BEML Recruitment 2022: ಗ್ರೂಪ್​ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 9 ಕೊನೆಯ ದಿನ

By Suvarna News  |  First Published Feb 6, 2022, 4:41 PM IST

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 25 ಗ್ರೂಪ್​ A ಪೋಸ್ಟ್​​ಗಳು ಖಾಲಿ ಇದ್ದು, ಆಸಕ್ತರು ಫೆಬ್ರವರಿ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


ಬೆಂಗಳೂರು(ಫೆ.6): ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (Bharat Earth Movers Limited - BEML) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 25 ಗ್ರೂಪ್​ A ಪೋಸ್ಟ್​​ಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ  ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ https://www.bemlindia.in/ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 25 ಹುದ್ದೆಯ ಮಾಹಿತಿ:
ಡೆಪ್ಯುಟಿ ಜನರಲ್ ಮ್ಯಾನೇಜರ್-5
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್-6
ಸೀನಿಯರ್ ಮ್ಯಾನೇಜರ್-5
ಮ್ಯಾನೇಜರ್-8
ಅಸಿಸ್ಟೆಂಟ್ ಮ್ಯಾನೇಜರ್-1

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ  ಗ್ರೂಪ್​ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ: ಬೆಮೆಲ್ ನಲ್ಲಿ ಖಾಲಿ ಇರುವ  ಗ್ರೂಪ್​ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ OBC ಅಭ್ಯರ್ಥಿಗಳು (SC/ST/ PWD ಗಳಿಗೆ ಅನ್ವಯಿಸುವುದಿಲ್ಲ) ಅರ್ಜಿ ನಮೂನೆಯ ಕೊನೆಯಲ್ಲಿ “ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ” ಕ್ಲಿಕ್ ಮಾಡುವ ಮೂಲಕ ಮರುಪಾವತಿಸಲಾಗದ ಶುಲ್ಕ ರೂ.500/- ಅನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು BEML ನ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.

HAL Recruitment 2022: 21 ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆಜಿಎಫ್ ಬೆಮೆಲ್‌ ಖಾಸಗೀಕರಣಕ್ಕೆ ಕಾರ್ಮಿಕರ ವಿರೋಧ, ಗೇಟ್ ಮುಚ್ಚಿ ಪ್ರೊಟೆಸ್ಟ್:  ಬೆಮೆಲ್‌ (BEML) ಕಾರ್ಖಾನೆಯನ್ನು ಖಾಸಗೀಕರಣ (Privatisation)  ಮಾಡದಂತೆ ಒತ್ತಾಯಿಸಿ ಕಾರ್ಖಾನೆಯ ಎಲ್ಲ ಗೇಟ್‌ಗಳ ಮುಂಭಾಗ ಕಾರ್ಮಿಕರು ಪ್ರತಿಭಟನೆ (Protest) ನಡೆಸಿ ಕೇಂದ್ರ ಸರ್ಕಾರದ (Union Govt) ವಿರುದ್ಧ ಘೊಷಣೆಗಳನ್ನು ಕೂಗಿದರು.

ಬೆಮೆಲ್‌ ಕಾರ್ಮಿಕರ ಸಂಘದ ಅಧ್ಯಕ್ಷ ಅಂಜೇನೆಯ ರೆಡ್ಡಿ ಮಾತನಾಡಿ, 2021-22 ನೇ ಸಾಲಿನಲ್ಲಿ ಕಾರ್ಖಾನೆ 4500 ಕೋಟಿ ರುಪಾಯಿಗಳ ಟಾರ್ಗೆಟ್‌ ನೀಡಿದ್ದು, ನಾವು 4000 ಕೋಟಿ ರೂಪಾಯಿಗಳ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ಈ ವರ್ಷ 200 ಕೋಟಿ ರೂಪಾಯಿಗಳ ಲಾಭವನ್ನು ಬೆಮೆಲ್‌ ಕಾರ್ಖಾನೆ ಪಡೆಯಲಿದೆ ಎಂದರು.

HAL Recruitment 2022: ಜನರಲ್ ಮ್ಯಾನೇಜರ್ ಸೇರಿ 7 ಹುದ್ದೆಗಳಿಗೆ ಅರ್ಜಿ ಆಹ್ವಾನ

ಲಾಭದಲ್ಲಿರುವ ಕಾರ್ಖಾನೆ ಖಾಸಗೀಕರಣ:  ಇಂತಹ ಲಾಭ ತರುವಂತಹ ಕಾರ್ಖಾನೆಯನ್ನು ಕೇಂದ್ರ ಸರಕಾರ ಖಾಸಗಿಯವರಿಗೆ ಮಾರಟ ಮಾಡಲು ಹೊರಟಿರುವುದು ಸರಿಯಲ್ಲ, ಯಾವುದೇ ಕಾರಣಕ್ಕೆ ಕಾರ್ಖಾನೆಯನ್ನು ಮಾರಾಟ ಮಾಡಲು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಕಾರ್ಮಿಕ ಮುಖಂಡ ಅಂಜೇನೆಯ ರೆಡ್ಡಿ ಹೇಳಿದರು.

ಜನವರಿ 27 ರಂದು ಪೈನಾನ್ಸಿಯಲ್‌ ಬಿಡ್‌ಇತ್ತು, ಆದರೆ ಕಾರಣಾತಂರಗಳಿಂದ ಫೆಬ್ರವರಿ 27 ಕ್ಕೆ ಮುಂದೂಡಲಾಗಿದೆ. ಬಜೆಟ್‌ನಲ್ಲಿ ಪೈನಾನ್ಸಿಯಲ್‌ ಬಿಡ್‌ನ್ನು ಒಂದು ವರ್ಷಕಾಲ ಮುಂದೂಡುವಂತೆ ಕೇಂದ್ರ ಸರ್ಕಾರ ತಿಳಿಸಿದ್ದರೂ ಬೆಮೆಲ್‌ ಆಡಳಿತ ಮಂಡಳಿ ಒಂದು ತಿಂಗಳ ಕಾಲ ಮುಂದೂಡಿದೆ ಎಂದರು.

50 ವರ್ಷದಿಂದ ಲಾಭದಲ್ಲಿ ಕಾರ್ಖಾನೆ: ಸತತ 50 ವರ್ಷಗಳಿಂದ ಬೆಮೆಲ್‌ ಕಾರ್ಖಾನೆ ಲಾಭಗಳಿಸುತ್ತಾ ಬಂದಿದೆ, ಸಾವಿರಾರು ಕುಂಟುಬಗಳು ಬೆಮೆಲ್‌ ಕಾರ್ಖಾನೆಯಿಂದ ಜೀವನ ನಡೆಸಿವೆ ಇಂತಹ ಕಾರ್ಖಾನೆಯನ್ನು ಖಾಸಗಿಕರಣಗೊಳಿಸುವ ಔಚಿತ್ಯವೇನು ಎಂದು ಪ್ರಶ್ನೆ ಮಾಡಿದರು, 500 ಕೋಟಿಯಲ್ಲಿ ಪ್ರಾರಂಭವಾದ ಕಾರ್ಖಾನೆ 7 ಸಾವಿರ ಕಾರ್ಮಿಕರು, 5 ಸಾವಿರ ದಿನಗೂಲಿ ಕಾರ್ಮಿಕರು ಕಾರ್ಖಾನೆಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾರೆ, ಯಾವುದೇ ಕಾರಣಕ್ಕೂ ಬೆಮೆಲ್‌ ಕಾರ್ಖಾನೆಯನ್ನು ಖಾಸಗಿಕರಣಗೊಳಿಸಲು ಬಿಡುವುದಿಲ್ಲವೆಂದು ಕಾರ್ಮಿಕರು ಪ್ರತಿಭಟನೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

click me!