. ಇಂದ 81,100 ರು ವೇತನ
* 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ
*ಯಾವುದ ಅರ್ಜಿ ಶುಲ್ಕವಿಲ್ಲ
* ಆರ್ಜಿ ಹಾಗೂ ಅಧಿಸೂಚನೆಗಾಗಿ https://rectt.bsf.gov.in/
ಗದಗ ಜಿ.ಪಂನಲ್ಲಿ ವಿವಿಧ ಉದ್ಯೋಗ: ಗದಗ ಜಿಲ್ಲಾ ಪಂಚಾಯತ್‌ನಲ್ಲಿ ಇ-ಪಂಚಾಯತ್ ಯೋಜನೆಯ ಅಡಿಯಲ್ಲಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಬೇಕಿದ್ದು, ಇದಕ್ಕಾಗಿ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ಹುದ್ದೆಗಳು ಹಾಗೂ ವೇತನ ಶ್ರೇಣಿ, ಬೇಕಾದ ದಾಖಲೆಗಳು ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.
Teachers Recruitment; ಮಾಸಾಂತ್ಯಕ್ಕೆ 15000 ಶಿಕ್ಷಕರ ಪರೀಕ್ಷೆ ರಿಸಲ್ಟ್
ಉದ್ಯೋಗದ ಮಾಹಿತಿ: ಹುದ್ದೆಗಳ ಸಂಖ್ಯೆಯನ್ನು ನಿರ್ದಿಷ್ಠವಾಗಿ ತಿಳಿಸಲಾಗಿಲ್ಲವಾದರೂ ಅಭ್ಯರ್ಥಿಗಳು ಅನಿರ್ದಿಷ್ಠ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಬಿಇ/ಎಂಸಿಎ/ಬಿಸಿಎ ಪದವಿ ಪಡೆದಿರಬೇಕು. ಕನಿಷ್ಠ 21 ವರ್ಷದಿಂದ ಗರಿಷ್ಠ 35 ವರ್ಷದವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ. ಅಭ್ಯರ್ಥಿಯ ಶೈಕ್ಷಣಿಕ ಹಾಗೂ ಅನುಭವ ಅರ್ಹತೆಯನ್ನು ಪರಿಗಣಿಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
* ಆರ್ಜಿ ಸಲ್ಲಿಕೆಗೆ ಆಗಸ್ಟ್ 16ರಂದು ಕೊನೆಯ ದಿನ.
* ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ 08372-235947ಗೆ ಸಂಪರ್ಕಿಸಬೇಕು.
*ಆರ್ಜಿ ಸಮೂನೆಗಾಗಿ https://gadag.nic.in/