ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಕಂಪನಿಯು ಖಾಲಿ ಇರುವ ಭೋದಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಬೆಂಗಳೂರು(ಫೆ.05): ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (Hindustan Aeronautics Limited - HAL) ಕಂಪನಿಯು ಖಾಲಿ ಇರುವ ಭೋದಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಟಿಜಿಟಿ ( Trained Graduate Teachers -TGT) ಮತ್ತು ಪಿಆರ್ಟಿ (Primary Teachers -PRT ) ಹುದ್ದೆಗಳು ಖಾಲಿ ಇದ್ದು, ಹುದ್ದೆಗಳು ಖಾಲಿ ಇದ್ದು, ಬಿಇ, ಬಿಟೆಕ್, ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 20, 2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://hal-india.co.in/ ಗೆ ಭೇಟಿ ನೀಡಬಹುದು.
ಒಟ್ಟು 21 ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ:
ಕನ್ನಡ TGT & PRT- 5
ಹಿಂದಿ ಟಿಜಿಟಿ -1
ಇಂಗ್ಲೀಷ್ TGT & PRT -4
ಗಣಿತ TGT ಮತ್ತು PRT -2
ವಿಜ್ಞಾನ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) -1
ಸಾಮಾಜಿಕ ಅಧ್ಯಯನಗಳು (Social Studies) PRT -1
ಭೂಗೋಳ (Geography) TGT -1
ಕಂಪ್ಯೂಟರ್ ಸೈನ್ಸ್ PRT -1
ದೈಹಿಕ ಶಿಕ್ಷಣ PRT -1
ಸಂಗೀತ -1
ನರ್ಸರಿ - 3
undefined
ಶೈಕ್ಷಣಿಕ ವಿದ್ಯಾರ್ಹತೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಯಾಯ ವಿಷಯಕ್ಕೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆ ಪಡೆದಿರಬೇಕು.
ಕನ್ನಡ TGT ಮತ್ತು PRT ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಎಡ್, ಕನ್ನಡದಲ್ಲಿ ಪದವಿ ಪಡೆದಿರಬೇಕು.
ಹಿಂದಿ ಟಿಜಿಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಎಡ್, ಹಿಂದಿಯಲ್ಲಿ ಪದವಿ ಪಡೆದಿರಬೇಕು.
ಇಂಗ್ಲೀಷ್ TGT ಮತ್ತು PRT ಹುದ್ದೆಗೆ ಅರ್ಜಿ ಸಲ್ಲಿಸುವವರು B.Ed, ಇಂಗ್ಲೀಷ್ ನಲ್ಲಿ ಪದವಿ ಪಡೆದಿರಬೇಕು.
ಗಣಿತ TGT ಮತ್ತು PRT ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಎಡ್, ಗಣಿತದಲ್ಲಿ ಪದವಿ ಪಡೆದಿರಬೇಕು.
ವಿಜ್ಞಾನ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ಹುದ್ದೆಗೆ ಅರ್ಜಿ ಸಲ್ಲಿಸುವವರು B.Ed, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿರಬೇಕು.
ಸಾಮಾಜಿಕ ಅಧ್ಯಯನಗಳು PRT ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಎಡ್, ಇತಿಹಾಸ, ಭೌತಶಾಸ್ತ್ರದಲ್ಲಿ ಪದವಿ ಪಡೆದಿರಬೇಕು.
ಭೂಗೋಳ TGT ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಎಡ್, ಭೂಗೋಳಶಾಸ್ತ್ರದಲ್ಲಿ ಪದವಿ ಪಡೆದಿರಬೇಕು.
ಕಂಪ್ಯೂಟರ್ ಸೈನ್ಸ್ PRT ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೊಮಾ, ಪದವಿ, B.E ಅಥವಾ B.Tech, M.Sc, MCA, BCA ಮಾಡಿರಬೇಕು.
ದೈಹಿಕ ಶಿಕ್ಷಣ PRT ಹುದ್ದೆಗೆ ಅರ್ಜಿ ಸಲ್ಲಿಸುವವರು ದೈಹಿಕ ಶಿಕ್ಷಣದಲ್ಲಿ ಪದವಿ
ಸಂಗೀತ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಂಗೀತದಲ್ಲಿ ಪದವಿ ಪಡೆದಿರಬೇಕು.
ನರ್ಸರಿ ಹುದ್ದೆಗೆ ಅರ್ಜಿ ಸಲ್ಲಿಸುವವರು NTT/ ಮಾಂಟೆಸ್ಸರಿಯೊಂದಿಗೆ ಪದವಿ ಪಡೆದಿರಬೇಕು.
ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 250 ರೂ ಅರ್ಜಿ ಶುಲ್ಕ ಪಾವತಿಸಬೇಕು. ಮಾತ್ರವಲ್ಲ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿಯು ಹೆಚ್‌ಎಎಲ್ ಗೆ ಸಂಬಂಧಿಸಿದ ಶೈಕ್ಷಣಿಕ ಪೋರ್ಟಲ್ https://career.halec.co.in/ , www.halec.co.in , www.halnewpublicschool.co.in, www.halgnanajyotischool.co.in ಮತ್ತು www.halindia.co.in ಈ ವೆಬ್‌ಸೈಟ್ ಗಳಲ್ಲಿ ಲಭ್ಯವಿದೆ.
ವೇತನ ವಿವರ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ.
ಟಿಜಿಟಿ- ಮಾಸಿಕ ₹ 61,000 ರಿಂದ 76,000 ರೂ.
ಪಿಆರ್ಟಿ-ಮಾಸಿಕ ₹ 51,000 ರಿಂದ 61,000 ರೂ.
ನರ್ಸರಿ-ಮಾಸಿಕ ₹ 33,500 ರೂ.
ವಯೋಮಿತಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ.
ಟಿಜಿಟಿ ಹುದ್ದೆಗೆ 45 ವರ್ಷ
ಪಿಆರ್ಟಿ ಹುದ್ದೆಗೆ 45 ವರ್ಷ
ನರ್ಸರಿ ಹುದ್ದೆಗೆ 40 ವರ್ಷ
ಆಯ್ಕೆ ಪ್ರಕ್ರಿಯೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ 21 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ಡೆಮೋ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗ ಸ್ಥಳ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ 21 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ 080-25235014/ 080-25400037 / 080-25220762/ 080-25236066 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.